ಕುರಿ
ಈ ವಿಷಯವನ್ನು ಇನ್ನೊಬ್ಬರ ಜೊತೆ ಹೇಳಿಕೊಳ್ಳಬೇಕಾ? ಅಥವಾ ಬೇಡವೋ ಎಂದು ಯೋಚಿಸಿ ತೆಲೆ ಕೆಟ್ಟು ಹೋಯ್ತು. ನನ್ನ ಮನಸ್ಸಿನ ಸಮಾಧಾನಕೊಸ್ಕರ ಇದ್ದನ್ನು ಗೀಚೋಣ ಅ೦ತಾ ತೀರ್ಮಾನಿಸಿದೆ.
ಈ ಎರಡು-ಮೂರು ದಿನಗಳಲ್ಲಿ ನನಗೆ ಕೆಲವೊಂದು ವಿಷಯಗಳು ಮನಸ್ಸಿನ ತು೦ಬಾ ಗೋಜಲುಗಳನ್ನು ಸೃಷ್ಟಿಸಿ ಮನಸ್ಸಿನ ನೆಮ್ಮದಿಯನ್ನೇ ಕಿತ್ತುಕೊ೦ಡವು. ಅದರಲ್ಲಿ ಮೊದಲನೆಯದು-ಇನ್ನೊಬ್ಬರ ಕೈ ಕಾಯುವುದು, ನಮ್ಮ ಕೆಲಸಗಳು ಎಲ್ಲೋ, ಯಾರ ಕೈಯಲ್ಲೋ ಹೋಗಿ ನಿ೦ತಿರುತ್ತವೆ, ಅವರ ಅಮೋಘ ಹಸ್ತಗಳಿಂದ ಅವಕ್ಕೆ ಒ೦ದು ಗತಿ ಕಾಣಿಸಬೇಕಗಿರುತ್ತೆ. ಆದ್ರೆ ಆ ವ್ಯಕ್ತಿ ಯಾವುದೋ ವಯ್ಯುಕ್ತಿಕ ಮನಸ್ತಾಪದಿಂದ ಅದನ್ನ ಅಲ್ಲೇ ನಿಲ್ಲಿಸಿರುತ್ತಾನೆ. ಆ ಮನಸ್ತಾಪಗಳಿಗೆ ನಾವು ಕಾರಣ ಅಲ್ಲದೆ ಇದ್ದರೂ ನಾವು ಅದರಿಂದ ನೋವನ್ನ ಅನುಭವಿಸಬೇಕಾಗುತ್ತೆ. ನಮಗೆ ಯಾಕೆ ಈ ಶಿಕ್ಷೆ? ಮುಂದೆ ಅವರಿಗೂ ಇದೆ ಸ್ಥಿತಿ ಬರಬಹುದಲ್ಲವೇ. ನನಗೆ ಕೆಲವೊಂದು ಸರಿ ನಗು ಬರುತ್ತೆ, ಏನಪ್ಪಾ ಅಂದ್ರೆ ಕೆಲವೊಬ್ಬರು ಎಲ್ಲಾ ತಮ್ಮಿಂದ ಆಗಿರೋದು, ಖುದ್ದು ಅವರೇ ಮಾಡಿರೋದು ಅಂತ ತಿಳಿದುಕೊ೦ಡಿರುತ್ತಾರೆ.
ಉದಾಹರಣೆ ಗೆ ನಮ್ಮ ಘನ ಸರ್ಕಾರ ಕೆಲವೊಂದು ಸೌಲಭ್ಯಗಳನ್ನು ಸರ್ವ ಜನರ ಉಪಯೋಗಕ್ಕಾಗಿ ಅ೦ತ ಜನ ಸಾಮಾನ್ಯರ ತೆರಿಗೆ ಹಣದಿಂದ ಕಲ್ಪಿಸಿಕೊಟ್ಟಿರುತ್ತೆ. ಹೀಗಿರುವಾಗ ಕೆಲವೊಬ್ಬ ಸರ್ವಾಧಿಕಾರಿಗಳು ತಮ್ಮ ಸ್ವಂತ ಹಣದಿ೦ದಾನೆ ಮಾಡಿರೋದು ಅಂತ ತಿಳಿದುಕೊಂಡರೆ ಜನಸಾಮಾನ್ಯರ ಪಾಡೇನು? ಇದೇ ತರ ಆದ್ರೆ ಜೀವನ ನಡೆಸೋದು ಹ್ಯಾಗೆ? ಸಾರ್ವಜನಿಕ ನಳಗಳು ಇರೋದು ಎಲ್ಲರಿಗಾಗಿ, ಆದ್ರೆ ಯಾವನೋ ಒಬ್ಬ ದೊಡ್ಡ ಜನ ಅಂತ ಅನಿಸಿಕೊ೦ಡವನು ತನ್ನ ಅಧಿಕಾರವನ್ನು ಉಪಯೋಗಿಸಿಕೊಂಡು ತನ್ನ ಸುಪರ್ದಿಗೆ ತೆಗೊಂಡ್ರೆ ನಾವೆಲ್ಲಿಗೆ ಹೋಗಬೇಕು?
ಇಲ್ಲಿ ಮ೦ಗ ಆದವರು ಯಾರು? ಇನ್ನು ಒಂದು ಬೇಸರದ ವಿಷಯ ಏನೂ ಅಂದ್ರೆ, ಕೆಲವೊಬ್ಬ ಜನಗಳು ಇಂತ ಸರ್ವಾಧಿಕಾರಿಗಳ ಜೊತೆಗೆ ಇರ್ತಾರೆ ಹಾಗೂ ಜನಸಾಮಾನ್ಯರ ನಡುವೆಯೂ ಇರ್ತಾರೆ. ನಿಜ ಹೇಳಬೇಕು ಅಂದ್ರೆ ಅವರೂ ಜನಸಾಮಾನ್ಯರೇ, ಅವ್ರು ತಮ್ಮ ತರಾನೆ ಇರೋ ಇನ್ನೊಬ್ಬ ವ್ಯಕ್ತಿಗೆ ಸಹಾಯ ಮಾಡೋದ್ರಲ್ಲಿ ತಪ್ಪೇನು ಇದೆ?
ಇನ್ನೂ ಒಂದು ವರ್ಗದ ಜನ ಇರ್ತಾರೆ. ಅವರು ಸ್ವಲ್ಪ ಸ್ವಾಭಿಮಾನಿಗಳು, ಸ್ವಲ್ಪವೇ ಸ್ವಲ್ಪ ಅಹ೦ಕಾರಿಗಳು. ಅವ್ರ ಹತ್ರ ಸ್ವಂತ ನಳ ಇರೋಲ್ಲ, ಇದ್ರೂ ಅದರಿಂದ ಒಂದೆರಡು ಹನಿ ನೀರು ಬರಬಹುದು ಅಷ್ಟೇ. ಇವರಿಗೆ ಸಾರ್ವಜನಿಕ ನಳದ ಅವಶ್ಯಕತೆ ತು೦ಬಾ ಇರುತ್ತೆ, ಅವರನ್ನೇ ನಂಬಿ ಇರೋ ಕೆಲವೊಬ್ಬ ಕುರಿಗಳು ಇರ್ತಾರೆ ಅವರಿಗಂತೂ ನಳಗಳು ಬೇಕೇ ಬೇಕು. ಯಾಕಂದ್ರೆ ಒಂದೆರಡು ಹನಿ ನೀರಲ್ಲಿ ಇವರ ಬಾಯಾರಿಕೆ ಇ೦ಗೊಲ್ಲ. ಆ ಸರ್ವಾಧಿಕಾರಿ ಗಳ ಹತ್ರನಂತೂ ಪುಷ್ಕಳವಾಗಿ ನೀರು ಇರುತ್ತೆ. ಪಾಪ ಈ ಕುರಿಗಳೂ ಕೂಡ ಜೀವಿಗಳು ತಾನೆ? ಅವಕ್ಕೂ ಕುಡಿಬೇಕು ಅನಿಸುತ್ತೆ. ಆದರೆ ಅಭಿಮಾನಿಗಳು ಅವುಗಳಿಗೆ ಯಜಮಾನರು ಯಥೇಚ್ಛ ನೀರನ್ನೂ ಕೊಡಲಾರರು ಅಥವಾ ತಮ್ಮ ಭಿಂಕ ಬಿಗುಮಾನಗಳನ್ನು ಬಿಟ್ಟು ಸರ್ವಾಧಿಕಾರಿಗಳ ಬಳಿಯೂ ಹೋಗಲಾರರು. ಈ ನಮ್ಮ ಕುರಿಗಳು ನೀರಿಗಾಗಿ ಹಪಹಪಿಸಿ ಕೊನೆಗೆ ಜೀವವನ್ನೂ ಬಿಟ್ಟರೆ ಅದರಲ್ಲಿ ವಿಶೇಷವೇನೂ ಇಲ್ಲ. ಇದೆಲ್ಲವನ್ನೂ ನೋಡುತ್ತಾ ತಮಗೆ ಸಂಬಂದವೇ ಇಲ್ಲವೇನೋ ಅನ್ನುವ ಹಾಗೆ ಇರೋ ನಮ್ಮ ಸರ್ವಾಧಿಕಾರಿಗಳ ಶಿಷ್ಯಂದಿರು ಬೇರೆ.
ಇದರಲ್ಲಿ ತಪ್ಪು ಯಾರದ್ದು?
ಘನ ಸರ್ಕಾರದ್ದಾ?
ಸರ್ವಾಧಿಕಾರಿಯದ್ದಾ?
ಅವರ ಶಿಷ್ಯರದ್ಡಾ?
ನಮ್ಮ ಸ್ವಾಭಿಮಾನಿಗಳದ್ದಾ?
ಅಥವಾ ಕುರಿಗಳದ್ದಾ?
ನನ್ನ ಪ್ರಕಾರ ಕುರಿಗಳದ್ದೇ.
Nagaraj,
ReplyDeletePeople should not relate one thing with other. If he is a gentleman then he will express his sadness on that matter itself
DUDE I GOT CONFUSED WITH COMMENT MADE BY SANTU
ReplyDeleteಏನಪ್ಪಾ ನಿನ್ನ ಗೊಂದಲ?
Deleteಏನಪ್ಪಾ ನಿನ್ನ ಗೊಂದಲ?
DeleteI think he want to say not to mix things,
ReplyDelete