Wednesday, July 7, 2010

ಇನ್ನೊಂದು ವಿಷಯ ಪ್ರಸ್ತಾಪಿಸಬೇಕು ಅನಿಸ್ತಿದೆ.

ನಮ್ಮ ಮಹಾವಿದ್ಯಾಲಯ ದಲ್ಲಿ ಹೊಸ ವಿದ್ಯಾರ್ಥಿ ನಿಲಯಗಳನ್ನ ಕಟ್ಟಿದಾರೆ, ನೋಡೋದಕ್ಕೆ ತು೦ಬಾ ಚೆನ್ನಾಗಿವೆ ಆದ್ರೆ, ಎನಿರಬೇಕೋ ಅದು ಇಲ್ಲ. ಇಡೀ ನಿಲಯದಲ್ಲಿ ಒಂದೇ ಒಂದು ಬಟ್ಟೆ ಒಗಿಯೋ ಕಲ್ಲು ಇಲ್ಲ. ನನಗಂತೂ ತುಂಬಾನೇ ಕಷ್ಟ ಆಗ್ತಾ ಇದೆ. ಮೊದಲಾದರೆ ಹ್ಯಾಗೋ ಹಳೆ ನಿಲಯಗಳಿಗೆ ಹೋಗಿ ಒಗೆದುಕೊಂಡು ಬರ್ತಾ ಇದ್ದೆ, ಆದ್ರೆ ಈಗ ಮಳೆ ಸುರಿತಾ ಇರುತ್ತೆ, ಹೋಗೋದಿಕ್ಕೆ ಕಷ್ಟ ಆಗ್ತಿದೆ. ಮೊನ್ನೆ ಹೀಗೇ ಆಯಿತು. ಮಂಜುನಾಥ್ ಜೊತೆ ಬಟ್ಟೆ ಒಗೆಯುದಿಕ್ಕೆ ಹೋಗೋಣ ಅಂತ ಎಲ್ಲ ತಯಾರಿ ಆಗಿತ್ತು, ಮಳೆ ಶುರು ಆಯಿತು ನೋಡಿ ಹೊರಗಡೆ ಹೋಗೋದಿಕ್ಕೆ ಆಗ್ಲೇ ಇಲ್ಲ. ಕೊನೆಗೆ ನಮ್ಮ ನಿಲಯದಲ್ಲೇ ಮುಗಿಸೋಣ ಅಂತ ಆಯ್ತು. ನನಗ್ಯಾಕೋ ಆ ಸ್ನಾನದ ಮನೇಲಿ ಬಟ್ಟೆ ಒಗಿಯೋದಕ್ಕೆ ಮನಸ್ಸು ಒಪ್ಪಲ್ಲಿಲ್ಲ. ಕೊನೆಗೆ ಕೊಡೆ ತಗೊಂಡು ಹೋಗೆ ಬಿಟ್ಟೆ.

ಇದರಲ್ಲಿ ಏನಿದೆ ವಿಶೇಷ?

ಏನಪ್ಪಾ ಅ೦ದ್ರೆ ಈ ನಮ್ ಗುತ್ತಿಗೆದಾರ ಇದಾನಲ್ಲ ಬಿ ಜಿ ಶಿರ್ಕೆ, ಸರಿ ಇಲ್ಲ. ಒ೦ದು ವಿದ್ಯಾರ್ಥಿ ನಿಲಯ ಅಂದ್ರೆ ಬೇಕಾಗಿರೋ ಮುಖ್ಯವಾದ ಸೌಲಭ್ಯಗಳನ್ನೇ ಬಿಟ್ಟಿದಾನೆ. ಬಟ್ಟೆ ಒಗೆಯೋ ಜಾಗ, ಕೊನೆ ಪಕ್ಷ ಒಣಗಿಸೋಕಾದ್ರೂ ಬೇಡ್ವಾ? ಇದೆಲ್ಲ ಸಿಕ್ಕಾಪಟ್ಟೆ ಉನ್ನತ ವರ್ಗದವರಿಗೆ ಹೇಳಿ ಮಾಡಿಸಿದ ಹಾಗಿದೆ.

ಇನ್ನೂ ಹೇಳ್ತಾ ಹೋದ್ರೆ ಎಣಿಸಲಿಕ್ಕೆ ಆಗದೆ ಇರೋ ಅಷ್ಟು ಕೊರತೆಗಳಿವೆ. ಎಲ್ಲದನ್ನೂ ಪಟ್ಟಿ ಮಾಡೋದಿಕ್ಕೆ ಒಂದು "ಗೀಚು" (blog) ಸಾಕಾಗೋಲ್ಲ .

2 comments:

  1. Nagaraj, what you said is true. ಸಿಂಹಾಸನದಲ್ಲಿ ಇರೋ ಭಿಕ್ಷುಕ, ಅರಮನೆಯಲ್ಲಿ ಇರೋ ಭಿಕಾರಿ ತರ ಆಗಿದೆ ನಮ್ಮ ಪರಿಸ್ಥಿತಿ.

    ReplyDelete
  2. Wow!!! Nice piece of ROOPAKA alankara

    ReplyDelete