ಕನ್ನಡ ಮಾಧ್ಯಮದಲ್ಲಿ ಓದಬೇಕು ಸರಿ. ಆದರೆ ಅದಕ್ಕೆ ಸರಿಯಾದ ವ್ಯವಸ್ಥೆ ಇದೆಯಾ ನಮ್ಮಲ್ಲಿ ಅನ್ನೋದು ಮೊದಲು ಯೋಚಿಸಬೇಕಾಗಿದೆ! ಸರಿ ಸರ್ಕಾರ ನಾಳೆಯಿಂದಲೇ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಅಂತ ಒಂದು ಆದೇಶ ಹೊರಡಿಸುತ್ತೆ ಅಂತ ಇಟ್ಕೊಳ್ಳಿ. ಅದಕ್ಕೆ ತಕ್ಕಹಾಗೆ ನಮ್ಮಲ್ಲಿ ಸರಿಯಾದ ವ್ಯವಸ್ಥೆ ಇದೆಯಾ ನಮ್ಮಲ್ಲಿ, ಕನ್ನಡದಲ್ಲಿ ಸರಿಯಾಗಿ ಪಾಠ ಮಾಡೋ ಶಿಕ್ಷಕರು ಇದಾರ ನಮ್ಮಲ್ಲಿ? ವಿಜ್ಞಾನ ವಿಷಯಗಳ ಬಗ್ಗೆ ಕನ್ನಡದಲ್ಲಿ ಆಕರ ಗ್ರಂಥಗಳು ಇವೆಯೇ? ಕನ್ನಡ ಮಾಧ್ಯಮದಲ್ಲಿ ಓದೋದು ಅಂದ್ರೆ ಬರೀ ಸಾಹಿತ್ಯವನ್ನೇ ಕಲಿಯೋದು ಅಲ್ಲ ತಾನೇ? ನಿಜವಾಗಿಯೂ ನಮ್ಮ ಪರಿಸ್ಥಿತಿ ನೋಡಿ ಬೇಸರ ಆಗುತ್ತೆ. ಪಕ್ಕದ ಆಂದ್ರದಲ್ಲಿ ಪ್ರಥಮದರ್ಜೆ ಕಾಲೇಜಿನಲ್ಲೂ ತೆಲುಗು ಮಾಧ್ಯಮದಲ್ಲೇ ವಿಜ್ಞಾನವನ್ನು ಕಲಿಸಿಕೊಡ್ತಾ ಇದಾರೆ. ನಮ್ಮಲ್ಲಿ ನಾವು ಪಿಯುಸಿಯನ್ನೂ ಸಹ ಆಂಗ್ಲದಲ್ಲೇ ಕಲೀಬೇಕಾಗಿದೆ (ವಿಜ್ಞಾನ ವಿಭಾಗ).
ನಿಜವಾಗಿಯೂ ನಾವು ಮಾಡುತ್ತಿರುವುದು ಸರಿಯೇ? ನಮ್ಮ ಭಾಷೆಯನ್ನು ಬಳಸದೇ ಆಂಗ್ಲ ಭಾಷೆಗೆ ಒಗ್ಗಿಕೊಂಡಿರುವ ಫಲ ಏನು? ನನ್ನ ಪ್ರಕಾರ ಇದರಿಂದ ನಮ್ಮ ದೇಶಕ್ಕೆ ಆದ ಉಪಯೋಗ ತೀರ ಕಮ್ಮಿ. ನಮ್ಮ ಶಿಕ್ಷಣ ಮಾಧ್ಯಮದ ಫಲವಾಗಿ ಇಂದು ನಮ್ಮ ಪ್ರತಿಭಾನ್ವಿತ ಜನ ಬೇರೆ ದೇಶಕ್ಕೆ, ಅದರ ಒಳಿತಿಗೆ ದುಡೀತಾ ಇದಾರೆ ಅಷ್ಟೇ. ಐ ಟಿ ಕೂಲಿಗಳ ಸೃಷ್ಟಿಯಾಗ್ತಾ ಇದೆ ಅಷ್ಟೇ. ನಿಜವಾಗಿಯೂ ನಾವು ಮುಂದುವರೆಯುತ್ತಾ ಇದೀವಾ? ಮುಂದುವರೆಯಲಿಕ್ಕೆ, ಅಭಿವೃದ್ಧಿಹೊಂದಲಿಕ್ಕೆ ಆಂಗ್ಲ ಮಾಧ್ಯಮವೇ ಬೇಕಾ? ಹಾಗೆ ನೋಡೋದಾದರೆ, ಬಹುತೇಕ ಯುರೋಪಿಯನ್ ರಾಷ್ಟ್ರಗಳಲ್ಲಿ, ಅವರ ಮಾತೃಭಾಷೆಯೇ ಶಿಕ್ಷಣ ಮಾಧ್ಯಮ. ಆದರೆ ಅಲ್ಲಿನ ಜನಜೀವನ ಮಟ್ಟ ಉನ್ನತವಾಗಿಲ್ಲವೇ? ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸಿಲ್ಲವೇ? ನೀವು ನಂಬ್ತೀರೋ ಬಿಡ್ತೀರೋ, ಬಹುತೇಕ ಯುರೋಪಿಯನ್ ಪ್ರಜೆಗಳು ಒಂದೇ ಒಂದು ಆಂಗ್ಲ ಪದದ ಅರ್ಥವನ್ನು ಹೇಳಲು ಶಕ್ಯರಲ್ಲ. ಜನಸಾಮಾನ್ಯರನ್ನು ಒಂದೆಡೆ ಸರಿಸಿ, ಕಾಲೇಜು ಪ್ರಾದ್ಯಾಪಕರು, ವೈದ್ಯರು ಹಾಗೂ ಇನ್ನಿತರೇ ಉನ್ನತ ವ್ಯಾಸಂಗ ಮಾಡಿರೋ ಜನರೂ ಸಹ ಆಂಗ್ಲ ಭಾಷೆಯಲ್ಲಿ ಮಾತನಾಡಲಾರರು. ಇದರರ್ಥ ಅವರಿಗೆ ಏನು ತಿಳಿದಿಲ್ಲ ಎಂದಲ್ಲ. ನಮಗಿಂತ ಸಾವಿರ ಪಾಲು ಹೆಚ್ಚಿನ ಜ್ಞಾನ ಅವರಿಗಿದೆ. ಭಾರತವೊಂದೆ ಅನಿಸುತ್ತೆ ವಸಾಹತುಶಾಯಿ ಪಳೆಯುಳಿಕೆಯಾದ ಆಂಗ್ಲ ಭಾಷೆಯನ್ನು ಅಪ್ಪಿಕೊಂಡಿರುವುದು. ಛೆ! ಎಷ್ಟು ಮುಜುಗರ ಆಗುತ್ತೆ!
ಇದಕೆಲ್ಲಾ ಕಾರಣ ಏನು? ನಮ್ಮ ಭಾಷೆಯ ಕಡೆಗೆ ನಮಗಿರೋ ದಿವ್ಯ ನಿರ್ಲಕ್ಷವೇ? ಖಂಡಿತ ಅಲ್ಲ!! ನಮ್ಮನ್ನು ಆಂಗ್ಲದೆಡೆಗೆ ತಳ್ಳಿದ ನಮ್ಮ ಹಳೆಯ ತೆಲೆಗಳು. ಭಾಷೆಯ ಉದ್ಧಾರವೆಂದರೆ ಬರೀ ಸಾಹಿತ್ಯ ಸೃಷ್ಟಿ ಎಂದು ನಮ್ಮನ್ನು ತಪ್ಪು ದಾರಿಗೆ ತಳ್ಳಿದ ಕೆಲವು ಜನ. ಕನ್ನಡ ಕನ್ನಡ ಎಂದು ಬಡಿದುಕೊಂಡರೆ ಏನೂ ಉಪಯೋಗ ಇಲ್ಲ, ಕನ್ನಡವನ್ನು ಜನಜೀವನ ದಲ್ಲಿ ಬಳಸಬೇಕು. ಎಲ್ಲೆಲ್ಲೂ ಕನ್ನಡ ಇರಬೇಕು, ವಿಜ್ಞಾನ, ತಂತ್ರಜ್ಞಾನ, ಆರೋಗ್ಯ, ಸಾಹಿತ್ಯ ಎಲ್ಲದರಲ್ಲೂ ಕನ್ನಡ ಇರಬೇಕು. ನಮ್ಮ ಕನ್ನಡ ಸಾಹಿತ್ಯ ಉತ್ಕೃಷ್ಟವಾಗಿದೆ ಅದಕ್ಕೆ ಕಾರಣಕರ್ತರು ಕನ್ನಡದ ಕವಿಗಳು. ಅವರ ಕೆಲಸ ಅವರು ಮಾಡಿದ್ರು. ಆದರೆ ಇನ್ನಿತರೇ ಕ್ಷೇತ್ರಗಳು ಕನ್ನಡವನ್ನು ಅಸ್ಪೃಶ್ಯದ ತರ ನೋಡಿದ್ದಕ್ಕೆ ಕಾರಣ ಏನು? ನಿಜವಾದ ದಲಿತ ಅಂದರೆ ಅದು ನನ್ನ ಕನ್ನಡ ಭಾಷೆ. ಶತಮಾನಗಳಿಂದ ತುಳಿಯುತ್ತಲೇ ಬಂದ ಸಮಾಜದಲ್ಲಿ ಕಲಿತವರು ಎಂಬ ಉನ್ನತ ವರ್ಗವೇ ಇದಕ್ಕೆ ಕಾರಣ ಎಂದು ನನ್ನ ಭಾವನೆ.
ನಮ್ಮ ದೇಶದ ಜನರೇ ವಿಚಿತ್ರ, ಸ್ವಲ್ಪ ಓದಿಕೊಂಡ್ ಬಿಟ್ರೆ ಸಾಕು, ತಮ್ಮ ಭಾಷೆಯನ್ನು, ತಮ್ಮತನವನ್ನೇ ಮರೆತುಬಿಡ್ತಾರೆ. ಇದು ಅತೀ ಎನಿಸಿದರೂ, ನಮ್ಮ ಶಿಕ್ಷಣ ವ್ಯವಸ್ಥೆ ಹಾಗೆ ವರ್ತಿಸುವ ಹಾಗೆ ಮಾಡಿಬಿಡುತ್ತದೆ ಎನ್ನೋದು ನನ್ನ ಅಭಿಮತ.
ನಮ್ಮ ಇಂದಿನ ಆಂಗ್ಲ ಭಾಷೆಯ ಅವಲಂಬನೆಯನ್ನು ತಡೆಯುವುದಕ್ಕೆ ಆಗ್ತಾ ಇರಲೇ ಇಲ್ವಾ? ಈ ಪ್ರಶ್ನೆಗೆ ನನ್ನಲ್ಲಿ ಸ್ಪಷ್ಟವಾದ ಉತ್ತರ ಇಲ್ಲ.
ಕೊನೇ ಮಾತು: ಕನ್ನಡವನ್ನು ಉಳಿಸೋದು ಅಂದ್ರೆ ಒಂದಿಷ್ಟು ಕತೆಗಳು, ಕವನಗಳು ಬರೆಯೋದಲ್ಲ. ಪ್ರತಿಯೊಂದರಲ್ಲೂ ಕನ್ನಡವನ್ನು ಬಳಸೋದು. ಕನ್ನಡ ಅಂದ್ರೆ ಬರೀ ಸಾಹಿತ್ಯ ಅಲ್ಲಾ ಅಲ್ವ? ಮತ್ತೇಕೆ ಬರೀ ಸಾಹಿತಿಗಳು ಹೋರಾಡಬೇಕು ಕನ್ನಡ ಮಾಧ್ಯಮಕ್ಕಾಗಿ!!!?? ಪಾಪ ಅನಿಸ್ತಿದೆ!!!

No comments:
Post a Comment