ನಮ್ಮ ರಾಜ್ಯದ ರಾಜಕಾರಣಿಗಳಿಗೆ, ಜನರಿಗೆ ತಾಕತ್ತು ಅನ್ನೋದೇ ಇಲ್ವಾ? ಈಗ ಯಾಕೆ ಈ ಥರ ಯೋಚನೆ ಬಂತಂದ್ರೆ, ನಮ್ಮ ರಾಜ್ಯಕ್ಕೆ ರೈಲು ಮಾರ್ಗಗಳಲ್ಲಿ, ಹಾಗೂ ರೈಲಿಗೆ ಸಂಬಂದಿಸಿದ ವಿಚಾರಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ನೆನೆಸಿಕೊಂಡು ಬೇಸರ ಆಯಿತು. ಬ್ರಿಟಿಷರ ಕಾಲದಲ್ಲಿ ಆಗಿದ್ದ ಒಂದೇ ಮಾರ್ಗವನ್ನು ಇಟ್ಟುಕೊಂಡು ಜೀವನ ಸಾಗಿಸುತ್ತ ಇದ್ದೀವಲ್ಲ ಇನ್ನೂ. ಛೇ ...
ಮಂಗಳೂರು ಮತ್ತು ಬೆಂಗಳೂರಿನ ನಡುವೆ ಸಂಚಾರ ಮತ್ತೆ ಪ್ರಾರಂಭವಾಗಿಲಿಕ್ಕೆ ದೊಡ್ಡ ಹೋರಾಟವನ್ನೇ ನಡೆಸಬೇಕಾಗಿ ಬಂತು. ಆದರೂ ನಮಗೆ ಸಿಕ್ಕಿದ್ದು ಬಹಳ ಜನಕ್ಕೆ ಉಪಯೋಗವಾಗದ ಎರಡು ರೈಲುಗಳು. ನಮ್ಮ ದುರಾದೃಷ್ಟದ ಪರಮಾವದಿಯನ್ನೇ ನೋಡುತ್ತಿದ್ದೇವೆ, ಸಿಕ್ಕ ಎರಡು ರೈಲುಗಳ ಪೈಕಿ ಒಂದು, ಬೆಂಗಳೂರು ತಲುಪಲಿಕ್ಕೆ ಬರೋಬ್ಬರಿ ೧೨ ಗಂಟೆಗಳನ್ನೇ ತಗೆದುಕೊಳ್ಳುತ್ತದೆ. ಹತ್ತಿರದ ಮಾರ್ಗವಾದ ಹಾಸನ-ತುಮಕೂರು-ಬೆಂಗಳೂರು ಬಿಟ್ಟು, ಮೈಸೂರು ಮಾರ್ಗವಾಗಿ ಚಲಿಸುತ್ತದೆ. ಸರ್ಕಾರದವರಿಗೆ ಮೈಸೂರಿಗೂ ಒಂದು ರೈಲನ್ನು ಓದಿಸಬೇಕಿಂದರೆ. ಅದನ್ನು ಲಿಂಕ್ ರೈಲಿನ ತರಹ ಮಾಡಬಹುದಿತ್ತು. ಈಗ ಆಗಿರೋದು ಹೇಗಾಗಿದೆ ಅಂದರೆ, ಕೊಂಕಣ ಸುತ್ತಿ ಮೈಲಾರಕ್ಕೆ ಹೋದ ಹಾಗೆ. ಇದಕ್ಕೆ ಯಾವ ರಾಜಕಾರಣಿಗಳು ತೆಲೆನೇ ಕೆಡಿಸಿಕೊಂಡ ಹಾಗೆ ಕಾಣಿಸ್ತ ಇಲ್ಲ.
ಆಮೇಲೆ ಇನ್ನೊಂದು ಮಾರ್ಗವೆಂದರೆ, ಬೆಂಗಳೂರು-ದಾವಣಗೆರೆ. ಇಲ್ಲಿಯೂ ಕೂಡ ರೈಲು ಬಳಸಿಕೊಂಡು ಸಾಗುತ್ತಿದೆ. ಹತ್ತಿರದ ಚಿತ್ರದುರ್ಗ ಮಾರ್ಗವನ್ನು ಬಿಟ್ಟು ದೂರದ ಕಡೂರು ಮಾರ್ಗದಲ್ಲಿ ಚಲಿಸುತ್ತಿದೆ. ಚಿತ್ರದುರ್ಗ ಮಾರ್ಗವನ್ನು ಮಾಡುವುದರಿಂದ ಕನಿಷ್ಠ ೬೦ ಕಿ. ಮಿ. ಉಳಿತಾಯವಾಗುವುದರ ಜೊತೆಗೆ ಚಿತ್ರದುರ್ಗಕ್ಕೆ ಹತ್ತಿರವಾದ ಹಾಗೂ ನೇರವಾದ ಮಾರ್ಗವನ್ನು ರಚಿಸಿದ೦ತೆ ಆಗುವುದು. ಮೇಲಾಗಿ ಮುಂಬೈ-ಬೆಂಗಳೂರಿನ ದೂರವೂ ಕಡಿಮೆಯಾಗುವುದು. ಈ ಮಾರ್ಗದ ವಿಚಾರವನ್ನು ನಾನು ೭-೮ ತರಗತಿಯ ವಿದ್ಯಾರ್ಥಿಯಾಗಿರುವಗಿನಿಂದ ಕೇಳುತ್ತಿದ್ದೇನೆ. ಇನ್ನೂ ಇದು ಕಾರ್ಯರೂಪಕ್ಕೆ ಬಂದಿಲ್ಲ. ಪ್ರತಿ ಬಾರಿಯೂ ಬಜೆಟ್ ಮಂಡಿಸಿದಾಗ ಒಂದೆರಡು ಕೋಟಿಗಳನ್ನು ಕೊಟ್ಟು ಸುಮ್ಮನಿರಿಸಲಾಗುತ್ತೆ. ಕೊಟ್ಟೂರು-ಹರಿಹರದ ಮಾರ್ಗ ಮುಗಿಯಲು ಇನ್ನೆಷ್ಟು ಸಮಯ ಬೇಕೋ? ಕಡೂರು-ಚಿಕ್ಕಮಗಳೂರಿನ ಕಥೆಯೂ ಇದೇ, ಕೊಡಗಿಗೆ ಇನ್ನೂ ಒಂದು ಮಾರ್ಗವನ್ನು ಕಲ್ಪಿಸಲಾಗಲಿಲ್ಲ. ಏನೋ ಬ್ರಿಟಿಷರು ಒಂದೆರಡು ಮಾರ್ಗವನ್ನು ಮಾಡಿಟ್ಟು ಹೋದರು, ಇನ್ನೂ ಅದನ್ನೇ ಇಟ್ಟುಕೊಂಡಿದ್ದೇವೆ. ನಮ್ಮ ರಾಜ್ಯದಲ್ಲಿ ಹಾದು-ಹೋಗುವ ಯಾವುದೇ ಮಾರ್ಗವನ್ನು ವಿದ್ಯುದೀಕರಣವನ್ನು ಇನ್ನೂ ಮಾಡಿಲ್ಲ. ಹಾಗೆ ನೋಡಿದರೆ ನಮ್ಮ ರಾಜ್ಯವು ಪ್ರತಿ ರೈಲು ಯೋಜನೆಯಲ್ಲಿ ಪಾಲುದಾರಿಕೆ ವಹಿಸಿಕೊ೦ಡಿದೆ (ನನಗೆ ತಿಳಿದಮಟ್ಟಿಗೆ ). ನಾವಿನ್ನೂ ರೈಲು ಸಂಪರ್ಕದ ವಿಚಾರಕ್ಕೆ ಬಂದಾಗ ಕನಿಷ್ಠ ೧೫-೨೦ ವರ್ಷ ಹಿಂದೆ ಇದ್ದೇವೆ ಅಂದರೆ ಅತಿಶಯೋಕ್ತಿಯಾಗಲಾರದು.
ಕದಂಬ, ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ, ವಿಜಯನಗರ ಸಾಮ್ರಾಜ್ಯಗಳ ವೀರ-ಶೂರರು, ಜನಾನುರಗಿಗಳೂ ಆಗಿದ್ದ ರಾಜರುಗಳನ್ನು ಕಂಡ ಈ ನಾಡಿಗೆ ಅದರ ಒಳಿತಿಗಾಗಿ ಹೋರಾಡುವ ಒಬ್ಬನೇ ಒಬ್ಬ ರಾಜಕಾರಣಿ ಸಿಗದಿರುವುದು ನಮ್ಮಗಳ ದುರಾದೃಷ್ಟ. ಆಣೆಕಟ್ಟು ಕಟ್ಟಲಿಕ್ಕೆ ಅರಮನೆಯ ಚಿನ್ನಾಭರಣಗಳನ್ನು ಒತ್ತೆ ಇತ್ತ ಮೈಸೂರು ಒಡೆಯರಂತಹ ಆಳುವುವರನ್ನು ಪಡೆಯುವುದು ನಮ್ಮ ಹಣೆಯಲ್ಲಿ ಬರೆದಿಲ್ಲವೇನೋ.
ಇದೆ ಅಲ್ಲವೇ ದುರಾದೃಷ್ಟದ ಪರಮಾವಧಿ !!

Even though I am not from mangalore I know what went wrong.. You have to blame yourself/mangalore ppl for delay.. It started with bus operator who protested railway network between mangalore and bengaluru.. private bus owners who pressure on MP and never let this project happen. There are the biggest bus lobbiest in south canara, aren't they? They probably have to shut down 500-1000private buses if there is direct rail between manalore and bengaluru. Why do they want to lose their business? and you ppl keep electing useless MPs (danajakumar) for election after election. They probably bribed enough to MP. if you don't have rail it's because selfish greedy bus operator and corrupt politician that you voted.
ReplyDelete