Sunday, May 19, 2013

ನಮ್ಮ ಮೋದಿ

ಮೊನ್ನೆ ನಮ್ಮ ಮೋದಿಯವರು ಬೆಂಗಳೂರಿಗೆ ಭೇಟಿ ಕೊಟ್ಟಾಗ ಅವರ ಭಾಷಣವನ್ನು ಕಿವಿಯಾರೆ ಕೇಳಿ, ಅವರನ್ನು ಕಣ್ತು೦ಬಾ ನೋಡಲು ಹೋಗಿದ್ದೆ. ಮಾರನೆಯ ದಿನ ಆ ಕಾರ್ಯಕ್ರಮದ ಬಗ್ಗೆ ಅವರ ಮಧ್ಯಮ ಮಿತ್ರರು ಏನು ಬರೆದಿರಬಹುದೆಂಬ ಕುತೂಹಲ ಕ್ಕಾಗಿ ದಿನ ಪತ್ರಿಕೆ ಗಳನ್ನೂ ತಿರುವಿ ಹಾಕಿದಾಗ ಬೇಸರವಾಯಿತು. ಈ ವರದಿಗಾರರು ಲೋಪಗಳನ್ನು ಹುಡುಕುವುದರಲ್ಲೇ ತೊಡಗಿದ್ದು ಕಂಡು ಬಂತು. ನನ್ನಲ್ಲಿ ಉದ್ಭವವಾದ ಕೆಲ ಪ್ರಶ್ನೆಗಳು ಇಂತಿವೆ

೧. ಮೋದಿ ತಮ್ಮ ಭಾಷಣದ ಉದ್ದಕೂ ಬರಿ ಕಾಂಗ್ರೆಸ್ ನ್ನು ಗುರಿಯಾಗಿಸಿಕೊಡಿದ್ದರ ಬಗ್ಗೆ ಆಕ್ಷೇಪ ಎತ್ತಲಾಗಿತ್ತು. ಅಲ್ಲಾರಿ, ಅವ್ರೆ ಚುನಾವಣೆಗೂ ಮುಂಚೆಯೇ ಕಾಂಗ್ರೆಸ್ ಬಹುಮತ ಗಳಿಸಿ ಏಕೈಕ ದೊಡ್ಡ ಪಕ್ಷವಾಗಿ ಹೊರಮೊಮ್ಮುತ್ತದೆ ಅಂತ ಹೇಳಿದ ಮೇಲೆ, ಬುದ್ಧಿವಂತರಾದವರು (ತಮ್ಮ ಎದುರಾಳಿ ಯಾರೆಂದು ತಿಳಿದಮೇಲೂ) ಚಳ್ಳೆ-ಪಿಳ್ಳೆ ಗಳ ಬಗ್ಗೆ ಮಾತಾಡುತ್ತರಾ?

೨. ಅವರು ತಮ್ಮ ಭಾಷಣ ದಲ್ಲಿ ಯಡ್ಡಿ ಯ ಬಗ್ಗೆ ಮಾತಾಡಲಿಲ್ಲ ಎಂದೂ ಕೆಲವೊಂದು ಪತ್ರಿಕೆ ಗಳು ಬರೆದಿದ್ದವು. ಯಡ್ಡಿಯ ಬಗ್ಗೆ ಪ್ರಸ್ತಾಪ ಮಾಡಲಿಕ್ಕೆ ಅವನೇನು ಉಕ್ಕಿನ ಮನುಷ್ಯ ಎಂದೇ ಪ್ರಖ್ಯಾತಿಯಗಿದ್ದ ಪಟೇಲ್ ರೇ?, ದೇಶ ಕಂಡ ಸರಳ ಪ್ರಧಾನಿ ಶಾಸ್ತ್ರೀಜೀ ನೇ? ಅಥವಾ ವಿಧಾನಸೌದ ಕಟ್ಟಿಸಿದ ಕೆಂಗಲ್ ಹನುಮಂತರಾಯರೇ ಇಲ್ಲ ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ನಿಜಲಿಂಗಪ್ಪನವರೇ?. ಮರಿ ಪುಡಾರಿ ಗಳ ಬಗ್ಗೆ ಮಾತನಾಡದಿದ್ದರೆ ಯಾರಿಗೂ ನಷ್ಟವಿಲ್ಲ. ಏನಾದರೂ ನಷ್ಟವಾಗಿದ್ದರೆ ಅದು ಪತ್ರಿಕೆಯವರಿಗೇ ಇರಬೇಕು.

೩. ಯಾವುದೋ ಒಂದು ಪತ್ರಿಕೆ ಯಲ್ಲಿ ಬಂದಿತ್ತು, ಭಾಷಣ ಮುಗಿದ ಮೇಲೆ ಮೋದಿಗೆ ವಾಪಸ್ ಹೊರಡಲು ಜಾಗ ಮಾಡಿ ಕೊಡಲು ಜನತೆ ಯನ್ನು ಅರ್ದ ಗಂಟೆಗೂ ಹೆಚ್ಚು ಹೊತ್ತು ಕ್ರೀಡಾಂಗಣದಲ್ಲೇ ಕಾಯಿಸಲಾಯಿತು ಎಂದು. ಇದೊಂದು ಹಸಿ ಸುಳ್ಳು, ನಾನೇ ಅಲ್ಲಿ ಇದ್ದೇನಲ್ಲ, ಬರಿ ಐದು ನಿಮಿಷದಲ್ಲಿ ಮೋದಿಜೀ ಅಲ್ಲಿಂದ ನಿರ್ಗಮಿಸಿದರು. ಮತ್ತೆ ಜನ ಒಬ್ಬಬ್ಬರಾಗಿ ತಮ್ಮ-ತಮ್ಮ ಗಮ್ಯವನ್ನು ಸೇರಲು ಹೊರಟರು.

ಇವು ಕೆಲವು ಉದಾಹರಣೆಗಳಷ್ಟೇ. ಈ ಮಾಧ್ಯಮದವರಿಗೆ ಮೋದಿ ಯನ್ನು ತೆಗಳುವುದೇ ಕೆಲಸವಾಗಿಬಿಟ್ಟಿದೆ.


2 comments:

  1. joke. hypocrite you peach karnataka ppl have no pride for state but you shameless worry about modi image and what other talk against him..what kind of self-conscious do you have?? have some integrity (do what you say and say what you do).. i reckon your pride for state is only limited to first mangalore, then modi supporters, then may your caste.. as a kinndiaga i am ashamed of own ppl because i think we are either communal, castiest, political obsessive, most superstitious, docile animal, easy to fool with lie and hype, (most important) ignorant, lack instinct power (means don't know what is good or bad).. we are basically have no shame, no self-respect or no pride.. we are good at pulling own ppl legs. right?

    ReplyDelete
  2. ನೀವು ಆ ರೀತಿ ಇರಬಹುದು.

    ನಾನು ಯಾವುದೋ ಒಂದು ಊರಿಗೆ ಸೀಮಿತವಾಗಿರಲು ಬಯಸುವುದಿಲ್ಲ. ಮೇಲಾಗಿ ಹುಟ್ಟಿದ ಊರು ಮಂಗಳೂರೂ ಅಲ್ಲ. ಎಲ್ಲೋ ಹುಟ್ಟಿದೆ ಮತ್ತೆಲ್ಲೋ ಬೆಳೆದೆಯಷ್ಟೇ.

    ಆಮೇಲೆ ನನಗೆ ನಮ್ಮ ರಾಜ್ಯದ ಮೇಲೆ ನನ್ನ ಭಾಷೆಯ ಮೇಲೆ, ನಮ್ಮ ಜನರ ಮೇಲೆ ಅಭಿಮಾನ ಇದೆ, ಆದರೆ ದುರಭಿಮಾನ ಖಂಡಿತ ಇಲ್ಲ. ನನ್ನ ಲೇಖನ ಮೋದಿಯವರನ್ನು ಹೊಗಳಲು ಬರೆದದ್ದಲ್ಲ, ವಸ್ತುನಿಷ್ಠವಾಗಿ ವರದಿ ಮಾಡಲು ಬರದೆ ಇರುವ ನಮ್ಮ ಕೆಲವು ಮಾಧ್ಯಮಗಳ ಬಗ್ಗೆ ನನ್ನ ವಿರೋಧ ವ್ಯಕ್ತಪಡಿಸಲಷ್ಟೇ

    ReplyDelete