ಇಂದು ಅವನನ್ನು ನೆನೆಸಿಕೊಂಡೆ, ಅವನು ಹಾಗೂ ನಾನು ಜೊತೆಯಲ್ಲೇ ಇದ್ದೆವು. ಆದರೆ, ಕೆಲವೊಂದು ಕಾರಣಗಳಿಂದ ಅವನು ನನ್ನಿಂದ ದೂರವಾದ. ಅವನು ತನ್ನ ಡಿಗ್ರಿಯನ್ನು ಅರ್ಧಕ್ಕೆ ಮೊಟಕು ಗೊಳಿಸಿ ಹೋಗಬಾರದಿತ್ತು. ಅವನಿಗೇನು ಕಷ್ಟವಿತ್ತೋ ನಾನು ಬಲ್ಲವನಲ್ಲವಾದ್ರೂ ಅವ್ನು ಇನ್ನಷ್ಟು ತಾಳ್ಮೆ ವಹಿಸಿದ್ದರೆ ಒಳ್ಳೇದಿತ್ತು.
ಈಗ ಅವನು ಇಲ್ಲಿಗಿಂತ ಚೆನ್ನಾಗೆ ಇರಬಹುದು. ಆದರೂ ಅವ್ನು ಉಗುರಲ್ಲಿ ಹೋಗೋ ಹುಲ್ಲು
ಕಡ್ಡಿಗೆ ಕೊಡಲಿ ತಗೊಂಡ. ಅವನು ಇಂತ ತೀರ್ಮಾನಕ್ಕೆ ಬರೋ ಹಾಗೆ ಮಾಡಿದ ವಿಷಯವೇನಾದರೂ
ಇರಬಹುದು? ನನ್ನ ಬಹು ಕಾಲದ ಸ್ನೇಹಕ್ಕೆ ಬೆಲೆ ಕೊಟ್ಟಿದ್ದಾರೆ ಅವನು ಹೋಗುವ ಮೊದಲು ನನಗೆ
ಒಂದು ಮಾತನ್ನು ಹೇಳುತಿದ್ದ. ಆದರೆ ನನ್ನಲ್ಲಿ ಅವನಿಗೆ ನಂಬಿಕೆ ಹೋಗಿತ್ತು
ಅನಿಸುತ್ತದೆ. ಹಾಗೆನಿಸಿದರಲ್ಲಿ ಅವನದೇನೂ ತಪ್ಪಿಲ್ಲ. ನನ್ನ ಸ್ವಭಾವವೇ ಒಂದು
ವಿಚಿತ್ರ, ಯಾವಾಗ ಯಾರು ಬೇಡವಾಗ್ತಾರೆ ಅನ್ನೋದು ನನಗೇ ಗೊತ್ತಿರೋಲ್ಲ. ಹೋಗಲಿ ಬಿಡಿ ಈಗ
ಅವನು ನೆನಪಗಿದ್ದಾದರೂ ಯಾಕೆ?
ಹೀಗೆಯೇ ನನ್ನ ಕಿರಿಯ ಸಹೋದ್ಯೋಗಿಯ ಜೊತೆ ಅದೂ ಇದೂ ಮಾತಾಡ್ತಾ ನಮ್ಮ NITK students co-op strores ಎದುರು ನಿಂತಿದ್ದೆ. ಆಗ ನಮ್ಮ ಹೊಸ ಕಟ್ಟಡದ ಯಾವುದೊ ಒಂದು ಅಂತಸ್ತಿನ ಕೋಣೆಯೊಂದರ ಫಾಲ್ ಸೀಲಿಂಗ್ ಗಳು ನನ್ನ್ನನ್ನು ಅಣಕಿಸಿದವು, ಹಾಗೆಯೇ ಅಲ್ಲಿಯೇ ಕೊಡಲಾಗಿದ್ದ ಹಾವಿನಂತಹ ಅರ್ಥಿಂಗ್ ಪಾಯಿಂಟ್ ನನ್ನನ್ನು ಅಶಾಂತಿ ಗೆ ದೂಡಿತು. ನಮ್ಮ ವಿಭಾಗದಲ್ಲಿ ನಾವೆಂದರೆ (ಕೆಲವೊಬ್ಬರು) ಒಂದು ಥರ ದಲಿತರ ಹಾಗೆ ತುಳಿತಕ್ಕೆ ಒಳಗಾಗಿರುವ ವರ್ಗ. ನಾವು ಏನನ್ನು ಕೇಳಿದರು ನಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಆದರೆ ಕೆಲವೊಂದು ಪಾಳೆಗಾರರ ಪಳೆಯುಳಿಕೆಗಳು ಕೇಳಿದ್ದೆಲ್ಲ ದಕ್ಕಿಬಿಡುತ್ತದೆ. ಅವರಿಗೆ ಬೇಕಾಗಿದ್ದೆಲ್ಲವು ಅವ್ರಿಗೆ ಸಿಕ್ಕಿಬಿಡುತ್ತದೆ. ನಮಗೆ ಚಿಕ್ಕನಾಯಕನಹಳ್ಳಿ ಚಿಪ್ಪೇ ಗತಿ. ನಾವು ನಮ್ಮ ಪ್ರಯೋಗಲಯಕ್ಕೆಂದೇ ಪ್ರತ್ಯೇಕ ಏರ್ಥಿಂಗ್ ಪಾಯಿಂಟ್ ಕೇಳಿದಾಗ ನಿರಾಕರಿಸಿದರು. ಮುಂದುವರೆದು "ನಿಮ್ಮ ಕಟ್ಟಡದಲ್ಲಿ ಇರುವರಿಗೆಲ್ಲರಿಗೂ ಒಂದೇ ಏರ್ಥಿಂಗ್ ಕೊಟ್ಟಿದ್ದೇವೆ, ಅದಕ್ಕೆಂದೇ ಕಟ್ಟಡದ ಮೂಲೆ ಮೂಲೆ ಯಲ್ಲಿ ದಪ್ಪನೆಯ ತಾಮ್ರದ ಪಟ್ಟಿಯನ್ನೂ ಹಾಕಿದ್ದೇವೆ ನೀವು ಅದನ್ನೇ ಬಳಸಬೇಕು" ಎಂದು ಹೇಳಿದವರು ಕೆಲವೊಬ್ಬರಿಗೆ ಮಾತ್ರ ಪ್ರತ್ಯೇಕ ಏರ್ಥಿಂಗ್ ಅನ್ನು ಕೊಡುತ್ತಾರೆಂದರೆ ಬೇಜಾರಾಗುತ್ತದೆ. ಕೆಲವೊಬ್ಬರು ಗಣಕಯಂತ್ರ ಪ್ರಯೋಗಾಲಯಕ್ಕೆಂದು ಮೀಸಲಾಗಿಟ್ಟಿದ್ದ ಕೋಣೆಯನ್ನು ಉಪಾಯವಾಗಿ ತಮಗೇ ಬೇಕು ಎಂದಾಗಲೂ ಯಾರೂ ಮಾತನಾಡಲಿಲ್ಲ.

ನನಗೀಗ ದಲಿತ ವರ್ಗದವರು ಅನುಭವಿಸಿದ್ದ ಕಷ್ಟ ಕಾರ್ಪಣ್ಯಗಳು ಒಂದೊಂದಾಗಿ ಅರ್ಥವಾಗುತ್ತಲಿವೆ. ಅವರಿಗೂ ಹೀಗೆಯೇ ತುಳಿಯಲಾಗಿತ್ತು. ಒಂದು ಸಾರಿ ಹೀಗೆಯೇ ಮಾತನಾಡುತ್ತಿರುವಾಗ (ನಮ್ಮ ವಿಭಾಗ ಹೊಸ ಕಟ್ಟಡಕ್ಕೆ ವರ್ಗಾವಣೆಯಾಗುತ್ತಲ್ಲಿತ್ತು) ನಮ್ಮ ಗುರುಗಳಿಗೆ ನಮ್ಮಲ್ಲಿರುವ UPS ಹಾಗೂ ಬ್ಯಾಟರಿಗಳನ್ನು ಹೊರಗಡೆ ಇಟ್ಟುಬಿಡೋಣ ಆಗ ನಮಗೆ ಸ್ಥಳದ ಉಳಿಯುತ್ತೆ ಎಂದಾಗ ಅವರು ಹೌಹಾರಿ ಅದೆಲ್ಲ ಆಗುವುದಿಲ್ಲವೆಂದೂ, ನಮ್ಮ ಮುಖ್ಯಸ್ಥರು ಕಟ್ಟಡದ ಸೌಂದರ್ಯಕ್ಕೆ ದಕ್ಕೆಬರುತ್ತದೆನ್ನುವರೆಂದೂ ಕಾರಣ ಕೊಟ್ಟರು. ಆದರೆ ಪಾಳೆಗಾರರು ತಮ್ಮ ಬ್ಯಾಟರಿ ಮತ್ತು UPS ಗಳನ್ನೂ ಹೊರಗಡೆ ಇಟ್ಟಾಗ ಏನೂ ಮಾತನಾಡದೆ ಹೋದರು. ಅದರ ಮುಂದುವರೆದ ಭಾಗವಾಗಿ ಬ್ಯಾಟರಿಗಳಿಂದ ಬರುವ ಕೆಟ್ಟ ಅನಿಲಗಳಿಂದ ರಕ್ಷಣೆಗೆಂದು ಅದಕೊಂದು ಹೊಸ ಕೋಣೆಯನ್ನು ರಚಿಸಲಾಯಿತು. ಇದಕ್ಕೂ ನಮ್ಮ ಮುಖ್ಯಸ್ಥರ ಸಮ್ಮತಿ ಇತ್ತೆಂದು ಹೇಳಬೇಕಾಗಿಲ್ಲ. ಕೆಲವೊಂದು ಸಾರಿ ಅನ್ನಿಸುತ್ತೆ ನಮಗೆಲ್ಲ ಯಾಕೆ ಬೇಕು ಇದರ ಉಸಾಬರಿ ಆದ್ರೆ ಎಲ್ಲದಕ್ಕೋ ಒಂದು ತಾಳ್ಮೆ ಅನ್ನುವುದು ಇರುತ್ತಲ್ಲವೇ?
ಹಿಂದೊಮ್ಮೆ ಅಂದುಕೊಳ್ಳುತ್ತಿದ್ದೆವು (ಅವನು, ನಾನು ಹಾಗೂ ಮತ್ತಿತರರು), ಈ ಪಾಳೆಯಗಾರರು ಎಷ್ಟು ಮೆರೆಯಬಹುದೋ ಮೆರೆಯಲಿ. ನಮ್ಮ ಸರದಿ ಬಂದಾಗ ಬೇಕಾದ ಉಪಕರಣಗಳು, ವಸ್ತುಗಳು ಹಾಗೂ ಇನ್ನಿತರ ಕೆಲಸಗಳನ್ನು ಮಾಡಬಹುದೆಂದು. ಆದರೆ ನೀರ ಮೇಲಿನ ಗುಳ್ಳೆಯ ಹಾಗೆ ಎಲ್ಲವೂ ಪಟ್ ಎಂದವು. ಅದೇನೋ ಕುಂತಿ ಮಕ್ಕಳಿಗೆ ವನವಾಸ ತಪ್ಪಿದ್ದಲ್ಲ ಅಂತಾನೋ ಅಥವ ಕುಂತಿ ಮಕ್ಕಳು ವನವಾಸ ಮುಗಿಸಿದರೂ ರಾಜ್ಯಭಾರ ಮಾಡೋ ಯೋಗ ಇಲ್ಲ ಅಂತಾನೋ ಅಂತಾರಲ್ಲ ಹಾಗಾಯ್ತು ನಮ್ಮ ಪರಿಸ್ಥಿತಿ.
ಇದೆ ತರಹದ ವಿಷಯಗಳು ಪದೇ ಪದೇ ಮರುಕಳಿಸುತ್ತಿದ್ದರೆ ಎಂತವನನ್ನಾದರೂ ಅಧೀರನನ್ನಾಗಿ ಮಾಡಿಬಿಡುತ್ತವೆ. ಬಹುಶಃ ನನ್ನ ಗೆಳೆಯನಿಗೂ ಹಾಗೆ ಆಗಿರಬೇಕು. ಇಲ್ಲಿ ಐದು ವರುಷವಲ್ಲ, ಐವತ್ತು ವರುಷ ಕಾದರೂ ನಮಗೆ ಸಿಗುವುದು ಬರೀ ನೋವು, ಅವಮಾನ, ಹಿಂಸೆ, ಜಿಗುಪ್ಸೆ ಎಂದೆನಿಸಿ ಅವನು ಕಠಿಣ ನಿರ್ಧಾರ ತೆಗೆದುಕೊಂಡಿರಬೇಕು. ಒಮ್ಮೆ ಅನಿಸುತ್ತದೆ ಅವನು ಮಾಡಿದ್ದು ಸರಿಯೆಂದು ಆದರೂ, ಇನ್ನೊಮ್ಮೆ ಅವ್ನು ತನ್ನ ನಿರ್ಧಾರವನ್ನು ಪರಿಶೀಲಿಸಬೇಕಿತ್ತು ಎಂದೂ ಎನಿಸುತ್ತೆ.
ಈ ಸಮಾಜವಾದ ಅದೂ ಇದೂ ಎಲ್ಲ ಬೊಗಳೆ. ಯಾವನಿಗೆ ಮತ್ತೊಬ್ಬನನ್ನು ತುಳಿಯುವ ಕಲೆ ಗೊತ್ತಿರುತ್ತೋ ಅವ್ನೆ ಇಲ್ಲಿ ರಾಜ.
ನನ್ನಲ್ಲಿರುವ ಚೈತನ್ಯವಲ್ಲ ಸತ್ತು ಹೋಗಿದೆಯೇನೂ ಎನಿಸುತ್ತೆ. ನನ್ನಲ್ಲೂ ಈಗೀಗ ಅಶಾಂತಿ ಹೊಗೆಯಾಡುತ್ತಿದೆ. ಛೆ.. ನಾ ಕಂಡ ನಂದನವನದ ಕನಸು ನನಸಾಗುವುದಿಲ್ಲವೇನೋ.
No comments:
Post a Comment