ಛೆ! ಎದ್ದಿದ್ದೇ ತಡವಾಯ್ತು ಇನ್ನೇನು ೩೦ ನಿಮಿಷಗಳಲ್ಲಿ ತಯಾರಾಗಬೇಕು, ಇಲ್ಲವೆಂದರೆ ಕಛೇರಿಯ ಬಸ್ಸು ತಪ್ಪಿಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ, ಮೊನ್ನೆ ಹೀಗೇ ಆಗಿತ್ತು, ಅದೂ ಇದೂ ಅಂತ ಮನಸ್ಸಿನಲ್ಲೇ ಅಂದುಕೊಳ್ಳುತ್ತಾ ಏಳುವಷ್ಟರಲ್ಲಿ ಸಾಕಾಗಿಹೋಗಿತ್ತು. ಹೆಂಗೋ ಗಡಿಬಿಡಿಯಲ್ಲಿ ನಿತ್ಯಕರ್ಮ, ಮಜ್ಜನಾದಿಗಳನ್ನು ಮುಗಿಸಿ ಬೀದಿಗೆ ಬಿದ್ದಾಗ ಬಸ್ಸು ಬರಲು ಇನ್ನೂ ಹತ್ತು ನಿಮಿಷಗಳಿವೆ ಎಂದು ಕೈಗಡಿಯಾರ ತೋರಿಸುತ್ತಿತ್ತು, ಮನಸ್ಸಿಗೂ ನಿರಾಳವೆನಿಸಿತು. ಹಾಗೆಯೇ ಅದನ್ನು ಅಲೆದಾಡಲು ಬಿಟ್ಟು ದಿನವೂ ಬಸ್ಸಿಗೆ ಕಾಯುತ್ತಿದ್ದ ಜಾಗಕ್ಕೆ ಬಂದು ನಿಂತಾಗ ಆಶ್ಚರ್ಯವೊಂದು ನನಗಾಗಿ ಕಾದಿತ್ತು. ರಸ್ತೆಯ ಎಡಬದಿಗೆ ಇದ್ದ ಪಾದಚಾರಿ ಮಾರ್ಗವನ್ನು ಸ್ವಲ್ಪ ಹಿಂದೆ ಸರಿಸಿ, ಸುಗಮ ಸಂಚಾರಕ್ಕೆ ಯಾವುದೇ ದಕ್ಕೆಯಾಗದಂತೆ ನಗರ ಸಾರಿಗೆ ನಿಲ್ದಾಣವನ್ನು ಸ್ವಲ್ಪ ಹಿಂದಕ್ಕೆ ಕಳುಹಿಸಿದ್ದರು. ಅಲ್ಲಿಯೇ ಡಿಜಿಟಲ್ ಪಲಕವೊಂದರಲ್ಲಿ ಮುಂದೆ ಬರಲಿರುವ ಬಸ್ಸಿನ ಸಮಯ ಕೆಂಪನೆಯ LED ಅಕ್ಷರಗಳಲ್ಲಿ ತೋರಿಸುತ್ತಿದ್ದರಿಂದ ಜನರೂ ಸಮಾಧಾನದಿಂದ ತಾವು ಹಿಡಿಯಬೇಕಾದ ಬಸ್ಸಿಗೆ ಎದುರು ನೋಡುತ್ತಾ ತಂಗುದಾಣದ ಒಳಗೇ ಆರಾಮವಾಗಿ ನಿಂತಿದ್ದರು. ನನ್ನ ಸಂತಸ ಇಮ್ಮಡಿಯಾಗುವಂತೆ ಮಾಡಿದ ಮತ್ತೊಂದು ವಿಷ್ಯ ಏನೂ ಅಂದ್ರೆ, ಸಾರ್ವಜನಿಕ ಸಾರಿಗೆ ಹಾಗೂ ಖಾಸಗೀ ಸಾರಿಗೆ (ನಮ್ಮ ಕಚೇರಿಯ ವಾಹನ/ಕ್ಯಾಬುಗಳು) ವಾಹನಗಳ ಕಿರು ನಿಲ್ದಾಣಕ್ಕೆ ಸಾಕಷ್ಟು ಅಂತರ ಕಲ್ಪಿಸಿದ್ದರಿಂದ ಒಬ್ಬರ ಮೇಲೊಬ್ಬರು ಜಿದ್ದಿಗೆ ಬಿದ್ದು ಬಸ್ಸು ಹಿಡಿಯುವುದರಿಂದ ಮುಕ್ತಿ ಸಿಕ್ಕಿತ್ತು. ಎಂದಿನಂತೆ ಸಮಯಕ್ಕೆ ಸರಿಯಾಗಿ ಬಂದ ನನ್ನ ಸಂಸ್ಥೆಯ ವಾಹನವನ್ನೇರಿ ಹೊರಟಾಗ ಮೊದಲಿಗೆ ದೊರಕಿದ್ದು ಯಾವಾಗಲೂ ಅವ್ಯವಸ್ಥೆಯ ಆಗರವಾಗಿರುತ್ತಿದ್ದ ಸಂಚಾರಿ ಸಂಕೇತ (traffic signal) ಸಹಿತ ವೃತ್ತ. ಆದರೆ ಇವತ್ತು ಎಂದಿನಂತೆ ಇರದೇ ಬೇರೆಯದೇ ಲೋಕಕ್ಕೆ ಬಂದ ಹಾಗಿತ್ತು. ಡಾಳಾಗಿ ಕಾಣುತ್ತಿದ್ದ ಹಳದಿ ಬಿಳಿ ಉದ್ದ ಪಟ್ಟಿಗಳ ಪಾದಾಚಾರಿ ರಸ್ತೆದಾಟುವಿನ ಹಿಂದೆ ಇದ್ದ ಬಿಳಿಯದೊಂದು ಅಡ್ಡಪಟ್ಟಿಯ ಹಿಂದೆಯೇ ತಮ್ಮ ತಮ್ಮ ವಾಹನಗಳನ್ನು ನಿಲ್ಲಿಸಿಕೊಂಡು ತಾಳ್ಮೆಯಿಂದ ತಮ್ಮ ಸರದಿಗಾಗಿ ಕಾಣುತ್ತಿದ್ದ ವಾಹನಗಳ ಸಾಲು, ಅಡ್ಡಾದಿಡ್ಡಿಯಾಗಿ ರಸ್ತೆ ದಾಟದೇ ನಿಗಡಿದ ಜಾಗದಲ್ಲೇ ರಸ್ತೆ ದಾಟುತ್ತಿದ್ದ ಪಾದಾಚಾರಿಗಳು, ಹಾರನ್ ಬಜಾಯಿಸದೇ ಇದ್ದ ಬಸ್ಸು-ಟ್ರಕ್ಕು ಗಳನ್ನೂ ನೋಡಿ ಖುಷಿಯಾಯ್ತು. ಹಸಿರು ಸಂಕೇತ ದೊರೆಯುತ್ತಿದ್ದಂತೆಯೇ ಮುಂದೆ ಸಾಗಿದ ನಮ್ಮ ಬಸ್ಸಿಗೆ ವೃತ್ತ ದಾಟಿದ ನಂತರ ಯಾರೂ ಅಡ್ಡಾದಿಡ್ಡಿಯಾಗಿ ಆಟೋಗಳನ್ನೂ, ದ್ವಿಚಕ್ರ ವಾಹನಗಳನ್ನೂ ನಿಲ್ಲಿಸಿಕೊಳ್ಳದೇ ಇದ್ದಿದ್ದರಿಂದ ಅಲ್ಲಿಯೇ ಹೆಚ್ಚು ಸಮಯ ವ್ಯಯಮಾಡದೇ ಗಮ್ಯದೆಡೆಗೆ ನಮ್ಮ ವಾಹನ ಸಾಗಿ ಹಲವಾರು ಪಥಗಳಿದ್ದ ಮುಖ್ಯರಸ್ತೆಗೆ ಬಂದು ಸೇರಿದಾಗ ಸಮಯ ಎಂಟೂ ಮುಕ್ಕಾಲಾಗಿತ್ತು. ಇಲ್ಲಿಯೂ ಜನರು ಹಾಗೂ ವಾಹನಗಳು ಅತೀ ಶಿಸ್ತಿನಿಂದ ಚಲಿಸುತ್ತಿದ್ದುದನ್ನು ನೋಡಿದೆ. ಮಂದಗತಿಯ ವಾಹನಗಳು ಎಡಬದಿಗೆ ಇದ್ದ ಪಥಗಳಲ್ಲಿಯೇ ಚಲಿಸುತ್ತಿದ್ದುದನ್ನು ನೋಡಿ ರಸ್ತೆಯ ಹಲವಾರು ಕಡೆ ಹಾಕಿದ್ದ ಕತ್ತಲಲ್ಲೂ ಹೊಳೆಯುವ ದಪ್ಪಕ್ಷರದ ಸೂಚನಾ ಪಲಕಕ್ಕೆ ಇವತ್ತಾದರೂ ಜನ ಬೆಲೆ ಕೊಡುತ್ತಿದ್ದಾರಲ್ಲ ಎಂದೆನಿಸಿತು. ರಸ್ತೆಯ ಎರಡೂ ಬದಿಗೆ ಇದ್ದ ತಗ್ಗು-ದಿಣ್ಣೆಗಳು ಇಲ್ಲದ, ದಿವ್ಯಾಂಗರೂ ಸಲೀಸಾಗಿ ಬಳಸಬಹುದಾಗಿದ್ದ ಪಾದಾಚಾರಿ ಮಾರ್ಗಗಳನ್ನು ನೋಡಿದ ಮೇಲೆಯಂತೂ ಸ್ವರ್ಗಕ್ಕೆ ಇನ್ನು ಮೂರೇ ಗೇಣು ಅನಿಸಿದ್ದು ಮಾತ್ರ ನಿಜ. ಕಛೇರಿಗೆ ದೀರ್ಘರಜೆಯಿತ್ತಾದ್ದರಿಂದ ಒಂದು ಐದಾರು ದಿನಗಳಿಂದ ನಮ್ಮ ಸಂಸ್ಥೆಯ ವಸತಿ ಸಮುಚ್ಚಯ-ಪರಿಸರವನ್ನು ಬಿಟ್ಟು ಹೊರಗೇ ಬರದಿದ್ದ ನಂಗೆ ಇಷ್ಟೆಲ್ಲಾ ಬದಲಾಗಿರುವುದು ಕಂಡು ನಮ್ಮ ಜನರ ಬಗ್ಗೆ, ನಮ್ಮ ಸರಕಾರದ ಬಗೆ ಹೆಮ್ಮೆಯೆನಿಸಿತು. ಮಾನವನಿಗೆ ಅಸಾಧ್ಯವೆಂಬುದು ಏನೂ ಇಲ್ಲ ಎಂಬ ದಾರ್ಶನಿಕರ ಮಾತೂ ನೆನಪಾಯಿತು. ಇದೆಲ್ಲವನ್ನೂ ಯೋಚಿಸುತ್ತಾ ಮನಸ್ಸಿಗೆ ಹಾಯೆನಿಸಿ ಕಣ್ಣು ಹಿಡಿದಿದ್ದೇ ಗೊತ್ತಾಗಲಿಲ್ಲ! ಯಾರೋ ಅಲುಗಾಡಿಸುತ್ತಿದ್ದಾರಲ್ಲಾ!? ಕಛೇರಿ ತಲುಪಿರಬೇಕು ಎಂದೆನಿಸಿ ಕಣ್ಣು ತೆರೆದರೆ ನನ್ನ ತಾಯಿ! ಅಯ್ಯೋ ಅವರು ಯಾಕೆ ಇಲ್ಲಿ ಬಂದರು ಎಂದು ಯೋಚಿಸುತ್ತಿದ್ದಂತೆಯೇ ನಾನು ಹಾಸಿಗೆಯಲ್ಲೇ ಇರುವುದು ಅರಿವಿಗೆ ಬಂತು. ಹಳದಿ-ಬಿಳಿ ಪಟ್ಟಿ,ಪಾದಾಚಾರಿ ಮಾರ್ಗ, ಪಥ-ಶಿಸ್ತು ಅಂತ ಏನೇನೋ ಬಡಬಡಾಯಿಸಲು ಶುರುಮಾಡಿದ ನಂಗೆ “ಅಪ್ಪಾ ತಂದೇ ನೀನು ಹಿಂಗೇ ಕನಸು ಕಾಣುತ್ತಾ ಇದ್ದರೆ ಇವತ್ತೂ ಬಸ್ಸು ತಪ್ಪಿಸಿಕೊಳ್ಳುವುದು ಖಂಡಿತ” ಅಂತ ನನ್ನಮ್ಮ ಉಗಿದ ಮೇಲೆಯೇ ಗೊತ್ತಾಗಿದ್ದು ನಾನು ಇಷ್ಟು ಹೊತ್ತು ನೋಡಿದ್ದೆಲ್ಲ ಕನಸು ಅಂತ. ಛೆ ಅಂತ ಭಾರವಾದ ನಿಟ್ಟುಸಿರು ಬಿಟ್ಟು ಹಾಸಿಗೆಯಿಂದ ಎದ್ದೆ. ಪಕ್ಕದಲ್ಲೇ ಇದ್ದ ಪುಸ್ತಕದ ಮುಖಪುಟವಾಗಿದ್ದ ಒಬ್ಬರ ಚಿತ್ರ ನೋಡಿ, ಇದೆಲ್ಲ ಯಾಕಾಗಬಾರದು ಎಂದೆನಿಸಿ ಭರವಸೆ ತಂದುಕೊಳ್ಳುತ್ತಾ ನಿತ್ಯಕರ್ಮಗಳನ್ನು ಮುಗಿಸುವತ್ತ ಗಮನಹರಿಸಿದೆ.
Sunday, August 28, 2016
Monday, July 4, 2016
ಆಹಾ ಕೆಂಪು ಬಸ್ಸೇ!
ಬಸ್ಸು ಅಂದಾಕ್ಷಣ ನನ್ನ ವಯಸ್ಸಿನ ಹಲವರಿಗೆ ಮೊದಲು ನೆನಪಾಗೋದು ಕೆಂಪು ಬಣ್ಣದ, ವಿಕಾರವಾದ ಕರ್ನಾಟಕ ಸಾರಿಗೆಯ ಟಾಟಾ ಬಸ್ಸುಗಳು. ನಂಗೆ ನೆನಪಿರೋ ಹಾಗೆ ನಂಗೆ ಈ ಕೆಂಪು ಬಸ್ಸುಗಳನ್ನು ಪರಿಚಯಿಸಿದ್ದು ನಮ್ಮ ಚಿಕ್ಕಪ್ಪಂದಿರೇ ಇರಬೇಕು. ಆಗ ನಮ್ಮೂರಿಗೆ ಬರುತ್ತಿದ್ದುದು ಒಂದೋ ಎರಡೋ ಬಸ್ಸುಗಳು ಅಷ್ಟೇ, ನಾನು ಹುಟ್ಟಿದ, ಬೆಳೆದ ಆ ಊರನ್ನು ಊರು ಅನ್ನುವುದಕ್ಕಿಂತ ಹಳ್ಳಿ ಅನ್ನೋದು ಸೂಕ್ತ. ಕುಗ್ರಾಮವೇನೂ ಅಲ್ಲದಿದ್ದರೂ ಸಿಕ್ಕಾಪಟ್ಟೆ ದೊಡ್ಡ ಹಳ್ಳಿಯೇನೂ ಆಗಿರಲಿಲ್ಲ. ಇಂತದೊಂದು ಹಳ್ಳಿಯಲ್ಲಿ ನನ್ನ ಬಾಲ್ಯ ಯಾವುದೇ ತಂಟೆ-ತಕರಾರುಗಳಿಲ್ಲದೇ ಸಾಗುತ್ತಿತ್ತು. ಅಚ್ಚಳಿಯದೆ ಬಾಲ್ಯದ ನೆನಪುಗಳಲ್ಲಿ ಈ ಬಸ್ಸುಗಳ ಪುರಾಣವೂ ಒಂದು. ರಜಕ್ಕೋ, ಅಥವಾ ಯಾವುದೊ ಕೆಲಸಕ್ಕೂ ಊರಿಗೆ ಬಂದ ನಮ್ಮ ಚಿಕ್ಕಪ್ಪಂದಿರು ವಾಪಾಸ್ ಹೊರಟಾಗ ನಮ್ಮ ಕೆಲಸ ಊರ ಮುಂದೆ ಹೋಗಿ ಕೆಂಪು ಬಸ್ಸು ದೂಳೆಬ್ಬಿಸುತ್ತಾ ಹೊಂಡದ ಏರಿಯ ಮೇಲೋ, ಬ್ಯಾಡರ ಹಟ್ಟಿಯ ಕಡೆಯಿಂದಲೋ ಊರಿಗೆ ಪ್ರವೇಶಿಸುತ್ತಾ ಇದ್ದಂತೆಯೇ ಮನೆಗೆ ಓಡಿ ಸುದ್ದಿ ಮುಟ್ಟಿಸುವುದು.. ತಮ್ಮ ಕಡೆಯ ಕ್ಷಣದ ಚರ್ಚೆಯಲ್ಲಿ ತೊಡಗಿಕೊಂಡಿರುತ್ತಿದ್ದ ಅವರುಗಳು ಊರ ಮುಂದಕ್ಕೆ ಓಡುತ್ತಿದ್ದುದು ನೆನಪಿದೆ. ಆಗ ಹಳ್ಳಿಗೆ ಇದ್ದದ್ದು ಒಂದೇ ರಸ್ತೆ (ಈಗಲೂ ಒಂದೇ ಇರಬಹುದು) ಒಂದು ಕಡೆ ಹೋದರೆ ದಾವಣಗೆರೆಗೊ, ಹರಪನಹಳ್ಳಿಗೊ ಹೋಗಬಹುದಿದ್ದರೆ, ಮತ್ತೊಂದು ದಿಕ್ಕಿಗೆ ಹೋದಲ್ಲಿ ಕೊಟ್ಟೂರು, ಕೂಡ್ಲಿಗಿ ಸೇರಿಕೊಳ್ಳಬಹುದಿತ್ತು. ಬೆಳಿಗ್ಗೆ ಬಳ್ಳಾರಿ ಬಸ್ಸಿನಿಂದ ಶುರುವಾಗುತ್ತಿದ್ದ ದಿನ ಕೊನೆಯ ದಾವಣಗೆರೆ ಬಸ್ಸಿನೊಂದಿಗೆ ಅಂತ್ಯವಾಗುತ್ತಿತ್ತು. ನಡುವೆ ಒಂದು ಎಪೆಮ್ಸಿ (APMC) ಅವಾಗವಾಗ ಬರುತ್ತಿದ್ದ ಇನ್ನೊಂದು ಬಸ್ ಬಿಟ್ರೆ ಬೇರೆ ಬಸ್ ಇಲ್ಲ.
ಹೀಗಿರುವಾಗ ಬಸ್ಸು ಎಂದರೆ ನಮಗೆ ಅದೆಂತದೋ ಉತ್ಸಾಹ. ಸ್ಟೇರಿಂಗ್ ಹಿಡಿದು ಬಸ್ಸು ಚಲಾಯಿಸುವ ಚಾಲಕ ಮಹಾಶಯ ನಮಗೆ ಅತಿಮಾನುಷ ವ್ಯಕ್ತಿ! ನಮ್ಮನೆಗೆ ಯಾರೇ ಬಂದರೂ ಇವುಗಳಲ್ಲೇ ಬರಬೇಕು, ಕೆಲವೊಮ್ಮೆ ನಾವುಗಳು ಬಸ್ಸು ಬಂದಾಕ್ಷಣ ಊರ ಮುಂದಕ್ಕೆ ಓಡಿ, ನಮ್ಮವರು ಯಾರದ್ರೂ ಇದ್ದಾರೆಯೇ ಎಂದು ಪರೀಕ್ಷಿಸಿ, ಇದ್ದಲ್ಲಿ ಅವರ ಕೈಚೀಲಗಳನ್ನು ಕಸಿದು, ಮನೆಯ ಕಡೆಗೆ ಓಡಿ, ಬಂದವರಿಗಿಂತಾ ನಾವೇ ಮುಂಚಿತವಾಗಿ ಸುದ್ದಿ ಮುಟ್ಟಿಸುತ್ತಿದ್ದುದು ಇದೆ.
ಬರುತ್ತಿದ್ದ ಬಸ್ಸುಗಳೆಲ್ಲ ಸರ್ಕಾರಿ ಬಸ್ಸುಗಳೇ ಆದುದರಿಂದ ಎಲ್ಲ ಕೆಂಪೇ!! ಹಳ್ಳಿಗಳ ಕಡೆ ಬರುತ್ತಿದ್ದ ಬಸ್ಸುಗಳೆಲ್ಲ ಉದ್ದದಲ್ಲಿ ಸಣ್ಣದಾದ ಟಾಟಾ ಬಸ್ಸುಗಳೇ. ಉದ್ದನೆಯ ಬಸ್ಸು ನೋಡದಿದ್ದ ನಮಗೆ ಒಮ್ಮೆ ನಮ್ಮೂರಿನ ರಸ್ತೆಯಲಿ ಉದ್ದನೆಯ ಹಾಗೂ ಸುಂದರವಾಗಿದ್ದ ಅಶೋಕ್ ಲೇಲ್ಯಾಂಡ್ ಬಸ್ಸು ನೋಡಿದಾಗ ಉಂಟಾದ ಆನಂದ ಮೊನ್ನೆ ಯಾವಾಗಲೋ Boeingನ Dreamliner ವಿಮಾನ ನೋಡಿದಾಗಲೂ ಆಗಿಲ್ಲ ಅನಿಸುತ್ತೆ. ಅವತ್ತು ಆಗಿದ್ದೇನಂದ್ರೆ ಇನ್ಯಾವುದೋ ಮುಖ್ಯರಸ್ತೆಯಲ್ಲಿ ಅಡಚಣೆಯಾದ್ದರಿಂದ ವೇಗದೂತ ಬಸ್ಸುಗಳೆಲ್ಲವೂ ನಮ್ಮೂರಿನ ರಸ್ತೆಯನ್ನು ಬಳಸಿ ಹೋಗುತ್ತಿದ್ದ ಕಾರಣದಿಂದ ನಮಗೆ ಒಂದೆರಡು ಬಸ್ಸುಗಳನ್ನು ನೋಡುವ ಸೌಭಾಗ್ಯ ದೊರೆತಿತ್ತು. ನಮ್ಮ ನಮ್ಮಲ್ಲೇ ಸಭೆ ನಡೆಸಿ, ಈ ಬಸ್ಸುಗಳು ಇಲ್ಯಾಕೆ ಬಂದಿವೆ, ಇನ್ನು ಮುಂದೆ ದಿನಾ ಬರ್ತಾವ ಎಂದು ಚರ್ಚಿಸಿ ನಮ್ಮ ಅಣ್ಣನೋ ಚಿಕ್ಕಪ್ಪನೋ ಮೇಲಿನಂತೆ ಹೇಳಿದಾಗ ನಮ್ಮ ಅತ್ಯುತ್ಸಾಹಕ್ಕೆ ಬ್ರೇಕ್ ಬಿದ್ದಂತೆ ಆಗಿದ್ದು ನಿಜ.
ನಮಗೆ ಬಸ್ಸು ನೋಡಿದರೇನೇ ಅಷ್ಟು ಖುಷಿಯಿದ್ದಾಗ ಇನ್ನು ಬಸ್ಸು ಹತ್ತಿದರೆ ಕೇಳುವುದೇ ಬೇಡ! ಟಿವಿಯನ್ನು ನೋಡದಿದ್ದ ನಮಗೆ ಆಗ ಈ ಸೂಪರ್ ಮ್ಯಾನ್, ಹೀಮ್ಯಾನ್ ಗಳ ಪರಿಚಯವೂ ಇರಲಿಲ್ಲ. ಈ ಬಸ್ಸು ಡ್ರೈವರ್ ಗಳೇ ನಮ್ಮ ಹೀರೋಗಳು. ಬಹುಪಾಲು ಹಳೆಯ ಬಸ್ಸುಗಳಲ್ಲಿ ಡ್ರೈವರ್ ಕ್ಯಾಬಿನ್ ಗೂ ಪ್ರಯಾಣಿಕರ ಸೀಟುಗಳಿಗೂ ನಡುವೆಯೊಂದು ಜಾಲರಿಯೋ, ಮುಂದಿಂದೇನೂ ಕಾಣದ ದಪ್ಪ ತಗಡೋ ಇರುತ್ತಿತ್ತು. ತಗಡಿದ್ದರೆ ನಮ್ಮ ಹೀರೋನನ್ನು ನೋಡುವ ಭಾಗ್ಯ ಇರುತ್ತಿರಲಿಲ್ಲ.. ಆದರೆ ಜಾಲರಿಯಿದ್ದಲ್ಲಿ ಮುಗಿಯಿತು, ನಮ್ಮ ಆನಂದಕ್ಕೆ ಪಾರವೇ ಇಲ್ಲ! ದೊಡ್ಡ ಗಾಜಿನ ಹಿಂದೆ ಕಾಣುತ್ತಿದ್ದ ರಸ್ತೆಯ ನೋಟ, ಡ್ರೈವರ್ ಸಾಹೇಬರು ಒಮ್ಮೊಮ್ಮೆ ಒಂದೇ ಕೈಯಿಂದ ಸ್ಟೇರಿಂಗ್ ಅನ್ನು ತಿರುಗಿಸುವ ಶೈಲಿ. ಕಡಿದಾದ ತಿರುವು ಬಂದಾಗ, ಸ್ಟೇರಿಂಗ್ ನ್ಯೂಟನ್'ನ ಮೊದಲೇನೆ ನಿಯಮದಂತೆ ತನ್ನಷ್ಟಕ್ಕೆ ತಾನೇ ಗರಗರನೆ ತಿರುಗಿ ಸ್ವಸ್ಥಾನಕ್ಕೆ ಬರುವಾಗ ಆಗುತ್ತಿದ್ದ ರೋಮಾಂಚನ ಅನುಭವಿಸಿದವನಿಗೇ ಗೊತ್ತು!! ಹೀಗಿರುವಾಗ ಈ ಎಲ್ಲವನ್ನೂ ಲೀಲಾಜಾಲವಾಗಿ ನಿಭಾಯಿಸುತ್ತಿದ್ದ ಡ್ರೈವರ್ ಗಳು ಅತಿಮಾನುಷರೆಂದು ಅನಿಸಿ ಅವರೇ ನಮ್ಮ ಹೀರೋಗಳಾಗಿದ್ದಿದ್ದುದು ಸಹಜವೇ ಅಲ್ಲವೇ.
ಬರೀ ಕೆಂಪು ಬಸ್ಸುಗಳನ್ನೇ ನೋಡಿದ್ದ ನಮಗೆ ರಸದೌತಣ ಉಣಬಡಿಸಿದ್ದು ನಮ್ಮೂರಿಗೆ ನಂತರ ಕಾಲಿಟ್ಟ ಬಣ್ಣಬಣ್ಣದ ಸವ್ಕಾರಿ ಬಸ್ಸುಗಳು. ಹಣೆಯ ಮೇಲೊಂದು ಹೆಸರನ್ನೂ ಹೊತ್ತಿರುತ್ತಿದ್ದ ಇವು ನಮ್ಮೂರಿಗೆ ಬಂದಾಗ ನಮ್ಮ ಭಾಗ್ಯದ ಬಾಗಿಲೇ ತೆರೆಯಿತು ಅನ್ನುವಷ್ಟರ ಮಟ್ಟಿಗೆ ಖುಷಿ ಪಟ್ಟಿದ್ದು ಮಾತ್ರಾ ನಾವುಗಳೇ. ಆಗ ಬರುತ್ತಿದ್ದ ಬಸ್ಸುಗಳಲ್ಲಿ ಒಂದು BMS ಮತ್ತೊಂದು SBMS. ನಂತರ ಅದೇನೋ ಆಗಿ BMS ಬರೋದನ್ನು ನಿಲ್ಲಿಸಿದಾಗ ನಾವಾಗ ಅದಕ್ಕೆ ಹಿಡಿಶಾಪ ಹಾಕಿದ್ದಿದೆ. BMS ಅಂದ್ರೆ ಅದ್ಯಾವುದೋ ಮೋಟರ್ ಸರ್ವೀಸ್ ಅಂದಾಗಿತ್ತು ನಮ್ಮ ಸಿಟ್ಟಿಗೆ ಸಿಲುಕಿದ್ದ ಅದು ಬಾರೋ ಮಿ*****... ಸೂ***ನೇ ಆಗಿತ್ತು (ಇದು ನಮಗಿಂತ ಸ್ವಲ್ಪ ದೊಡ್ಡವನಾಗಿದ್ದ ನಮ್ಮಣ್ಣನ ಕಿತಾಪತಿ). ಕೊನೆಗೆ ಆ ಬಸ್ಸು ಮತ್ತೆ ನಮ್ಮೂರಿಗೆ ಬಂತೋ ಇಲ್ಲವೋ ನೆನಪಿಲ್ಲ.
ಬರುಬರುತ್ತಾ ಬಸ್ಸುಗಳ ಸಂಖ್ಯೆ ಹೆಚ್ಚಾದುದ್ದಕ್ಕೂ ಅಥವಾ ನಾವುಗಳು ಬಾಲ್ಯದಿಂದ ಪ್ರೌಡಾವಸ್ಥೆ ಕಡೆಗೆ ನೆಡೆದುದ್ದಕ್ಕೂ ಬಸ್ಸಿನ ಬಗ್ಗೆಅಷ್ಟೇನೂ ನಮ್ಮ ಉತ್ಸಾಹ ಕಡಿಮೆಯಾದದ್ದು ನಿಜ. ಈಗ ತರತರದ ಬಸ್ಸುಗಳು ಕಣ್ಣಿಗೆ ಬಿದ್ದರೂ ಮನಸ್ಸಿನಲ್ಲಿ ಬಾಲ್ಯದ ಆ ಕೆಂಪು ಬಸ್ಸು, ಆ ಅಶೋಕ್ ಲೇಲ್ಯಾಂಡ್ ಮಾತ್ರ ಅಚ್ಚಳಿಯದಂತೆ ಉಳಿದುಬಿಟ್ಟಿವೆ!!

Friday, July 1, 2016
ಕಾಣೆಯಾಗೋಣ ಬಾ!!
ಬದಲಾಗುತ್ತಿರುವ ಜಗತ್ತಿನಲ್ಲಿ ಹೊಸ ಹೊಸ ತೊಂದರೆಗಳು ಹುಟ್ಟುತ್ತಾ ಇರುತ್ತಾ ಇರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಕೆಲವೊಬ್ಬರಿಗೆ ಒಮ್ಮೊಮ್ಮೆ ತಾವು ಜಗತ್ತಿನಲ್ಲಿ ಇದ್ದೂ ಇಲ್ಲದ ಹಾಗೆ ಇರಬೇಕು ಅನ್ನಿಸೋದು ಸಹಜ. ಬೇರೆಯವರಿಗೆ ಅನಿಸುತ್ತೋ ಇಲ್ಲವೋ ನನಗಂತೂ ಹಲವು ಬಾರಿ ಅನಿಸಿದೆ. ಈಗ್ಗೆ ಒಂದು ಇಪ್ಪತ್ತು ವರ್ಷಗಳ ಹಿಂದೆ ಬಹು ಸುಲಭವಾಗಿ ಈ ರೀತಿಯ ಜೀವನ ನೆಡೆಸಬಹುದಿತ್ತೇನೋ ಆದರೆ ಇವತ್ತಿನ ಮಟ್ಟಿಗೆ ಅದು ಕಷ್ಟ ಸಾಧ್ಯ! ಅದೂ ನಮ್ಮ ಡಿಜಿಟಲ್ ಹೆಜ್ಜೆ-ಗುರುತು ಗಳನ್ನ ಅಳಿಸಿ ಹಾಕುವುದು ಬಹು ಕಷ್ಟದ ವಿಚಾರ. ನಾವು ಅದ್ಯಾವುದೋ ವೆಬ್ ತಾಣದಲ್ಲಿ ಅಭಿಪ್ರಾಯಿಸಿರುತ್ತೇವೆ, ಮತ್ತೊಂದು ವೆಬ್'ತಾಣದಲ್ಲಿ ನಮ್ಮದೊಂದು ಪರಿಚಯ ಪುಟವನ್ನು ಸೃಷ್ಟಿಸಿಬಿಟ್ಟಿರುತ್ತೇವೆ, ಇನ್ನ್ಯಾವುದೋ ವೆಬ್ ತಾಣದಲ್ಲಿ ಅದೇನೋ ವಸ್ತುವನ್ನು ಕೊಂಡು ಅದರ ಬಗ್ಗೆ ನಮ್ಮ ಅನಿಸಿಕೆಗಳನ್ನ ಹಂಚಿರುತ್ತೇವೆ. ಒಮ್ಮೆ ವೆಬ್ ತಾಣವೊಂದರಲ್ಲಿ ಏನನ್ನೋ ಬರೆದು ಅದು ನಮ್ಮ ಖಾಸಗಿತನಕ್ಕೆ ದಕ್ಕೆಯಾಗುತ್ತಿದೆಯೆಂದೂ ಹುಲುಬುವುದು ಸರಿಯಲ್ಲವಾದರೂ ಒಮ್ಮೆಮ್ಮೆ ಇದು ಅತಿಯಾದಾಗ ನಮಗೆ ಒಂದು ಥರ ಕಿರಿಕಿರಿ ಯಾಗುವುದು ಸಹಜ. ಅದರಲ್ಲೊಂದು ಈ ಹುಡುಕುತಾಣಗಳು (search engines) ನಮಗೇ ಗೊತ್ತಿರದೇ ಅದ್ಯಾವುದೋ ಜಾಲತಾಣದಲ್ಲಿದ್ದ ನಮಗೆ ಸಂಬಂಧಿಸಿದ ಮಾಹಿತಿಯನ್ನು ಪಟ್ಟಿ ಮಾಡುವುದು. ಹೊಸದರಲ್ಲಿ ನಾನೂ ಹೀಗೆ ಸಿಕ್ಕ ವೆಬ್'ತಾಣಗಳಲ್ಲಿ ಹೆಸರು ನೊಂದಾಯಿಸಿ, ನನ್ನದೇ ವೆಬ್'ಪುಟಗಳನ್ನು ಸೃಷ್ಟಿಸಿ ಕೊನೆಗೊಂದು ದಿನ ನನ್ನ ಮೇಲೆ ನನಗೇ ಜಿಗುಪ್ಸೆ ಬಂದು ಎಲ್ಲವನ್ನೂ ಅಳಿಸಿಹಾಕಿದ್ದಿದೆ!
ಈಗ ಯಾರೋ ಒಬ್ಬನ್ನನ್ನು ಊಹಿಸಿಕೊಳ್ಳಿ, ಅವನಿಗೆ ತಾನು ಈ ಡಿಜಿಟಲ್ ಜಗತ್ತಿನಿಂದ ಪೂರ್ತಿ ಕಾಣೆಯಾಗಿ ಹೋಗಿಬಿಡಬೇಕು ಅನಿಸಿಬಿಡುತ್ತೆ, ಕಡೇಪಕ್ಷ ಈ ಹುಡುಕುತಾಣಗಳಿಂದವಾದರೂ ಮರೆಯಾಗಬೇಕು ಅನಿಸಿಬಿಡುತ್ತೆ ಅಂತ ಅಂದುಕೊಳ್ಳಿ. ಆಗ ಅವನೇನು ಮಾಡಬೇಕು. ಇದಕ್ಕೆಂದೇ ಜಗತ್ತಿನ ಕೆಲವೆಡೆ ಕೆಲವು ಕಾನೂನುಗಳನ್ನು ಜಾರಿಗೆ ತರಲಾಗುತ್ತಿದೆ. ಈಗಾಗ್ಲೇ ಜರ್ಮನಿ, ಸ್ಪೇನ್, ಅರ್ಜೆಂಟೀನಾ, ಅ. ಸಂ. ಸಂ. ದಂತಹ ದೇಶಗಳೂ, ಯುರೋಪಿಯನ್ ಒಕ್ಕೂಟವೂ ಈ ನಿಟ್ಟಿನಲ್ಲಿ ಕಾರ್ಯನಿರತವಾಗಿವೆ. ಇಂತಹ ಕಾನೂನುಗಳನ್ನು ಉಪಯೋಗಿಸಿಕೊಂಡು ಈ ಹುಡುಕುತಾಣಗಳಿಗೆ ನಮ್ಮ ಡಿಜಿಟಲ್ ಕುರುಹುಗಳು ಪಟ್ಟಿಯಾಗದಂತೆ ಮಾಡಬಹುದು. ನಮ್ಮಲ್ಲಿ ಈ ತರಹದ ಕಾನೂನು ಇಲ್ಲವಾದರೂ ಕೋರ್ಟ್'ಗಳ ನಿರ್ದೇಶನಗಳ ಮೂಲಕ ಹುಡುಕು ತಾಣ ಕಂಪನಿಗಳಿಗೆ ವಿನಂತಿಸಿಕೊಳ್ಳಬಹುದು. ಇತ್ತೀಚಿಗೆ ನಾನು ಈಗಿರುವ ರಷ್ಯದಲ್ಲೂ ಈ ತರದ ಕಾನೂನು ಒಂದನ್ನು ತರಲಾಗಿದೆ (ಜನರನ್ನು ಇದ್ದಕ್ಕಿದಂತೆಯೇ ಕಾಣೆ ಮಾಡಿಸುವುದರಲ್ಲಿ ಹಿಂದೊಮ್ಮೆ ಕುಖ್ಯಾತಿ ಪಡೆದಿದ್ದ ಸೋವಿಯತ್ ಒಕ್ಕೂಟದ ಮಾತೃ ದೇಶವಾಗಿರೋ ರಷ್ಯ ದಲ್ಲಿಯೇ ಈ ತರದ ಒಂದು ಕಾನೂನು ಬೇಕಾಗಿದೆ ಅಂದ್ರೆ ಈ ಹುಡುಕು ತಾಣಗಳ ಕಬಂಧ ಬಾಹುಗಳು ಅದೆಷ್ಟು ಬಲಿಷ್ಠ ಅನ್ನೋದನ್ನ ಊಹಿಸಿ ). ಇದರ ಹೆಸರು "right to be forgotten" ಎಂದಾಗಿದ್ದು ಇದರಿಂದ ರಶಿಯಾದ ಪ್ರಜೆಗಳಿಗೆ ಹುಡುಕುತಾಣಗಳಿಂದ ತಮಗೆ ಸಂಬಂಧಿಸಿದ ಮಾಹಿತಿಯನ್ನು ಪಟ್ಟಿ ಮಾಡದೇ ಇರುವಂತೆ ನಿರ್ದೇಶನ ನೀಡುವ ಹಕ್ಕನ್ನು ನೀಡಲಾಗಿದೆ (ರಷಿಯ ಗೆ ಸಂಬಂದಿಸಿದ ಸರ್ವರ್'ಗಳಿಂದ). ಇದರಲ್ಲೂ ಹಲವು ಕರಾರುಗಳಿದ್ದು, ಅಪರಾಧಿ ಹಿನ್ನಲೆಯವರಿಗೆ, ಹಿಂದೆ ಶಿಕ್ಷೆಯಾಗಿರುವವರಿಗೆ ಈ ಹಕ್ಕು ಲಾಗೂ ಆಗುವುದಿಲ್ಲ. ಸರ್ಕಾರೀ ನೌಕರಿದಾರರು ತಮ್ಮ ಆದಾಯಕ್ಕೆ ಸಂಬಂದಿಸಿದ ದಾಖಲೆಗಳಿಗೆ ಸಂಪರ್ಕಿಸುವ ಜಾಲತಾಣಗಳನ್ನು ಪಟ್ಟಿ ಮಾಡದಿರುವಂತೆ ವಿನಂತಿಸುವಂತಿಲ್ಲ. ಈ ಕಾನೂನಿನ ಪ್ರಕಾರ ಹುಡುಕುತಾಣಗಳು ವಿನಂತಿಸಿದ ಹತ್ತು ದಿನದೊಳಗಾಗಿ ಮೂಲಮಾಹಿತಿಯಿರುವ ಜಾಲತಾಣಗಳಿಗೆ ಸಂಪರ್ಕ ನೀಡುವ ಯಾವುದೇ ಜಾಲಕೊಂಡಿಗಳನ್ನು ಪಟ್ಟಿ ಮಾಡುವಂತಿಲ್ಲ. ಸರಳವಾಗಿ ಹೇಳಬೇಕಾದರೆ ಅರ್ಜಿದಾರರ ಹೆಸರನ್ನು ಗೂಗಲ್'ನಂತಹ ಹುಡುಕುತಾಣಗಳಲ್ಲಿ ಹುಡುಕಿದರೆ ಸದರಿ ವ್ಯಕ್ತಿಗೆ ಸಂಬಂದಿಸಿದ ಮಾಹಿತಿಯಿರುವ ಯಾವುದೇ ಜಾಲತಾಣ ಪಟ್ಟಿಯಾಗುವುದಿಲ್ಲ.
ಇದು ಸರಿ, ನಮ್ಮನ್ನು ಗೂಗಲ್'ನಿಂದ ಅಂತೂ ಮರೆಮಾಚಬಹುದು ಆದರೆ ಡಿಜಿಟಲ್ ಜಗತ್ತಿನಲ್ಲಿರುವ ನಮ್ಮೆಲ್ಲ ಮಾಹಿತಿಯನ್ನು ಒಂದೇ ಬಾರಿಗೆ ಅಳಿಸಿಹಾಕುವಂತೆ, ಆ ಮೂಲಕ ನಾವು ಡಿಜಿಟಲ್ ಜಗತ್ತಿನಿಂದ ಕಾಣೆಯಾಗಿ ಹೋಗುವ ಹಾಗೆ ಮಾಡುವ ಸಾಧ್ಯತೆಗಳು ಇನ್ನೂ ಬರಬೇಕಿದೆ.
Sunday, June 19, 2016
ವರ್ನೆರ್ ಹೈಸೆನ್ಬರ್ಗ್
ವರ್ನೆರ್
ಹೈಸೆನ್ಬರ್ಗ್ ಬಹುತೇಕ ಭೌತವಿಜ್ಞಾನ ವಿದ್ಯಾರ್ಥಿಗಳಿಗೆ
ಚಿರಪರಿಚಿತ ಹೆಸರು. ತನ್ನ ಮೂವತ್ತೊಂದರ ಹರೆಯದಲ್ಲಿಯೇ ನೊಬೆಲ್ ಪಾರಿತೋಷಕಕ್ಕೆ ಭಾಜನನಾದವ. ಹಾಗೆ
ನೋಡಿದಲ್ಲಿ ನೊಬೆಲ್ ಪಡೆದವರಲ್ಲಿಯೇ ಮೂರನೇ ಅತೀ ಕಿರಿಯವ. ಬರೀ ವಿಜ್ಞಾನವನ್ನಷ್ಟೇ ಪರಿಗಣಿಸಿದರೆ ಎರಡನೇ ಅತೀ ಕಿರಿಯವ (ಅತೀ ಕಿರಿಯ
ವಿಜ್ಞಾನಿ ಲಾರೆನ್ಸ್ ಬ್ರಾಗ್, ತಮ್ಮ ೨೫ ನೇ ವಯಸ್ಸಿನಲ್ಲಿ). ಇನ್ನೊಂದು ವಿಷಯ, ನೊಬೆಲ್ ಪಡೆದ
ಅತೀ ಕಿರಿಯರಲ್ಲಿ ಮೊದಲ ಆರು ಜನ ಭೌತವಿಜ್ಜಾನಿಗಳೇ ಆಗಿರುವುದು ವಿಶೇಷ (ಇದರಲ್ಲಿ ಕಳೆದ ಬಾರಿ
ನೊಬೆಲ್ ಶಾಂತಿ ಪುರಸ್ಕಾರ ಗಳಿಸಿದ ಮಲಾಲ ಯೋಸುಫಾಜೈ ಳನ್ನು ಪರಿಗಣಿಸಿಲ್ಲ). ಇರಲಿ ಈಗ
ಹೇಳಹೊರಟಿರುವ ವಿಚಾರಕ್ಕೆ ಬರೋಣ. ಇಂಥಹ ಅಪ್ರತಿಮ ವಿಜ್ಞಾನಿಯಾಗಿದ್ದ ಹೈಸೆನ್’ಬರ್ಗ್ ತಮ್ಮ ಪಿ ಎಚ್ಡಿ
ಮೌಖಿಕ ಪರೀಕ್ಷೆಯಲ್ಲಿ ನಪಾಸಗುವುದರಲ್ಲಿದ್ದರು ಅಂದ್ರೆ
ನಂಬಬಹುದೇ? ಆಗಿದ್ದೇನು ಅಂದರೆ, ಹೈಸೆನ್’ಬರ್ಗ್ ರಿಗೆ ಸೈದ್ಧಾಂತಿಕ ಭೌತ ವಿಜ್ಞಾನವೆಂದರೆ ಎಷ್ಟು
ಒಲವಿತ್ತೋ ಅಷ್ಟೇ ತಿರಸ್ಕಾರ ಭಾವ ಪ್ರಾಯೋಗಿಕ ಭೌತವಿಜ್ಞಾನದ ಕಡೆಗಿತ್ತು. ಆದರೆ ಅದೇ ವಿಶ್ವವಿದ್ಯಾಲಯದಲ್ಲಿದ್ದ ಪ್ರೊಪೆಸರ್ ವೀನ್ ರವರ ಪ್ರಕಾರ ಪ್ರತಿಯೊಬ್ಬ ಸೈದ್ಧಾಂತಿಕ ವಿಜಾನಿಯೂ ತಕ್ಕಮಟ್ಟಿನ ಪ್ರಾಯೋಗಿಕ ಜ್ಞಾನವನ್ನೂ ಗಳಿಸಬೇಕಿತ್ತು. ಅದರಂತೆ ಹೈಸೆನ್’ಬರ್ಗ್ ಪ್ರಾಯೋಗಿಕ
ಭೌತವಿಜ್ಞಾನಕ್ಕೆ ಸಂಬಂಧಿಸಿದ ಕೋರ್ಸ್ ಒಂದನ್ನೂ ತೆಗೆದುಕೊಳ್ಳಬೇಕಾಯಿತು ಮತ್ತು ಆ ಕೋರ್ಸ್ ಬಲವಂತದ
ಮಾಘ ಸ್ನಾನವಾಗಿತ್ತೆಂದು ಹೇಳಬೇಕಿಲ್ಲ ತಾನೇ! ಮುಂದೆ ಇದೇ ಅವರ ಪಿ. ಎಚ್ಡಿ.ಯ ಮೌಖಿಕ ಪರೀಕ್ಷೆಯಲ್ಲಿ
ಕಾಡಿತು.
ಹೈಸೆನ್’ಬರ್ಗ್ ಆಗಾಗಲೇ
ಕ್ವಾಂಟಮ್ ಮೆಕಾನಿಕ್ಸ್ ನಲ್ಲಿ ಕೆಲವೊಂದು ಸಮಸ್ಯೆ ಗಳಿಗೆ ವಿವಾದಾತ್ಮಕ ಪರಿಹಾರಗಳನ್ನು ನೀಡುವುದರ ಮುಖಾಂತರ ಕುಪ್ರಸಿದ್ಧಿಯನ್ನು
ಗಳಿಸಿದ್ದರು. ಇದನ್ನು ಅರಿತಿದ್ದ ಅವರ ಮಾರ್ಗದರ್ಶಕರಾಗಿದ್ದ ಪ್ರೊ. ಸೊಮ್ಮರ್’ಫೀಲ್ಡ್ ತಮ್ಮ ಶಿಷ್ಯನಿಗೆ
ಯಾವುದೇ ವಿಘ್ನಗಳು ಬರದಿರಲೆಂದು ಥೀಸಿಸ್’ನ್ನು ಥೆರ್ಮೋಡೈನಾಮಿಕ್ಸ್ ಅನ್ನು ಅನ್ನು ಆಧಾರವಾಗಿರಿಸಿ ಬರೆಯುವಂತೆ
ಸೂಚಿಸಿದ್ದರು. ಕೊನೆಗೆ ಹೈಸೆನ್’ಬರ್ಗ್ ತಮ್ಮ ಥೀಸಿಸ್ ಅನ್ನು ಅದರಂತೆಯೇ ಬರೆದು ಸಲ್ಲಿಸಿದ್ದು
ಆಯಿತು, ಹಾಗೆಯೇ ಸ್ವೀಕೃತವೂ ಆಯಿತು, ನಂತರ ಬಂದಿದ್ದು ಮೌಖಿಕ ಪರೀಕ್ಷೆ! ಇವನ ದುರಾದೃಷ್ಟಕ್ಕೆ ನಾಲ್ಕು ಪ್ರೊಫೆಸರ್’ಗಳಿದ್ದ ಪರೀಕ್ಷಾ ಸಮಿತಿಯಲ್ಲಿ ಪ್ರೊ. ವೀನ್ ಕೂಡ
ಇದ್ದರು. ಪರೀಕ್ಷೆ ಶುರುವಾಯಿತು, ೨೧ರ ಹರೆಯದ ಹೈಸೆನ್’ಬರ್ಗ್ ಸೋಮ್ಮೆರ್ ಫೀಲ್ಡ್‘ರು ಕೇಳಿದ
ಪ್ರಶ್ನೆಗಳಿಗೆ ಹಾಗೂ ಇನ್ನಿತರೇ ಪ್ರೊಫ್ ಗಳು ಕೇಳಿದ ಗಣಿತಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ
ಸುಲಭದಲ್ಲೇ ಉತ್ತರಗಳನ್ನು ಕೊಟ್ಟ. ಆದರೆ ಖಗೋಳ ವಿಜ್ಞಾನ ಆದಾರಿತ ಪ್ರಶ್ನೆಗಳು ತೂರಿಬರುತ್ತಿದ್ದಂತೆ
ತಡವರಿಸಲಾರಂಭಿಸಿದ ಹೈಸೆನ್’ಬರ್ಗ್ ಪ್ರಾಯೋಗಿಕ ಭೌತವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳು
ಬಂದಾಗ ಮಖಾಡೆ ಮಲಗಿಬಿಟ್ಟ!! ಪ್ರಶ್ನೆಯು ಇಂಟರ್’ಫೆರೋಮೀಟರ್ ನ ರೆಸಾಲ್ವಿಂಗ್ ಪವರ್’ನ ಬಗ್ಗೆ
ಯಾಗಿತ್ತು. ಅದರ ಉತ್ತರ ಬಿಡಿ, ಅವನಿಗೆ ಸಾಮಾನ್ಯ ಸೂಕ್ಷ್ಮದರ್ಶಕ ಗಳ ರೆಸೋಲ್ವಿಂಗ್ ಪವರ್ ಅನ್ನು
ಹ್ಯಾಗೆ ಕಂಡುಹಿಡಿಯುವುದು ಅನ್ನೋದೇ ಗೊತ್ತಿರಲಿಲ್ಲ. ಇದನ್ನು ಅರಿತ ವೀನ್ ಕೆಂಡಾಮಂಡಲವಾಗಿ
ಹೋಗ್ಲಿ ಅತ್ಲಾಗೆ ವಿದ್ಯುತ್ ಕೋಶಗಳು ಹ್ಯಾಗೆ ಕಾರ್ಯ ನಿರ್ವಹಿಸುತ್ತವೆ ಅಂತಲಾದರೂ ಹೇಳು ಅಂದಾಗ
ಅದಕ್ಕೂ ಉತ್ತರ ಬಲಿಲ್ಲ. ಹೈಸೆನ್’ಬರ್ಗ್ ಬೇರೆ ವಿಭಾಗ ಗಳಲ್ಲಿ ಅದೆಷ್ಟೇ ಮೇಧಾವಿಯಾಗಿರಲಿ
ಇಂತಹ ಸಣ್ಣ ಪ್ರಶ್ನೆಗೆ ಉತ್ತರಿಸದಿದ್ದ ಮೇಲೆ ಅವನನ್ನು ನಪಾಸು ಮಾಡುವುದೇ ಉತ್ತಮ ಅನ್ನೋ ನಿರ್ಧಾರಕ್ಕೆ
ಬಂದುಬಿಟ್ಟಿದ್ದರು ಪ್ರೊ. ವೀನ್. ಕೊನೆಗೆ ಹೈಸೇನ್'ಬರ್ಗ್ ನ ಸಹಾಯಕ್ಕೆ ಬಂದಿದ್ದು ಪ್ರೊ. ಸೊಮ್ಮರ್’ಫೀಲ್ಡ್. ಶಿಷ್ಯನ ರಕ್ಷಣೆಗಿಳಿದ ಅವರು ಪ್ರೊ. ವೀನ್ ಜೊತೆ ಸೈದ್ಧಾಂತಿಕ
ಹಾಗು ಪ್ರಾಯೋಗಿಕ ವಿಜ್ಞಾನಗಳ ತುಲನಾತ್ಮಕ ಪ್ರಾಮುಖ್ಯತೆ ಮೇಲೆ ವಾಗ್ವಾದಕ್ಕೇ ಇಳಿದರು. ಕೊನೆಗೆ
ವೀನ್ ಸೋಲೊಪ್ಪಿ ಕನಿಷ್ಠ ಅಂಕ ಗಳನ್ನ ಕೊಟ್ಟು ಪಾಸು ಮಾಡಿದ್ದಾಯಿತು! ತನ್ನ ತರಗತಿಯ ಎಲ್ಲಾ ಪರೀಕ್ಷೆಗಳಲ್ಲಿ
ಮೊದಲಿಗನಾಗಿರುತ್ತಿದ್ದ ಹೈಸೇನ್'ಬರ್ಗ್'ಗೆ ಇದು ಆಘಾತಕಾರಿ ವಿಚಾರವೇ ಆಗಿತ್ತು. ಇದರಿಂದಾಗಿ ಸಂಜೆ
ಏರ್ಪಡಿಸಿದ್ದ ಔತಣಕೂಟದಲ್ಲಿಯೂ ಭಾಗವಹಿಸದೇ ಮೌಖಿಕ ಪರೀಕ್ಷೆಯಾದ ದಿನವೇ ಗಂಟು ಮೂಟೆ ಕಟ್ಟಿದ್ದ
ಆಸಾಮಿ ಹೈಸೆನ್‘ಬರ್ಗ್!!
ಕಥೆ ಇಲ್ಲಿಗೇ ಮುಗಿಯಲಿಲ್ಲ,
ಮುಂದೆ ಹೈಸೆನ್’ಬರ್ಗ್ ತಮ್ಮ ಅನ್’ಸರ್ಟೈನಿಟಿ ಸಿದ್ಧಾಂತ ಕ್ಕೆ (Heisenberg Uncertainty Principle) ಸಂಬಂಧಿಸಿದ ಸಮೀಕರಣಗಳನ್ನು ಬಿಡಿಸುವಾಗ, ಆತ ಸೂಕ್ಷ್ಮ ದರ್ಶಕದ ರೆಸಾಲ್ವಿಂಗ್ ಪವರ್’ಆನ್ನೇ ಬಳಸಬೇಕಾಗಿ ಬಂತು!! ಆಗಲೂ ಅದು
ಅವನಿಗೆ ಕಷ್ಟವೇ ಆಗಿತ್ತು ಬಳಸಿದ್ದ. ಆಮೇಲೆ ನೀಲ್ಸ್ ಬೋರ್ ಆ ತಪ್ಪನ್ನು ಎತ್ತಿ ತೋರಿಸಿದಾಗ
ಅವನಿಗೆ ತುಂಬಾ ಬೇಸರವಾಗಿತ್ತು. ಮುಂದೆ ಬೋರ್ ನ ಸಹಾಯದಿಂದಲೇ ಭೌತವಿಜ್ಞಾನಕ್ಕೆ ಸಂಬಂಧಿಸಿದ
ಕೆಲವು ವಿಷಯಗಳ ಕುರಿತಂತೆ ತನ್ನ ಸ್ವಂತ ಅಭಿಪ್ರಾಯಗಳನ್ನು ರೂಪಿಸಲು ಸಾಧ್ಯವಾಯಿತು. ಇದೇ ಸಹಯೋಗ
ಮುಂದುವರೆದು ಕ್ವಾಂಟಮ್ ವಿಜ್ಞಾನದ ಕೋಪನ್’ಹೇಗನ್ ವ್ಯಾಖ್ಯಾನ ಎಂದೇ ಹೆಸರಾಯಿತು.
Wednesday, April 20, 2016
ಗಗನಕ್ಕೇರಿದವ!
![]() |
ಚಿತ್ರ ೧ ಯೂರಿ ಗಗಾರಿನ್
|
ಯೂರಿ ಗಗಾರಿನ್ (ಪೂರ್ಣ ಹೆಸರು: ಯೂರಿ ಅಲೆಕ್ಸಿಯೇವಿಚ್ ಗಗಾರಿನ್), ಈ ಹೆಸರು ಕೇಳಿರದ ವಿಜ್ಞಾನ ವಿದ್ಯಾರ್ಥಿಗಳು ಕಡಿಮೆ. ಬಾಹ್ಯಾಕಾಶಕ್ಕೆ ನೆಗೆದ ಮೊದಲ ಮಾನವ, ಜೀವಂತವಾಗಿ ವಾಪಾಸ್ ಬಂದ ಮೊದಲ್ನೇ ಸಜೀವಿ. ಇವರ ಬಗೆಗಿನ ಹತ್ತು ಸ್ವಾರಸ್ಯಕರ ವಿಚಾರಗಳನ್ನು ಹೇಳೋಣ ಇವತ್ತು ಅಂತ
೧. "ಪಯೇssಖಾಲಿ"- ಇದೇ ಪದವಂತೆ ಆತ ಹೇಳಿದ್ದು ಉಡಾವಣೆಯಾಗುವ ಸಮಯದಲ್ಲಿ. ಈ ರಷ್ಯನ್ ಪದದ ಅರ್ಥ “ಹೊರಡೋಣ” ಎಂದು. ಪ್ರೋಟೋಕಾಲ್ ಪ್ರಕಾರ “crew taking off” ಅನ್ನಬೇಕಿದ್ದರೂ ಉಪಯೋಗಿಸಿದ್ದು ಮಾತ್ರ ರಷ್ಯನ್!
೨. ಯೂರಿ, ಉಡಾವಣೆಗೂ ಮುನ್ನ ತನ್ನ ಹೆಂಡತಿಗೆಂದು ಪತ್ರ ಬರೆದಿದ್ದನಂತೆ, ತಾನು ಮರಳಿ ಬಾರದಿದ್ದ ಪಕ್ಷದಲ್ಲಿ ತೆರೆದು ಓದಲು. ಆದರೆ, ಅದರ ಅಗತ್ಯತೆ ಬರಲಿಲ್ಲ. ಮುಂದೆ, ಯೂರಿ ವಿಮಾನ ಅವಘಡವೊಂದರಲ್ಲಿ ದುರ್ಮರಣಕ್ಕೀಡಾದಾಗ, ಹೆಂಡತಿ ವೇಲೆ೦ಟೀನಾ ಅದನ್ನು ಓದುತ್ತಾರಂತೆ.
ಚಿತ್ರ ೨ ಮಾಸ್ಕೋದ ಗಗಾರಿನ್ ಚೌಕದಲ್ಲಿ
|
![]() |
ಚಿತ್ರ ೩ ಮಾಸ್ಕೋದ ಗಗನಯಾತ್ರಿಗಳ ಮ್ಯೂಸಿಯಂನ
|
೫. ಗಗಾರಿನ್ ಆಗಿನ ಸೋವಿಯತ್ ನಾಯಕ ನಿಕಿತಾ ಕುರುಶ್ಚೆವ್ ರನ್ನು ಭೇಟಿಯಾಗಲು ಮಾಸ್ಕೋಗೆ ಬಂದಿಳಿದಾಗ ಆತ ಎಲ್ಲರಂತೆಯೇ ಸಾಮಾನ್ಯ ಮನುಷ್ಯ ಎಂದು ಗುರುತಿಸಿದ್ದೇ ಒಂದು ಸಣ್ಣ ಸಂಗತಿಯಿಂದ. ಏನಾಗಿತ್ತೆ೦ದರೆ, ತನ್ನ ಶೂ ಗಳ ಲೇಸ್ ಅನ್ನು ಕಟ್ಟುವುದನ್ನೇ ಮರೆತಿದ್ದನಂತೆ. (ಬಾಹ್ಯಾಕಾಶ ಯಾನದಿಂದ ವಾಪಸ್ಸಾದ ಕ್ಷಣದಿಂದಲೇ ಇವನ ಬಗ್ಗೆ ಹಲವಾರು ಫ್ಯಾಂಟಸಿ ಕಥೆಗಳೇ ಹುಟ್ಟಿದ್ದರಿಂದ ಅನೇಕರಿಗೆ ಅವನ ಅತಿಮಾನವನೇ ಇರಬೇಕು ಎಂಬ ಗುಮಾನಿಯಿದ್ದರಿಂದ)
![]() |
ಚಿತ್ರ ೫ ಮಾಸ್ಕೋದ ಗಗನಯಾತ್ರಿಗಳ ಮ್ಯೂಸಿಯಂನ ಹೊರ ನೋಟ. |
೬. ಗಗಾರಿನ್’ನ ಫೋಟೋ ನೋಡಿದವರಿಗೆ ಆತನ ಹುಬ್ಬಿನ ಮೇಲಿನ ಗಾಯದ ಗುರುತು ಗೊತ್ತಿರುತ್ತೆ (ಫ್ಯಾಂಟಸಿ ಕಥೆಗಳಿಗೆ ಇದೂ ಒಂದು ಮೂಲ). ಈ ಗುರುತಾಗಿದ್ದು ಗಗಾರಿನ್ ವಿಹಾರಕ್ಕೆಂದು ಬ್ಲಾಕ್ ಸೀ ರೆಸಾರ್ಟ್ ಒಂದಕ್ಕೆ ಹೋಗಿದ್ದಾಗ (೧೯೬೧ ಸೆಪ್ಟೆಂಬರ್). ಆಗ ಏನಾಯಿತೆಂದರೆ, ಇವನು ಹೆಂಡತಿಯನ್ನು ಬಿಟ್ಟು ಇನ್ಯಾವುದೋ ಹೆಣ್ಣಿನ ಜೊತೆ ಕೋಣೆಯಲ್ಲಿ ಇದ್ದನಂತೆ, ಆಗ ಧಿಡೀರ್ ಅಂತ ಬಂದ ಹೆಂಡತಿಯ ಕೈಯಲ್ಲಿ ತಪ್ಪಿಸಿಕೊಳ್ಳುವ ಭರದಲ್ಲಿ ಕಿಟಕಿಯಿಂದ ಹೊರಕ್ಕೆ ಹಾರಿದಾಗ ಬಂಡೆಗಲ್ಲೊಂದು ಬಡಿದು ಆದ ಗಾಯ ಅದು!!
೭. ಗಗಾರಿನ್ ಹಾಗೂ ಇನ್ನೊಬ್ಬ ಫೈಟರ್ ಜೆಟ್ ಭೋದಕ ವ್ಲಾಡಿಮಿರ್ ಸೇರ್ಯೋಜನ್ ರಷ್ಯದ ಕಿರ್ಜಾಕ್ ಎಂಬ ಪಟ್ಟಣದ ಸಮೀಪ ಘಟಿಸಿದ MiG-15UTI ಫೈಟರ್ ಜೆಟ್ ಪತನದಲ್ಲಿ ಸಾವಿಗೀಡಾಗುತ್ತಾರೆ. ಇಬ್ಬರ ಅಂತ್ಯಕ್ರಿಯೆಯ ನಂತರ, ಚಿತಾಭಸ್ಮವನ್ನು ಕ್ರೆಮ್ಲಿನ್** ನ ಗೋಡೆಯಲ್ಲಿ ಹೂಳಲಾಗಿದೆ.
೮. ಗಗಾರಿನ್’ಗೆ ಇಬ್ಬರು ಹೆಣ್ಣುಮಕ್ಕಳು, ಒಬ್ಬರು ಮಾಸ್ಕೋ ಕ್ರೆಮ್ಲಿನ್ ವಸ್ತುಸಂಗ್ರಹಾಲಯಗಳ ಮುಖ್ಯ ವ್ಯವಸ್ಥಾಪಕಿಯಾಗಿ ಕಾರ್ಯನಿರ್ವಹಿಸುತಿದ್ದರೆ ಮತ್ತೊಬ್ಬರು ಮಾಸ್ಕೋದ ಪ್ಲೆಖನೋವ್ ಅರ್ಥಶಾಸ್ತ್ರ ವಿವಿ ಯಲ್ಲಿ ಪ್ರೊಫೆಸರ್.
![]() |
ಚಿತ್ರ ೬ ಶಿಲ್ಪಿಯ ಕಣ್ಣಲ್ಲಿ ಉಡ್ಡಯನ |
೧೦. ಗಗಾರಿನ್ ಬಾಹ್ಯಾಕಾಶಯಾನ ಮಾಡಿದ ದಿನ (ಎಪ್ರಿಲ್ ೧೨) ವನ್ನು ರಷಿಯದಲ್ಲಿ ಗಗನಯಾತ್ರಿಗಳ ದಿನವೆಂದು ಆಚರಿಸಲಾಗುತ್ತೆ. ೨೦೧೧ರಲ್ಲಿ, ಎಪ್ರಿಲ್ ೧೨ ನ್ನು international day of human space flight ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ೬೦ ರಾಷ್ಟ್ರಗಳಿಂದ ಘೋಷಿಸಲಾಯಿತು.
ಈ ವರ್ಷದ ಎಪ್ರಿಲ್ ಹನ್ನೆರಡಕ್ಕೆ, ಯೂರಿ ಗಗಾರಿನ್ ಮೊದಲ ಮಾನವ ಗಗನಯಾತ್ರೆ ಕೈಗೊಂಡು ೫೫ ವರ್ಷಗಳಾಯಿತು. ಅದಕ್ಕೆಂದೇ ಈ ಬರಹ.
![]() |
ಚಿತ್ರ ೭ ಬಾಹ್ಯಾಕಾಶದಿಂದ ಭೂಮಿಯನ್ನು ಸುತ್ತು ಹಾಕಿದ
|
*ಗಗಾರಿನ್'ರಿಗೆ ಸೋಯಿಯತ್ ಯೂನಿಯನ್'ನ ಅತ್ಯುನ್ನತ "ಹೀರೋ ಆಫ್ ಸೋವಿಯತ್ ಯೂನಿಯನ್" ಹಾಗೂ "ಆರ್ಡರ್ ಆಫ್ ಲೆನಿನ್" ಪ್ರಶಸ್ತಿಗಳನ್ನು ಕೊಡಲಾಗಿದೆ.
**ಕ್ರೆಮ್ಲಿನ್ ಅಥವಾ ಮಾಸ್ಕೋ ಕ್ರೆಮ್ಲಿನ್ ಮಾಸ್ಕೋದ ಹೃದಯಭಾಗದಲ್ಲಿ ಇರುವ ಒಂದು ಪುರಾತನ ಕೋಟೆ. ಕ್ರಿ.ಶ. ೧೪೦೦ರ ಸುಮಾರಿಗೆ ಕಟ್ಟಲಾದ ಇದು ಯುನೆಸ್ಕೋ ಹೆರಿಟೇಜ್ ಸೈಟ್ ಆಗಿದೆ. ಹಿಂದಿನಿದಲೂ ಆಡಳಿತದ ಕೇಂದ್ರವಾಗಿದ್ದ ಇದು ಈಗಲೂ ಹಾಗೇ ಮುಂದುವರೆದಿದೆ. ರಷ್ಯನ್ ಸರ್ಕಾರದ ಮುಖ್ಯ ಘಟಕಗಳು, ಕೆಲವೊಂದು ಪುರಾತನ ಚರ್ಚುಗಳು, ಅರಮನೆಗಳು ಇದರೊಳಗಿವೆ. ಇದು ಇತಿಹಾಸ ಪ್ರಸಿದ್ದ ರೆಡ್ ಸ್ಕ್ವೇರ್ ಅಥವಾ ಕೆಂಪು ಚೌಕಕ್ಕೆ ಅಂಟಿಕೊಂಡಂತೆ ಇದೆ.
(ಚಿತ್ರ ೧ ರ ಮೂಲ:ಇಂಟರ್'ನೆಟ್, ಇನ್ನುಳಿದವು-ನಾನೂ ಹಾಗೂ ನನ್ನ ಸ್ನೇಹಿತರು ತೆಗೆದಿದ್ದು)
ಸೂಚನೆ: ಈ ಬರಹದ ಬಹುಪಾಲು rt.com ನಲ್ಲಿ ಪ್ರಕಟವಾಗಿದ್ದ ಲೇಖನವೊಂದರ ಭಾವಾನುವಾದ
Sunday, January 3, 2016
ಹೊಸವರುಷದ ಕನವರಿಕೆಗಳು
ಮೊನ್ನೆ ಹೊಸ ವರುಷ ಶುರುವಾದದ್ದು ಎಲ್ಲರಿಗೂ ಗೊತ್ತೇ ಇದೆ. ಮಾಸ್ಕೋನಲ್ಲಿ ಹೊಸ ವರುಷ ಅಂದ್ರೆ ಸಿಕ್ಕಾಪಟ್ಟೆ ಹುರುಪು. ಡಿಸೆಂಬರ್ ಕೊನೇ ವಾರದಿಂದಲೇ ತಯಾರಿಗಳು ಶುರುವಾಗಿ ಬಿಡ್ತಾವೆ. ಈ ಸಲವೂ ಭರ್ಜರಿ ತಯಾರಿ ನಡೆದಿತ್ತು. ಕಳೆದ ಬಾರಿ ಹ್ಯಾಗೋ ಮಾಡಿ ಡಿಸೆಂಬರ್ ೩೧ರ ರಾತ್ರಿ ನೆಮ್ಮದಿಯಾಗಿ ಮನೇಲಿ ನಿದ್ದೆ ಮಾಡಿದ್ದೆ. ಆದರೆ ಈ ಬಾರಿ ನನ್ನ ನಿದ್ದೆಗೆ ಸಂಚಕಾರ ಹಾಕಲೆಂದೇ ನನ್ ಸಹೋದ್ಯೋಗಿ ಬಾಸ್ ಡಿಸೆಂಬರ್ ಮೊದಲ್ನೇ ವಾರದಿಂದಲೇ ನಾನು ಈ ಬಾರಿ ಆತನ ಮನೆಗೆ ಹೋಗಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಬೇಕೆಂದು ವರಾತ ತೆಗೆದುಬಿಟ್ಟಿದ್ದ. ನನಗೋ ಇದೆಲ್ಲ ಸುತಾರಾಂ ಇಷ್ಟವಿರಲಿಲ್ಲ, ಮೇಲಾಗಿ ನಾನು ಅರಸಿಕ, ಅಲ್ಕೋಹಾಲು-ಮಾಂಸ ಎರಡೂ ಮುಟ್ಟಲ್ಲ!! ಈ ಎರಡೂ ಇಲ್ಲದೆ ಯಾವ ರಷ್ಯನ್ ಕೂಡ ಜೀವಿಸಲಾರ. ಅಲ್ಲಿಗೆ ಹೋದಲ್ಲಿ ನನ್ನ ಮೂರು ಹೊತ್ತಿನ ಊಟ ನಾಸ್ತಿ ಎಂದು ತಿಳಿದೇ ನಾನು ಬರಲಾರೆ ಎಂದು ಅವನಿಗೆ ಹೇಳಿದ್ದೆ. ಹ್ಯಾಗಾದರೂ ಮಾಡಿ ತಪ್ಪಿಸಿಕೊಳ್ಳುವ ಎಂದು ಹೊಂಚು ಹಾಕಿದ್ದೆ. ಕೊನೆಗೆ ಅವನ ಅಳುಮೋರೆಯನ್ನು ನೋಡಲಾರದೆ ಒಲ್ಲದ ಮನಸ್ಸಿನಿಂದೆ ಒಪ್ಪಿಕೊಂಡೆ.
೩೧ ಬಂದೇ ಬಿಟ್ಟಿತ್ತು, ಇವನ ಫೋನ್ ಕರೆಗಳು ಬೆಳಗಾಗುವುದರೊಡನೆಯೇ ಶುರುವಾಗಿದ್ದವು. ಅಂತೂ ಇಂತೂ ಮಧ್ಯಾನ್ಹದ ಹೊತ್ತಿಗೆ ಮನೆ ಸೇರಿಯಾಗಿತ್ತು. ಅವನ ಪಾನ ಗೋಷ್ಠಿ ಆಗಾಗಲೇ ಚಾಲನೆಯಾಗಿತ್ತು. ಅಡುಗೆಮನೆಯಲ್ಲಿ ಅದೆಂತದೋ ಭಕ್ಷ್ಯಗಳ ತಯಾರಿ ನಡೆದಿತ್ತು. ಸರಿ ನಾನೇನು ಮಾಡುವುದು?? ಹ್ಯಾಗಿದ್ದರೂ ಇಂಟರ್ನೆಟ್ ಇತ್ತಲ್ಲ. ಯು-ಟ್ಯೂಬ್ ನಲ್ಲಿ ಅದೂ ಇದೂ ನೋಡಲು ಶುರು ಮಾಡಿದೆ. ಅದನ್ನೂ ಎಷ್ಟು ಹೊತ್ತು ಅಂತ ಮಾಡುವುದು. ಹೊಟ್ಟೆ ಚುರುಗುಟ್ಟುತ್ತಿತ್ತು, ಏನು ಮಾಡೋದು? ನಾನು ತಿನ್ನೋಅಂತಹ ಯಾವುದೇ ತಿನಿಸು ಅಲ್ಲಿ ಕಾಣಲಿಲ್ಲ. ಕೊನೆಗೆ ಒಂದಿಷ್ಟು ಹಣ್ಣಿನ ರಸ ಕುಡಿದು ಮತ್ತೆ ಕಂಪ್ಯೂಟರ್ ನ ಮೊರೆ ಹೊಕ್ಕೆ. ನಡುನಡುವೆ ಆ ನನ್ನ ಬಾಸ್'ನ ಹೊಸ ವರುಷಕ್ಕೆ ಸಂಬಂದಿಸಿದ ಬಗ್ಗೆ ಹುರುಕು-ಮುರುಕು ಆಂಗ್ಲದಲ್ಲಿ ವಿವರಣೆಗಳು ನುಸುಳುತ್ತಿದ್ದವು. ನಾನು ಅವಕ್ಕೆ ತೆಲೆಯಾಡಿಸುವುದು ಅವನು ಮತ್ತೇನೋ ಹೇಳುವುದು ಹೀಗೆ ನಡೆದಿತ್ತು. ಹಾಗೆಯೇ ಮಾತನಾಡುತ್ತ ಒಂದಿಷ್ಟೇನನ್ನೂ ತಿಂದು ಮಲಗೇ ಬಿಟ್ಟ ಆಸಾಮಿ. ನನ್ನ ಹೊಟ್ಟೆ ಕೇಳಬೇಕಲ್ಲ? ಕೊನೆಗೆ ಒಂದಿಷ್ಟು, ಸವತೆ, ಟೊಮ್ಯಾಟೋ, ಒಂದೆರಡು ತುಂಡು ಬ್ರೆಡ್ಡು ಸಿಕ್ತು ಅದನ್ನೇ ತಿಂದು ನನ್ನ ಹೊಟ್ಟೆ ಹೊರೆದುಕೊಳ್ಳಬೇಕಾಯಿತು.
ನಂಗೂ ಹಾಳೂ-ಮೂಳು ನೋಡಿ ಸಾಕಾಗಿತ್ತು. ಏನ್ ನೋಡೋದು ಅಂತ ಯೋಚಿಸುತ್ತಿದ್ದಾಗಲೆ, ಗೃಹಭಂಗ ನನ್ನ ತೆಲೆಯಲ್ಲಿ ಮಿಂಚಿ ಮರೆಯಾಗಿತ್ತು. ಸರಿ ಹುಡುಕಲು ಹೊರಟೆ, ಕಾಸರವಳ್ಳಿಯವರ ದಾರವಾಹಿ ಕ್ಷಣಾರ್ಧದಲ್ಲೇ ಸಿಕ್ಕಾಗ ಖುಷಿಯಾಗಿತ್ತು. ಕೊನೆಗೂ ನನ್ನ ಬೇಸರ ಕಳೆಯುವ ಸಾಧನವೊಂದು ದೊರಕ್ಕಿತ್ತು. ಒಂದಾದ ಮೇಲೊಂದು ಕಂತುಗಳನ್ನ ನೋಡುತ್ತಾ ಮಧ್ಯ ರಾತ್ರಿಯಾಗಿದ್ದೆ ತಿಳಿಯಲಿಲ್ಲ, ಅಷ್ಟರಲ್ಲಿ ಆ ಮಹಾನುಭಾವ ಎದ್ದು, ಊಟದ ಮೇಜನ್ನು ಸಿದ್ದಪಡಿಸಲು ಶುರು ಮಾಡಿದ್ದ, ಕೊನೆಗೂ ಅವರ ತಯಾರಿಗಳು ಮುಗಿದಿತ್ತು. ನಾನೂ ಎದ್ದು ಸ್ವಲ್ಪ ಸಹಾಯ ಮಾಡಿದ್ದೂ ಆಯಿತು. ಊಟದೊಂದಿಗೆ ಪಾನ ಗೋಷ್ಠಿ ಮತ್ತೆ ಸುರುವಾಯ್ತು. ನಂಗೆ ತಿನ್ನಲು ಒಂದಷ್ಟು ಹಣ್ಣುಗಳು, ಸಿಹಿ ತಿನಿಸುಗಳು ದೊರೆತವು. ಟಿವಿಯಲ್ಲಿ ಮಾಸ್ಕೋದ ವಿವಿದೆಡೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳು ನೇರ ಪ್ರಸರಣವಾಗುತ್ತಿದ್ದವು, ಸಮಾನಾಂತರವಾಗಿ ಗಣಕದಲ್ಲಿ ಗೃಹಭಂಗ ಅವ್ಯಾಹತವಾಗಿ ಸಾಗಿತ್ತು. ಇನ್ನೇನು ಹನ್ನೆರಡು ಸಮೀಪಿಸುತ್ತಿದೆ ಎಂದಾಗ, ಟಿವಿ ಪರದೆಯ ಮೇಲೆ ಪುತಿನ್ ಕಾಣಿಸಿಕೊಂಡು ರಷ್ಯನ್ ನಲ್ಲಿ ಹೊಸ ವರುಷದ ಸಂದೇಶ ಕೊಡಲು ಶುರು ಮಾಡಿದಾಗ ಎಲ್ಲರೂ ಎದ್ದು ನಿಲ್ಲಲು ನಾನೂ ನನ್ನ ಗೃಹಭಂಗದಿಂದ ಹೊರಬಂದು ಅವರ ಜೊತೆಗೂಡಬೇಕಾಯಿತು. ಒಂದೆರಡು ನಿಮಿಷಗಳ ನಂತರ ರೆಡ್-ಸ್ಕ್ವೇರ್ ನಲ್ಲಿರೊ ದೊಡ್ಡ ಗಡಿಯಾರ ಹನ್ನೆರಡು ಗಂಟೆಗಳನ್ನ ಬಾರಿಸುವುದರೊಂದಿಗೆ ಕೋಣೆಯಲ್ಲಿ ಹರುಷ ಉಕ್ಕೇರತೊಡಗಿತು. ಹೊಸ ಶಾಂಪೇನ್ ಬಾಟಲಿಯಿಂದ ಮದಿರೆ ನೊರೆ ನೊರೆಯಾಗಿ ಗ್ಲಾಸ್'ಗಿಳಿಯಿತು ನಾನೂ ಅಲ್ಲೇ ಇದ್ದ ಕೋಕ-ಕೋಲಾವನ್ನು ನನ್ನ ಗ್ಲಾಸ್'ಗೆ ತುಂಬಿಸಿದೆ. ಚಿಯರ್ಸ್ ಹೇಳುವ ಮುನ್ನ, ನನ್ನ ಬಾಸ್ ಏನೋ ಹೇಳಲು ಶುರು ಮಾಡಿದ. ನನ್ನೆಡೆ ನೋಡುತ್ತಾ, ಕಳೆದ ವರುಷ ನಾವೆಲ್ಲರೂ ಅತ್ಯುತ್ತಮವಾಗಿ ಕೆಲಸ ಮಾಡಿದ್ದೇವೆ, ಈ ಹೊಸ ವರುಷದಲ್ಲಿ ಇನ್ನೂ ಒಳ್ಳೆಯ ಕೆಲಸಗಳನ್ನು ಮಾಡುವ ಎಂದು ಹೇಳಿ ಚಿಯರ್ಸ್ ಹೇಳಿದ್ದಾಯಿತು. ಸ್ವಲ್ಪ ಹೊತ್ತು ಕೂತು ಮತ್ತೊಂದಿಷ್ಟು ಹಣ್ಣು, ಸಿಹಿ ತಿನಿಸುಗಳನ್ನು ತಿಂದದ್ದಾಯಿತು, ಜೀವಂತವಾಗಿರಬೇಕಿತ್ತಲ್ಲ!! ಮತ್ತೆ ಗೃಹಭಂಗ ನನ್ನನ್ನು ಆಪೋಶನಗೈದಿತ್ತು. ಆದರೆ ಅವನು ಬಿಡಬೇಕಲ್ಲ, ಬನ್ನಿ ಎಲ್ಲರೂ ಇಲ್ಲೇ ಹತ್ತಿರದಲ್ಲಿ ನಡೆಯುತ್ತಿರುವ ಸಂಗೀತ ಕೂಟಕ್ಕೆ ಹೋಗೋಣವೆಂದು ಎಲ್ಲರನ್ನು ಹುರಿದುಂಬಿಸಿದ. ನಾನೂ ಹೊರಡಬೇಕಾಯಿತು, ಮಾಸ್ಕೊನಲ್ಲಿ ಆ ಸರಿರಾತ್ರಿ ಯಲ್ಲಿ ಹೊರ ಹೋಗಬೇಕಂದರೆ ಎಂಟೆದೆ ಇರಲೇ ಬೇಕು, ಸೆಕ್ಯುರಿಟಿ ಸಮಸ್ಯೆಯಲ್ಲ, ಉಷ್ಣಾಂಶ!! ಮೈನಸ್ ೧೫ ರ ಆಸುಪಾಸಿನಲ್ಲಿ ಇತ್ತು. ಈಗೀಗ ನನಗೆ ಹೊಂದಿಕೆ ಯಾಗಿಬಿಟ್ಟಿದೆ, ಅದರೂ ಚಳಿಯಲ್ಲಿ ಹೊರಗೆ ಹೋಗಿ ಕುಣಿಯುವುದು ಅಂದ್ರೆ ಸುಮ್ನೆ ತಮಾಷೆಯಲ್ಲ! ಇನ್ನೇನ್ ಮಾಡೋಕೆ ಆಗುತ್ತೆ ಅಂತ ಜೊತೆಗೆ ಹೋದೆ. ಅಲ್ಲೇ ಹತ್ತಿರದ ಸಮುದಾಯ ಭವನದ ಮುಂದುಗಡೆ ಒಂದು ದೊಡ್ಡ ಕ್ರಿಸ್ಮಸ್ ಮರವನ್ನು ಅಲಂಕರಿಸಿ ಇಟ್ಟಿದ್ರು, ಅದರ ಪಕ್ಕದಲ್ಲೇ ಒಂದೆರಡು ಮಂದಿ ರಷ್ಯನ್ ಸಂತಾ ನ (ರಷಿಯದಲ್ಲಿ ಸಂತಾ ನನ್ನು ಡೆದ್ ಮರೂಜ್ ಅಂತ ಕರೀತಾರೆ, ಅಲ್ಲದೆ ಅವನಿಗೊಬ್ಬಳು ಚಿಕ್ಕ ಮೊಮ್ಮಗಳು, ಸ್ನಿಗುರಿಚ್ಕಾ ಅಂತನೂ ಜೊತೇಲೆ ಇರ್ತಾಳೆ ) ವೇಷ ತೊಟ್ಟು ಹಾಡು ಹೇಳುತ್ತಾ ಜನರನ್ನು ರಂಜಿಸುತ್ತಿದ್ದರು. ಜನ ಬಾಟಲಿಗಳಲ್ಲಿ ತಂದಿದ್ದ ಮದ್ಯವನ್ನು ಕುಡಿಯುತ್ತ ಆ ಕ್ರಿಸ್ಮಸ್ ಮರದ ಸುತ್ತಲೂ ಹರುಷದಿಂದ ಕುಣಿಯುತ್ತಾ ಸುತ್ತುತ್ತಿದ್ದರು. ನಾನೂ ಅಲ್ಲೇ ಬದಿಯಲ್ಲಿ ನಿಂತು ನನ್ನ ಕೊರೆದು ಹೋಗುತ್ತಿದ್ದ ನನ್ನ ಕೈಗಳನ್ನು ಉಜ್ಜಿ ಬೆಚ್ಚಗೆ ಮಾಡಿಕೊಳ್ಳುವ ವ್ಯರ್ಥ ಪ್ರಯತ್ನ ನಡೆಸಿದ್ದೆ.ಆ ನನ್ನ ಬಾಸ್ ಬಿಡದೇ ನನ್ನನೂ ಒಂದೆರಡು ಸುತ್ತು ಹಾಕಿಸಿದ. ಹೀಗೆಯೇ ನಡೆದಿತ್ತು ಸಂಭ್ರಮಾಚರಣೆ, ನಾನು ಗೃಹಭಂಗದ ನಂಜಮ್ಮನ ದೌರ್ಭಾಗ್ಯವನ್ನೂ,ಕಂಠಿ ಜೋಯಿಸರ ದುಡುಕುತನವನ್ನೂ ಮನದಲ್ಲೇ ವಿಮರ್ಶಿಸುತ್ತಾ ನಿಂತಿದ್ದೆ. ಒಂದೆರಡು ಗಂಟೆಗಳು ಸರಿದಿರಬಹುದು, ಅಷ್ಟರಲ್ಲೇ ಜೋರಾಗಿ ಕೇಳುತ್ತಿದ್ದ ಸಂಗೀತ ಸ್ತಬ್ಧವಾಯಿತು, ಹಾಡುಗಾರರು ಹಾಡುವುದನ್ನು ನಿಲ್ಲಿಸಿ ತಮ್ಮ ಪರಿಕರಗಳನ್ನು ಪ್ಯಾಕ್ ಮಾಡುತ್ತಾ ನಿಂತರು.ಸೇರಿದ್ದ ಜನರು ಬೇಗ ನಿಲ್ಲಿಸಿದ್ದಕ್ಕೆ ಬೇಸರವ್ಯಕ್ತಪಡಿಸುತ್ತಾ ವಾಪಾಸ್ ತಮ್ಮ ತಮ್ಮ ಮನೆಗಳಿಗೆ ಹೊರಟರು. ನಾವೂ ನಮ್ಮ ಬಾಸ್ ಜೊತೆ ಹೊರಟೆವು. ಆಹೊತ್ತಿಗಾಗಲೇ ಗಡಿಯಾರ ೩-೩೦ ಎಂದು ತೋರಿಸುತ್ತಿತ್ತು, ಇನ್ನು ಮಲಗಿದರೆ ಬೆಳಗ್ಗೆ ಮದ್ಯಾನ್ಹದ ಮೇಲೆಯೇ ಏಳುವುದು, ನಾಳೆಯೂ ಇವನ ಜೊತೆಗೇ ಸುತ್ತಬೇಕಾದೀತು ಎಂದೆನಿಸಿ, ನಾನು ಗಂಟೆ ಆರರವರೆಗೆ ಎದ್ದಿದ್ದು ನನ್ನ ಮನೆಯಕಡೆಗೆ ಹೊರಡುವುದೆಂದು ತೀರ್ಮಾನಿಸಿ, ನನ್ನ ಬಾಸ್’ಗೂ ಒಪ್ಪಿಸಿ ಮತ್ತೆ ಗೃಹಭಂಗವನ್ನೊಕ್ಕು ಕೂತೆ. ಸಂಗಡಿಗರು ಮತ್ತೊಮ್ಮೆ ತಿನ್ನಲು, ಪಾನ ಸೇವಿಸಲು ಕುಳಿತರು
ನಂಗೆ ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ. ನನ್ನ ಕಿರಿಯ ಸಹೋದ್ಯೋಗಿಯೊಬ್ಬ ಇನ್ನೊಂದು ಹತ್ತು ನಿಮಿಷದಲ್ಲಿ ಹೊರಡಲು ರೆಡಿಯಾಗು ಎಂದಾಗಲೇ ನಂಗೆ ಅರಿವಾಗಿದ್ದು. ಅಷ್ಟೊತ್ತಿಗಾಗಲೇ ಗಂಗಮ್ಮ ಚೆನ್ನಿಗರು ನಂಜಮ್ಮನ ಒಡವೆಗಳನ್ನು ಕಾಸಿಂ ಬಡ್ಡಿ ಸಾಹುಕಾರನ ಹತ್ತಿರ ಅಡಮಾನ ಇಡುವ ನಿರ್ಧಾರ ಮಾಡಿಯಾಗಿತ್ತು. ಒಲ್ಲದ ಮನಸ್ಸಿನಿಂದ ಗೃಹಭಂಗ ವನ್ನು ಅಲ್ಲಿಗೆ ನಿಲ್ಲಿಸಿ ಮನೆಗೆ ಹೋಗುವ ತಯಾರಿ ನೆಡೆಸತೊಡಗಿದೆ. ಮನೆಗೆ ಮರಳುವ ದಾರಿಯಲ್ಲಿ ನನ್ನ ಕಿರಿ ಸಹೋದ್ಯೋಗಿ ಯೊಬ್ಬರು ನಾನು ಇಡೀ ರಾತ್ರಿ ಅಷ್ಟು ಆಸಕ್ತಿಯಿಂದ ನೋಡುತ್ತಿದ್ದ ಆ ಕಾರ್ಯಕ್ರಮವೇನು ಎಂದು ಕೇಳಲು ನಾನು ಅತ್ಯುತ್ಸಾಹದಿಂದ ವಿವರಿಸಲು ಶುರು ಮಾಡಿದೆ. ಭೈರಪ್ಪ ರನ್ನು ಯಾರಿಗೆ ಹೋಲಿಸಿದರೆ ಸರಿಯಾದೀತು ಎಂದು ಯೋಚನೆ ಮಾಡುತ್ತಾ ಇದ್ದಾಗ ತಟ್ಟನೆ ಹೊಳೆದದ್ದು. ಲಿಯೇವ್ ಟಾಲ್’ಸ್ಟಾಯ್ . ಆ ಕಿರಿಯ ಮಿತ್ರ ತುಂಬಾ ಆಸಕ್ತಿಯಿಂದ ಕೇಳಲು ಶುರು ಮಾಡಿದರು. ಹಾಗೆಯೇ ಹೇಳುತ್ತಾ, ಈ ಲಿಯೇವ್ ಅನ್ನೋ ನಾಮವನ್ನು ಆಂಗ್ಲದಲ್ಲಿ ಲಿಯೋ ಎಂದು ಭಾಷಾಂತರಿಸಿದ್ದರ ಬಗ್ಗೆ ಹೇಳಿದಾಗ (ಇದು ಗೊತ್ತಾದದ್ದು ಇನ್ನೊಬ್ಬ fb ಮಿತ್ರ ರೋಹಿತ್’ರಿಂದ) ಆತ ಆಶ್ಚರ್ಯ ದಿಂದ ಹೆಸರನ್ನು ಭಾಷಾಂತರ ಮಾಡುವುದು ತಪ್ಪಲ್ಲ್ಲವೇ ಎಂದ. ನನಗೂ ಅದು ಸರಿ ಎನಿಸಿತು. ಅಷ್ಟರಲ್ಲಿ ನಮ್ಮ ಬಸ್ಸು ಬಂದದ್ದರಿಂದ ನಮ್ಮ ಮಾತುಕತೆ ತುಂಡರಿಸಿ ಹೋಯಿತು. ಬಸ್ಸಲ್ಲಿ ಕೂತ ನಂತರ ನನ್ನ ಮನಸ್ಸು ಎಲ್ಲೆಲ್ಲಿಗೋ ಕೊಂಡೊಯ್ಯಿತು. ಈ ಹೆಸರುಗಳ ಆಂಗ್ಲೀಕರಣ ವಿಚಾರಕ್ಕೆ ಬಂದಾಗ ಮೊದಲಿಗೆ ಬರುವುದು ನಮ್ಮ ಊರುಗಳ ಹೆಸರನ್ನು ಹಾಳುಗೆಡವಿದ್ದು. ನಂಗೆ ಯಾವಾಗಲೂ ನೆನಪಾಗುವುದು, ಉಡುಪಿಯ ಹತ್ತಿರದ ಕಾಪು. ಕನ್ನಡದೆಲ್ಲೇನೋ ಅದರ ಹೆಸರು ಕಾಪು ಅಂತಲೇ ಇದೆ, ಆದರೆ ಆಂಗ್ಲ ದಲ್ಲಿ ಬರೆಯುವಾಗ ಮಾತ್ರ ‘ಕಾಪ್’(kaup) ಆಗಿಬಿಡುತ್ತೆ. ನನ್ನ ದ. ಕ. ಮಿತ್ರರಲ್ಲಿಯೂ ಕೇಳಿದಾಗ ಅವರು ನಕ್ಕು ಸುಮ್ಮನಾದರಷ್ಟೇ. ಹಾಗೆಯೇ ಇನ್ನೊಂದು ಬೆಳ್ಮಣ್ ಅಥವಾ ಬೆಳ್ಮಣ್ಣು, ಈ ಹೆಸರನ್ನು ನಾನು ಮೊದಲು ಯಾವುದೊ ಒಂದು ಬಸ್ಸಿನ ಮೇಲೆ ನೋಡಿದ್ದಾಗ BELMAN ಅಂದಿತ್ತು, ಇದ್ಯಾವ ಹೆಸರು ಬೆಲ್’ಮ್ಯಾನ್ ಅಂತ ತೆಲೆಬಿಸಿ ಮಾಡಿಕೊಂಡಿದ್ದೂ ಉಂಟು, ಕೊನೆಗೆ ನೈಜ ಹೆಸರು ಗೊತ್ತಾಯಿತು ಬಿಡಿ. ಹಾಗೆಯೇ ನೋಡುತ್ತಾ ಹೋದರೆ ಇಂತಹ ಸಾವಿರಾರು ಉದಾಹರಣೆಗಳು ಸಿಗುತ್ತವೆ. ನಾನು ಗಮನಿಸಿದ ಇನ್ನೊಂದು ವಿಚಾರವೆಂದರೆ, ಕೆಲವೊಬ್ಬರ ಹೆಸರುಗಳು ಆಂಗ್ಲದಲ್ಲಿ ಬರೆಯುವಾಗ ತಮ್ಮತನವನ್ನು ಪೂರ್ತಿಯಾಗಿಯೇ ಕಳೆದು ಕೊಂಡು ಬಿಡುತ್ತವೆ, ಅವನ್ನು ಹ್ಯಾಗಿದಿಯೋ ಹಾಗೆಯೇ ಬರೆಯಬಹುದಾದರು ನಮ್ ಜನ ಉಪಯೋಗಿಸುವ ವಿಧಾನವೇ ಬೇರೆ. ಉದಾಹರಣೆಗೆ, ಶೆಣೈ, ಇದನ್ನ shanai ಅಂತ ಬರೆಯಬಹುದಾದರೂ ನಮ್ಮವರು shenoy ಅಂತಾನೆ ಬರೆಯೋದು, ಇದು ಶನೋಯ್ ಅಂತಾಗಲ್ಲಿಲ್ಲವೇ? ಇನ್ನೊಂದು ನಾಯಕ್ ಇದನ್ನ nayak ಬರೆದರೆ ಸರಿ ಆದರೆ ಕೆಲವರು naik ಅಂತಾನೆ ಬರೆಯೋದು (ಇದರಲ್ಲಿ ಜಾತಿ-ಸಮೀಕರಣ ಇದೆ ಎಂದು ನನಗೆ ಗೊತ್ತಿದೆ, ಇದೊಂದರಿಂದಲೇ ತಿಳಿಯುತ್ತೆ ನಮ್ ದೇಶದಲ್ಲಿ ಜಾತಿ ಪದ್ದತಿಗೆ ಅಡಿಗಲ್ಲು ಹಾಕಿದವರು ಯಾರು ಎಂದು), ಕೆಲವೊಬ್ಬರು ದೇವಯ್ಯ ನನ್ನು ಆಂಗ್ಲದಲ್ಲಿ devayya ಅಂದರೆ ಇನ್ನು ಕೆಲವರು devaiah ಅನ್ನುವರು. bhatta ಹೋಗಿ bhat ಆಗಿದೆ, ಒಂದು ಕೈ ಮೇಲೆ ಅನ್ನುವಂತೆ ಈಗೀಗ ಕನ್ನಡದಲ್ಲೂ ಭಟ್ ಅಂತಲೇ ಬಹುಪಾಲು ಜನ ಉಪಯೋಗಿಸುವುದು. ಈ ತರಹದ ವಿಚಾರಗಳಿಂದ ಗೊತ್ತಾಗೋ ಒಂದು ಬಹುಮುಖ್ಯ ವಿಚಾರವೆಂದರೆ ಇಡೀ ಪ್ರಪಂಚದಲ್ಲಿ ನಮ್ಮ ಭಾರತೀಯರಷ್ಟು ಅಭಿಮಾನ ಹೀನರು ಮತ್ತೊಬ್ಬರಿಲ್ಲ ಅನ್ನುವುದು. ಯಾಕಪ್ಪ ಅಂದ್ರೆ ನಾನು ಲಿಯೇವ್ ಅಥವಾ ಲೆವ್ ಟಾಯ್’ಸ್ಟಾಯ್ ನನ್ನು ಲಿಯೋ ಅಂದ ತಕ್ಷಣ ಅದು ತಪ್ಪು, ಹಾಗೆ ಹೆಸರನ್ನು ಭಾಷಾಂತರ ಮಾಡುವುದು ಸರಿಯಲ್ಲ ಅಂದಿದ್ದು ನನ್ನ ಕಿರಿಯ ಸಹೋದ್ಯೋಗಿ , ಆತನಿಗಿನ್ನು ೨೨ ರ ಹರೆಯ, ಈ ವಯಸ್ಸಿನ ಅದೆಷ್ಟು ಭಾರತೀಯರು ಭಾರತೀಯತೆಯನ್ನು ಈ ರೀತಿ ಸಮರ್ಥನೆ ಮಾಡಿಕೊಂಡಾರು? ನನಗೆ ಆತನ ಮೇಲೆ ಇದ್ದ ಗೌರವ ಇದರಿಂದ ಹೆಚ್ಚಾದದ್ದು ಸುಳ್ಳಲ್ಲ. ಹಾಗೆಯೇ ಯೋಚಿಸುತ್ತ ಮುಂದುವರೆದು ಈ ಆಂಗ್ಲರಿಗೆ ಸರಿಯಾದ ಪಾಠ ಕಲಿಸಲು ನಾವ್ಯಾಕೆ ಅವರ ಡಿಕ್’ಸನ್, ಹ್ಯಾರಿ, ಹಡ್ಸನ್ ಗಳನ್ನ ಕನ್ನಡೀಕರಣ (!!!) ಮಾಡಬಾರದು ಎಂದು ನೆನೆದು, ಸಂಭವನೀಯ ಭಾಷಾಂತರವನ್ನೂ ನೆನೆಸಿಕೊಂಡು ಸಿಕ್ಕಾಪಟ್ಟೆ ನಗುವೂ ಬಂತು. ಅಷ್ಟರಲ್ಲಿ ನಾನು ಇಳಿಯೋ ನಿಲ್ದಾಣ ಬಂತು.ನನ್ನ ಉಡುಪುಗಳನ್ನು ಸರಿಯಾಗಿ ಗಾಳಿ ಒಳಹೋಗದ ಹಾಗೆ ಬಿಗಿದು ನಿಂತೇ. ನಿಲ್ದಾಣ ದಿಂದ ಹೊರಬೀಳುತ್ತಿದ್ದಂತೆಯೇ ಕೊರೆಯುವ ಚಳಿ ನಮ್ಮನ್ನು ಸ್ವಾಗತಿಸಿತ್ತು. ಮತ್ತೇನನ್ನೂ ಯೋಚಿಸುತ್ತಾ ದಾಪುಗಾಲು ಹಾಕುತ್ತ ಮನೆಯ ಕಡೇ ಹೊರಟೆ.

Subscribe to:
Posts (Atom)