ನಮಗೆ ವಾಹಕ (conductors) ಅಂದ್ರೆ ಗೊತ್ತು, ತಮ್ಮ ಮೂಲಕ ವಿದ್ಯುತ್ ಪ್ರವಾಹವನ್ನು ಸುಲಭವಾಗಿ ಹರಿಯಲು ಬಿಡುತ್ತವೆಯೋ ಅವಕ್ಕೆ ವಾಹಕಗಳು ಅನ್ನಬಹುದು. ಕೆಲವು ವಸ್ತುಗಳು ಅರೆವಾಹಕಗಳು (semiconductors), ಮತ್ತು ಕೆಲವು ನಿರ್ವಾಹಕಗಳು (insulators). ವಿದ್ಯುತ್ ಪ್ರವಾಹವನ್ನು ಎಲೆಕ್ಟ್ರಾನುಗಳ ನದಿಯೆಂದು (ಕೆಲವೊಮ್ಮೆ ಹೋಲ್ಸ್ (holes) ಎಂದು ಕರೆಯಲಾಗುವ ಎಲೆಕ್ಟ್ರ್ರಾನ್ ವೇಕೆನ್ಸಿಗಳೂ ಕೂಡ ವಿದ್ಯುತ್ ವಾಹನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ) ಊಹಿಸಿದರೆ ನಮ್ಮ ಕೆಲಸ ಸ್ವಲ್ಪ ಸುಲಭ. ನದಿಯ ಹರಿವು ಎಲ್ಲೆಡೆಯೂ ಒಂದೇ ರೀತಿ ಇರದು, ಕೆಲವೊಮ್ಮೆ ಕಲ್ಲು ಬಂಡೆಗಳು ತಡೆಯೊಡ್ಡಿದರೆ, ಕೆಲವೊಮ್ಮೆ ಕಿರಿದಾದ ಪಾತ್ರ ತಡೆಯೊಡ್ಡಬಹುದು. ಹೀಗೆ ವಿದ್ಯುತ್ ಪ್ರವಾಹವು ಸರಾಗವಾಗಿ ನೆಡೆಯಲು ಆಗುವ ಅಡೆತಡೆಯೇ ರೋಧಕತ್ವ ಅಥವಾ ರೆಸಿಸ್ಟೆನ್ಸ್ (resistance) ಅನ್ನಬಹುದು. ಇದರಿಂದಾಗಿ ವಿದ್ಯುತ್ ಪ್ರವಾಹವು ಬೇರೊಂದು ರೂಪದಲ್ಲಿ ವ್ಯರ್ಥವಾಗುವುದರಿಂದ, ತಡೆರಹಿತ ಅಥವಾ ಅಪವ್ಯಯ ರಹಿತ ವಿದ್ಯುತ್ ಸಾಗಣೆ ಆಗುವಂತಿದ್ದರೆ ಅನೇಕ ಉಪಯೋಗಗಳು ಇವೆಯೆಂದು ಸುಲಭವಾಗಿ ಊಹಿಸಬಹುದು. ಇಂತದೊಂದು ಆಲೋಚನೆಗೆ ಪುಷ್ಟಿ ನೀಡಿದ್ದು ೧೯೧೧ ರಲ್ಲಿ ಅಕಸ್ಮಾತ್ ಆಗಿ ಬೆಳಕಿಗೆ ಬಂದ ಅತಿವಾಹಕತ್ವದ (superconductivity) ಅದ್ಭುತ ಸಂಗತಿ. ಇದನ್ನೂ ಒಳಗೊಂಡ ಸಾಧನೆಗಾಗಿಯೇ ಕಾಮೆರ್ಲಿಂಗ್ ಓನ್ಸ್ ಗೆ ಭೌತ ವಿಜ್ಞಾನದಲ್ಲಿ ನೊಬೆಲ್ ದೊರಕಿದ್ದು.
ವಾಹಕಗಳಲ್ಲಿ ವಾಹಕತ್ವವು ಉಷ್ಣತೆಯನ್ನು ಕಡಿಮೆ ಮಾಡುವುದರೊಂದಿಗೆ ಕಡಿಮೆಯಾಗುತ್ತದೆಯಾದರೂ ಪರಿಮಿತವಾಗಿರುತ್ತದೆ ಎನ್ನುವುದು ಅಲ್ಲಿಯವರೆಗೆ ಎಲ್ಲರಿಗೂ ಗೊತ್ತಿದ್ದ ವಿಷಯವಾಗಿತ್ತು. ಯಾವಾಗ ಪಾದರಸವೂ ಒಳಗೊಂಡು ಕೆಲವೊಂದು ವಸ್ತುಗಳು ಕೆಲವೊದು ಉಷ್ಣತೆಗಳಲ್ಲಿ (ಸುಮಾರು ೪. ೨ ಕೆಲ್ವಿನ್) ಅತಿವಾಹಕತ್ವ ತೋರಿದವೋ ಇಡೀ ವಿಜ್ಞಾನ ಜಗತ್ತು ಭೌತಿಕ ಕಾರಣವನ್ನು ಕಂಡುಹಿಡಿಯುವುದರಲ್ಲಿ ನಿರತವಾಯಿತು. ಇದಕ್ಕೆ ಸರಿಯಾದ ಭೌತ ವಿವರಣೆಯನ್ನು ಕೊಡಲು ೫೦ ವರ್ಷಗಳೇ ಹಿಡಿಯಿತು. ಬಾರ್ಡಿನ್, ಕೂಪರ್, ಸ್ಕ್ರೈಫರ್ ರು ೧೯೫೭ರಲ್ಲಿ ಕೊಟ್ಟ ವಿವರಣೆಯು ಸಮಂಜಸವಾಗಿತ್ತು. ಈ ಎಲೆಕ್ಟ್ರಾನುಗಳು ಒಂದೊಂದೇ ಚಲಿಸದೆ ಮತ್ತೊಂದು ಎಲೆಕ್ಟ್ರಾನ್ ನ ಜೊತೆ ಫೋನಾನ್ ಎಂಬ ಧನ ಆವೇಶವುಳ್ಳ ಪರಮಾಣುವಿನ ಮುಖೇನ ಜಂಟಿಯಾಗಿ ವಸ್ತುವಿನಲ್ಲಿ ಜಾರುವುದರಿಂದ ರೋಧಕತ್ವವು ಶೂನ್ಯವಾಗಿ ವಿದ್ಯುತ್ ಪ್ರವಾಹವು ಅಪರಿಮಿತವಾಗುವುದು ಎಂಬುದು ಅವರ ವಿವರಣೆಯ ಸರಳ ಸಾರಾಂಶ. ಬಿ ಸಿ ಎಸ್ ಸಿದ್ಧಾಂತ ಎಂದೇ ಕರೆಯಲಾದ ಈ ಶೋಧನೆಗೆ ೧೯೭೨ ರಲ್ಲಿ ನೊಬೆಲ್ ನೀಡಲಾಯಿತು. ಅತಿವಾಹಕತ್ವದ ಭೌತ ವಿಸ್ಮಯದ ಅಧ್ಯಯನಕ್ಕೆ ನೀಡಲಾದ ಅನೇಕ ನೊಬೆಲ್ ಪಾರಿತೋಷಕಗಳಲ್ಲಿ ಇದೂ ಒಂದಾಯ್ತು.
ಇಂತಹ ಸಾಧನೆಗೈದ ಜಾನ್ ಸ್ಕ್ರೈಫರ್ ರು ತಮ್ಮ ೮೯ನೇ ವಯಸ್ಸಿನಲ್ಲಿ ಮೊನ್ನೆಯಷ್ಟೇ ತೀರಿ ಹೋದರು (ಜುಲೈ ೨೭, ೨೦೧೯). ತಮ್ಮ ಜೀವೀತಾವಧಿಯ ಬಹುಕಾಲ ಸಂಶೋಧನಾ ನಿರತರಾಗಿದ್ದ ಪ್ರೊಫೆಸರ್ ಇವರು. ಸೆಪ್ಟೆಂಬರ್ ೪, ೨೦೦೪ ರಲ್ಲಿ ಸ್ಕ್ರೈಫರ್ ಕಾರು ಚಲಾಯಿಸುತ್ತಾ ನಿದ್ದೆಗೆ ಜಾರಿ ಒಬ್ಬರ ಸಾವಿಗೆ ಮತ್ತು ಅನೇಕರ ತೀವ್ರ ಪೆಟ್ಟಾಗಲು ಕಾರಣವಾದರು. ಆ ಸಮಯದಲ್ಲಿ ಅವರ ಹತ್ತಿರ ರದ್ದಾಗಿದ್ದ ಲೈಸೆನ್ಸ್ ಇತ್ತು. ನಂತರ ಮೊಕದ್ದಮೆ ನೆಡೆದು ಎರಡು ವರ್ಷ ಜೈಲುವಾಸವನ್ನೂ ಕೂಡ ಮಾಡಿದರು. ಮೊನ್ನೆ ನನ್ನ ಸ್ನೇಹಿತರಾದ ಹಿರಿಯ ಪ್ರೊಫೆಸ್ಸರ್ ಒಬ್ಬರು ಈ ವಿಚಾರವನ್ನು ನನ್ನಲ್ಲಿ ಹೇಳುತ್ತಾ, ನೋಡು ವಿದೇಶಗಳಲ್ಲಿ ನಿನ್ನ ಸ್ಥಾನಮಾನಗಳನ್ನು ಆಧರಿಸಿ ಕಾನೂನು ಪಾಲನೆಯಾಗುವುದಿಲ್ಲ, ಆತ ನೊಬೆಲ್ ಪುರಸ್ಕೃತ ವಿಜ್ಞಾನಿಯಾದರೂ ಜೈಲು ವಾಸ ತಪ್ಪಲಿಲ್ಲ ಅಂದರು. ನನಗೂ ಅದು ಸರಿಯೆನಿಸಿತು. ನಮ್ಮಲ್ಲ್ಲಿಯಾದರೆ, ಅಯ್ಯೋ ಪಾಪ ಬಿಡಿ ನೊಬೆಲ್ ಪುರಸ್ಕೃತ ವಿಜ್ಞಾನಿ ಅಂತಲೋ, ಅವನು ಅದೆಷ್ಟೋ ಸಿನಿಮಾ ಮಾಡಿ ಜನರಿಗೆ ಮನರಂಜಿಸಿದ್ದಾನೆ ಅಂತಲೋ, ಅವನು ಅಸಂಖ್ಯಾತ ಜನರಿಗೆ ಸಹಾಯ ಮಾಡಿದ್ದಾನೆ ಅಂತಲೋ ಶಿಕ್ಷೆ ಬೇಡ ಅಂತ ವಾದಿಸೋದು ಇದೆ.
ಇದೆ ವಿಚಾರವನ್ನು ಇನ್ನೊಂದು ರೀತಿಯಲ್ಲೂ ಯೋಚಿಸಿದೆ, ಸ್ಕ್ರೈಫರ್ ತನಗೆ ಅವಮಾನ ವಾಯ್ತು ಅಂತ ಆತ್ಮಹತ್ಯೆಗೆ ಮುಂದಾಗಲಿಲ್ಲ, ತಾವು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿ, ಉಳಿದ ಸಮಯವನ್ನು ಖುಷಿಯಾಗಿಯೇ ಕಳೆದಿರಬಹುದು. ಮೊನ್ನೆ ನೆಡೆದ ಕಾಫಿ ಡೇ ಸಿದ್ಧಾರ್ಥ್ ಅವರ ಅಸಹಜ ಸಾವಿನ ವಿಚಾರದಲ್ಲಿಯೂ ಕೂಡ ನನಗೆ ಹೀಗೆ ಅನಿಸ್ತು. ತಪ್ಪು ಮಾಡಿದ್ದರೆ ತಕ್ಕುದಾದ ಶಿಕ್ಷೆ ಅನುಭವಿಸಬಹುದಿತ್ತು, ತಪ್ಪು ಮಾಡಿಲ್ಲ ಅಂದರೆ ಅದರಿಂದ ಹೊರಬರುವ ಎಲ್ಲಾ ಅವಕಾಶಗಳು ಇದ್ದವು. ಆದರೆ ಅವರ ಅಸಹಜ ಸಾವಿನಿಂದ ಅದೆಷ್ಟೋ ಯುವ ಉದ್ಯಮಿಗಳ ಮನಸ್ಸು ಇನ್ನೂ ಕುಗ್ಗಿ ಹೋಗಿದ್ದು ಮಾತ್ರ ನಿಜ.

No comments:
Post a Comment