ಈಗ್ಗೆ ಒಂದೆರಡು ತಿಂಗಳ ಹಿಂದೆ
ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆಯಾಗುತ್ತಿದೆ ಎಂದು
ಹಲವಾರು ಓರಾಟಗಾರರು ಹುಯಿಲೆಬ್ಬಿಸಿದ್ದು ನಮಗೆಲ್ಲರಿಗೂ ನೆನಪಿರಲೇಬೇಕು. ಹಿಂದಿ ಹೇರಿಕೆಯಾಗುತ್ತಿದೆಯೋ ಇಲ್ಲವೋ
ಅದು ನನಗೆ ನಿಲುಕದ ವಿಷಯ,
ಆದರೆ ಮೆಟ್ರೋದಲ್ಲಿ ಕನ್ನಡದ ಸರಿಯಾದ ಬಳಕೆಯಾಗುತ್ತಿದೆಯೇ?
ನಾನು ಹಲವಾರು ಬಾರಿ ಮೆಟ್ರೋದಲ್ಲಿ
ಓಡಾಡುವಾಗ ಹಲವಾರು ಸಂಗತಿಗಳನ್ನು ಗಮನಿಸಿರುವೆ.
ಇಲ್ಲಿ ಕೆಲವೊಂದನ್ನು ಪಟ್ಟಿ ಮಾಡಿದ್ದೇನೆ.
೧. ಪ್ರತೀ ನಿಲ್ದಾಣ ಬರುವ
ಮುಂಚೆ ಅಥವಾ ತಲುಪಿದ ಮೇಲೆ
ಕನ್ನಡದಲ್ಲಿ ಅದರ ಹೆಸರನ್ನು ಹೇಳುತ್ತಾರೆ.
ಆದರೆ ಹೇಳುವ ಬಗೆಯನ್ನು ನೋಡಿ,
"ರೈಲು ಈಗ ಶ್ರೀರಾಮ್'ಪುರಗೆ
ಬರಲಿದೆ". ಈ ವಾಕ್ಯದಲ್ಲಿ “ಗೆ”
ವಿಭಕ್ತಿ ಪ್ರತ್ಯಯ ಎಷ್ಟೊಂದು ಆಭಾಸ ಅನಿಸುವುದಿಲ್ಲವೇ? “ರೈಲು ಈಗ ಶ್ರೀರಾಮಪುರಕ್ಕೆ
ಬರಲಿದೆ ಅಥವಾ ಶ್ರೀರಾಮಪುರವನ್ನು ತಲುಪಲಿದೆ” ಅಂತಲೋ ಹೇಳಬೇಕಲ್ಲವೆ? ಈ ರೀತಿಯ ತಪ್ಪು ತಪ್ಪು ಪ್ರತ್ಯಯ
ಬಳಕೆ ಹಲವೆಡೆ ಇದೆ. ಈ ರೀತಿಯ ಕನ್ನಡವನ್ನು ಸಾರ್ವಜನಿಕ ಮಾಧ್ಯಮ ಅನ್ನಬಹುದುದಾದ ಮೆಟ್ರೋದಲ್ಲಿ ಬಳಸಿದರೆ,
ಪರಭಾಷಿಗರು ಹ್ಯಾಗೆ ಸರಿಯಾದ ಕನ್ನಡ ಕಲಿಯುವವರು? ಇನ್ನೊಂದು ಸೂಚನೆ: “ಈ ರೈಲು ಮೈಸೂರು ರಸ್ತೆಗೆ
ಹೊರಡಲಿದೆ”, ಇದರ ಬದಲಿಗೆ “ಈ ರೈಲು ಮೈಸೂರು ರಸ್ತೆ ನಿಲ್ದಾಣದೆಡೆಗೆ ಹೋಗುತ್ತಲಿದೆ/ನಿಲ್ದಾಣಕ್ಕೆ
ಹೋಗಿ ತಲುಪಲಿದೆ/ ನಿಲ್ದಾಣದ ವರೆಗೂ ಚಲಿಸುವುದು” ಅನ್ನಬಹುದಿತ್ತಲ್ಲ?
೨. ಒಮ್ಮೆ ಚಿತ್ರ ೧ ನ್ನು ನೋಡಿ. “ತುರ್ತು ಟ್ರಿಪ್ ವ್ಯವಸ್ಥೆ” ಅಂತ ಕನ್ನಡದಲ್ಲಿ ಬರೆದಿದ್ದಾರೆ.
ಹಾಗಂದರೆ ಏನು? ನಿಜ ಹೇಳಬೇಕಂದರೆ ನಾನು ಮೊದಲು ಈ ಸೂಚನೆಯನ್ನು ನೋಡಿದಾಗ ತುರ್ತು
ಪ್ರಯಾಣದ ವ್ಯವಸ್ಥೆಯೇನಾದರೂ ಬೇಕಿದ್ದಲ್ಲಿ ಅಲ್ಲಿ ಹೋಗಬೇಕೆನೋ ಅಂದುಕೊಂಡಿದ್ದೆ, ಆದರೆ ಕೆಳಗೆ
ಕೊಟ್ಟ ಸೂಚನೆ ನೋಡಿ ಅದು “ತುರ್ತು ವಿದ್ಯುತ್ ಕಡಿತ/ನಿಲುಗಡೆ” ಎಂದು ತಿಳಿಯಿತು.
![]() |
| ಚಿತ್ರ ೧. |
೪. ಇನ್ನು ಕೆಲವು ಸೂಚನೆಗಳಿವೆ, “ಆಧ್ಯತೆಯ ಆಸನ”, ಇಲ್ಲಿ ಆದ್ಯತೆ ಅನ್ನೋದು ಸರಿ. “ಕುಡಿಯುವ ಅಥವ ಆಹಾರ ಸೇವಿಸುವಂತಿಲ್ಲ” ಇದು ಕೂಡ
ಸರಿಯಾದ ಪದಪ್ರಯೋಗವಲ್ಲ. ಇನ್ನೊಂದೆಡೆ “ತುರ್ತು ಸಂದರ್ಭದಲ್ಲಿ ಬಾಗಿಲ ಬಿಡುಗಡೆ” ಅಂತಿದೆ. ಏನಿದರ
ಅರ್ಥ?
![]() |
| ಚಿತ್ರ 2. |
ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅನೇಕ ತಪ್ಪುಗಳು ಕಾಣುತ್ತವೆ. ತಪ್ಪುಗಳು
ಆಗುವುದು ಸಹಜ, ನನಗೆ ಸರಿ ಅನಿಸಿದ್ದು ಕೆಲವರಿಗೆ ತಪ್ಪೆನಿಸಬಹುದು. ಆದರೆ ಕೆಲವು ಕೇಳಲು/ಓದಲು
ತುಂಬಾ ಮುಜುಗರವೆನಿಸುವುದು ಮಾತ್ರ ಸತ್ಯ.
ಆದರೆ ಇವುಗಳನ್ನು ಕುರಿತು ಯಾವ ಓರಾಟಗಾರರೂ ಮಾತಾಡಿದ್ದನ್ನು ನಾನು
ಗಮನಿಸಿಲ್ಲ. ಇಂತವುಗಳನ್ನು ಗಮನಿಸಲು ಅವರಿಗೆ ಸರಿಯಾದ ಕನ್ನಡ ಬರುವುದೇ? ತಿಳಿದವರು
ಉತ್ತರಿಸಬೇಕು!!


No comments:
Post a Comment