Monday, October 25, 2010

ನಯನ

ಯೆಸ್!!!! ಯೆಸ್!!!!
ಅವಳು ಇವತ್ತು ತುಂಬಾ ಖುಷಿಯಾಗಿದ್ದಳು. ಯಾವತ್ತೂ ಇಲ್ಲದ ನಾಚಿಕೆಯನ್ನು ಅವನಲ್ಲಿ ಕಂಡಿದ್ದಳು. ಇದು ತುಂಬಾ ದಿನದ ಹಿಂದಿನ ವಿಷಯ, ಅವನ ನೋಡಿದ ದಿನದಿಂದಲೇ ಅವನ ಪ್ರೇಮಪಾಶದಲ್ಲಿ ಸಿಲುಕಿದ್ದಳು. ಆದ್ರೆ ಅವನದ್ದು ಸ್ಮಶಾನವೈರಾಗ್ಯ. ಅ೦ಥಹ ರೂಪಸಿ ಬಯಸಿ ಬಂದರೂ ಅವನಲ್ಲಿ ಪ್ರೀತಿಯ ಹೂವು ಅರಳಲಿಲ್ಲ. ಅಂದಿನಿಂದ ಇಂದಿನವರೆಗೂ ಇವಳದ್ದೂ ಒಂದೇ ವರಾತ. ಅವನನ್ನು ಹ್ಯಾಗಾದರೂ ಮಾಡಿ ತನ್ನವನನ್ನಾಗಿ ಮಾಡಿಕೊಳ್ಳಲೆಬೇಕೇ೦ಬುದೇ ಅವಳ ತುಡಿತ. ಅದಕ್ಕಾಗಿ ಅವಳು ಮಾಡದ ಪ್ರಯತ್ನಗಳೇ ಇಲ್ಲ. ಪ್ರತಿ ಬಾರಿಯೂ ಅವಳ ಯಾವ ಪ್ರಯತ್ನವೂ ಅವನಲ್ಲಿ ಕನಿಷ್ಠ ಒ೦ದು ಮುಗುಳ್ನಗೆ ಯನ್ನಾದರೂ ತರಲ್ಲಿಲ್ಲ. ಆದರೆ ಇ೦ದು ಅವಳ ಕಣ್ಣಲಿ ಎ೦ದೂ ಇಲ್ಲದ ಹೊಳಪಿತ್ತು. ಅದಕ್ಕೆ ಕಾರಣ ಬೇರೆ ಇರಲಿಲ್ಲ. ಇ೦ದು ಇವಳು ಕಾಲೇಜಿಗೆ ಬರುವ ಸಮಯದಲ್ಲಿ ಎದುರಿನಲ್ಲೇ ಅವನು ಸಿಕ್ಕಿದ್ದ. ಯಥಾಪ್ರಕಾರ ಅವನನ್ನು ಒಲಿಸಿಕೊಳ್ಳುವ ಪ್ರಯತ್ನ ನಡೆಸಿದ್ದಳು, ಇ೦ದು ಎ೦ದಿನ೦ತಲ್ಲದೆ ಅವನು ಇವಳ ಕಂಡ ಒಡನೇ ತೆಲೇ ಬಗ್ಗಿಸಿಕೊಂಡು ನಾಚಿ ಹೋಗಿಬಿಟ್ಟ. ಇಷ್ಟು ಸಾಕಿತ್ತು ಅವಳ ಕಣ್ಣ ಹೊಳಪಿಗೆ. ಅಚಾನಕ್ ಆದ ಈ ಬೆಳವಣಿಗೆಗೆ ಸ್ಪ೦ದಿಸಲಾರದಷ್ತು ಖುಷಿಯಾಗಿ ಹೋಗಿದ್ದಳು. ಅವನನ್ನು ತಡೆದು ನಿಲ್ಲಿಸಲಾರದೆ ಹೋದಳು.

ಅವಳಿಗೆ ಇ೦ದು ಅವಳ ಪ್ರೇಮದ ಫಲ ಸಿಕ್ಕಿತ್ತು. ಇ೦ದು ಏನಾದರೂ ಆಗಲಿ ಅವನನ್ನು ಕ೦ಡು ಪ್ರೇಮನಿವೇದನೆ ಮಾಡಿ ಕೊಲ್ಲಬೇಕೆಂದು ಹೊರಟಳು. ತನ್ನ ಪುಟ್ಟ ಕನ್ನಡಿಯಲ್ಲಿ ಒಮ್ಮೆ ತನ್ನನ್ನು ತಾನು ನೋಡಿ ಕಾರಣವೆ ಇಲ್ಲದೆ ನಸುನಕ್ಕಳು. ತನ್ನ ಪ್ರಸಾದನ ಸಾಮಗ್ರಿಗಳನ್ನು ತೆಗೆದು ಒಮ್ಮೆ ಮುಖ, ಹುಬ್ಬುಗಳನ್ನು ತೀಡಿದಳು. ಎ೦ದೂ ಇಲ್ಲದ ನಾಚಿಕೆ ಅವಳಲ್ಲಿ ಮನೆ ಮಾಡಿತ್ತು. ಹೋಗಲೋ ಬೇಡವೋ ಎ೦ದು ಅಳೆದು ಸುರಿದೂ ಹೊರಟಳು. ಅಲ್ಲಿ ದೂರದಲ್ಲಿ ತನ್ನ ಸ್ನೇಹಿತರೊಡನೆ ಕೂತಿದ್ದ ಅವನನ್ನು ಹಿಂಬದಿಯಿಂದ ಕ೦ಡಾಗ ಪುಳಕಿತಳಾದಳು. ಇವಳು ಹತ್ತಿರ ಹೋದಂತೆ ಅವನ ಸ್ನೇಹಿತರು ಇಲ್ಲಿಂದ ಜಾಗ ಖಾಲಿ ಮಾಡುವುದೇ ಒಳ್ಳೆಯದೆಂದು ಅವನಿಗೆ ವಿಧಾಯ ಹೇಳಿದರು. ಅವಳು ಮೆಲ್ಲಗೆ ಅವನ ಭುಜದ ಮೇಲೆ ಕೈ ಇತ್ತು ಇಷ್ಟು ದಿವಸ ತಡ ಯಾಕೆ ಮಾಡಿದೆ ಎಂದು, ಕಣ್ಣಲ್ಲಿ ಕಣ್ಣನ್ನು ಇಟ್ಟಾಗ..................................................................

ಮದ್ರಾಸ್ ಐ!!!!!!!!!!!!!!!!!!!!!!!!!!!!!!!!!!!!!!!!!!!!!!!!!

4 comments:

  1. Nagaraj,

    vishaya channagide jotheyalli haakida biscut kooda channaagide.

    ReplyDelete
  2. ರಾಜ್...ಹಹಹ ಕಣ್ಣಲ್ಲಿ ಕಣ್ಣೀಟ್ಟಾಗ ಮದ್ರಾಸ್ ಐ ವಕ್ರಿಸ್ತಾ....ಅಹಹ್ಹ ಒಳ್ಲೆ ಆಂಟಿ-ಕ್ಲೈಮಾಕ್ಸು...

    ReplyDelete
  3. ಅದು ಮೊದಲೇ ವಕ್ಕರಿಸಿತ್ತು, ಅವಳು ತಪ್ಪು ತಿಳಿದಿದ್ದಳು ಅಸ್ಟೇ.

    ReplyDelete