![]() |
ಚಿತ್ರ ೧ ಯೂರಿ ಗಗಾರಿನ್
|
ಯೂರಿ ಗಗಾರಿನ್ (ಪೂರ್ಣ ಹೆಸರು: ಯೂರಿ ಅಲೆಕ್ಸಿಯೇವಿಚ್ ಗಗಾರಿನ್), ಈ ಹೆಸರು ಕೇಳಿರದ ವಿಜ್ಞಾನ ವಿದ್ಯಾರ್ಥಿಗಳು ಕಡಿಮೆ. ಬಾಹ್ಯಾಕಾಶಕ್ಕೆ ನೆಗೆದ ಮೊದಲ ಮಾನವ, ಜೀವಂತವಾಗಿ ವಾಪಾಸ್ ಬಂದ ಮೊದಲ್ನೇ ಸಜೀವಿ. ಇವರ ಬಗೆಗಿನ ಹತ್ತು ಸ್ವಾರಸ್ಯಕರ ವಿಚಾರಗಳನ್ನು ಹೇಳೋಣ ಇವತ್ತು ಅಂತ
೧. "ಪಯೇssಖಾಲಿ"- ಇದೇ ಪದವಂತೆ ಆತ ಹೇಳಿದ್ದು ಉಡಾವಣೆಯಾಗುವ ಸಮಯದಲ್ಲಿ. ಈ ರಷ್ಯನ್ ಪದದ ಅರ್ಥ “ಹೊರಡೋಣ” ಎಂದು. ಪ್ರೋಟೋಕಾಲ್ ಪ್ರಕಾರ “crew taking off” ಅನ್ನಬೇಕಿದ್ದರೂ ಉಪಯೋಗಿಸಿದ್ದು ಮಾತ್ರ ರಷ್ಯನ್!
೨. ಯೂರಿ, ಉಡಾವಣೆಗೂ ಮುನ್ನ ತನ್ನ ಹೆಂಡತಿಗೆಂದು ಪತ್ರ ಬರೆದಿದ್ದನಂತೆ, ತಾನು ಮರಳಿ ಬಾರದಿದ್ದ ಪಕ್ಷದಲ್ಲಿ ತೆರೆದು ಓದಲು. ಆದರೆ, ಅದರ ಅಗತ್ಯತೆ ಬರಲಿಲ್ಲ. ಮುಂದೆ, ಯೂರಿ ವಿಮಾನ ಅವಘಡವೊಂದರಲ್ಲಿ ದುರ್ಮರಣಕ್ಕೀಡಾದಾಗ, ಹೆಂಡತಿ ವೇಲೆ೦ಟೀನಾ ಅದನ್ನು ಓದುತ್ತಾರಂತೆ.
ಚಿತ್ರ ೨ ಮಾಸ್ಕೋದ ಗಗಾರಿನ್ ಚೌಕದಲ್ಲಿ
|
![]() |
ಚಿತ್ರ ೩ ಮಾಸ್ಕೋದ ಗಗನಯಾತ್ರಿಗಳ ಮ್ಯೂಸಿಯಂನ
|
೫. ಗಗಾರಿನ್ ಆಗಿನ ಸೋವಿಯತ್ ನಾಯಕ ನಿಕಿತಾ ಕುರುಶ್ಚೆವ್ ರನ್ನು ಭೇಟಿಯಾಗಲು ಮಾಸ್ಕೋಗೆ ಬಂದಿಳಿದಾಗ ಆತ ಎಲ್ಲರಂತೆಯೇ ಸಾಮಾನ್ಯ ಮನುಷ್ಯ ಎಂದು ಗುರುತಿಸಿದ್ದೇ ಒಂದು ಸಣ್ಣ ಸಂಗತಿಯಿಂದ. ಏನಾಗಿತ್ತೆ೦ದರೆ, ತನ್ನ ಶೂ ಗಳ ಲೇಸ್ ಅನ್ನು ಕಟ್ಟುವುದನ್ನೇ ಮರೆತಿದ್ದನಂತೆ. (ಬಾಹ್ಯಾಕಾಶ ಯಾನದಿಂದ ವಾಪಸ್ಸಾದ ಕ್ಷಣದಿಂದಲೇ ಇವನ ಬಗ್ಗೆ ಹಲವಾರು ಫ್ಯಾಂಟಸಿ ಕಥೆಗಳೇ ಹುಟ್ಟಿದ್ದರಿಂದ ಅನೇಕರಿಗೆ ಅವನ ಅತಿಮಾನವನೇ ಇರಬೇಕು ಎಂಬ ಗುಮಾನಿಯಿದ್ದರಿಂದ)
![]() |
ಚಿತ್ರ ೫ ಮಾಸ್ಕೋದ ಗಗನಯಾತ್ರಿಗಳ ಮ್ಯೂಸಿಯಂನ ಹೊರ ನೋಟ. |
೬. ಗಗಾರಿನ್’ನ ಫೋಟೋ ನೋಡಿದವರಿಗೆ ಆತನ ಹುಬ್ಬಿನ ಮೇಲಿನ ಗಾಯದ ಗುರುತು ಗೊತ್ತಿರುತ್ತೆ (ಫ್ಯಾಂಟಸಿ ಕಥೆಗಳಿಗೆ ಇದೂ ಒಂದು ಮೂಲ). ಈ ಗುರುತಾಗಿದ್ದು ಗಗಾರಿನ್ ವಿಹಾರಕ್ಕೆಂದು ಬ್ಲಾಕ್ ಸೀ ರೆಸಾರ್ಟ್ ಒಂದಕ್ಕೆ ಹೋಗಿದ್ದಾಗ (೧೯೬೧ ಸೆಪ್ಟೆಂಬರ್). ಆಗ ಏನಾಯಿತೆಂದರೆ, ಇವನು ಹೆಂಡತಿಯನ್ನು ಬಿಟ್ಟು ಇನ್ಯಾವುದೋ ಹೆಣ್ಣಿನ ಜೊತೆ ಕೋಣೆಯಲ್ಲಿ ಇದ್ದನಂತೆ, ಆಗ ಧಿಡೀರ್ ಅಂತ ಬಂದ ಹೆಂಡತಿಯ ಕೈಯಲ್ಲಿ ತಪ್ಪಿಸಿಕೊಳ್ಳುವ ಭರದಲ್ಲಿ ಕಿಟಕಿಯಿಂದ ಹೊರಕ್ಕೆ ಹಾರಿದಾಗ ಬಂಡೆಗಲ್ಲೊಂದು ಬಡಿದು ಆದ ಗಾಯ ಅದು!!
೭. ಗಗಾರಿನ್ ಹಾಗೂ ಇನ್ನೊಬ್ಬ ಫೈಟರ್ ಜೆಟ್ ಭೋದಕ ವ್ಲಾಡಿಮಿರ್ ಸೇರ್ಯೋಜನ್ ರಷ್ಯದ ಕಿರ್ಜಾಕ್ ಎಂಬ ಪಟ್ಟಣದ ಸಮೀಪ ಘಟಿಸಿದ MiG-15UTI ಫೈಟರ್ ಜೆಟ್ ಪತನದಲ್ಲಿ ಸಾವಿಗೀಡಾಗುತ್ತಾರೆ. ಇಬ್ಬರ ಅಂತ್ಯಕ್ರಿಯೆಯ ನಂತರ, ಚಿತಾಭಸ್ಮವನ್ನು ಕ್ರೆಮ್ಲಿನ್** ನ ಗೋಡೆಯಲ್ಲಿ ಹೂಳಲಾಗಿದೆ.
೮. ಗಗಾರಿನ್’ಗೆ ಇಬ್ಬರು ಹೆಣ್ಣುಮಕ್ಕಳು, ಒಬ್ಬರು ಮಾಸ್ಕೋ ಕ್ರೆಮ್ಲಿನ್ ವಸ್ತುಸಂಗ್ರಹಾಲಯಗಳ ಮುಖ್ಯ ವ್ಯವಸ್ಥಾಪಕಿಯಾಗಿ ಕಾರ್ಯನಿರ್ವಹಿಸುತಿದ್ದರೆ ಮತ್ತೊಬ್ಬರು ಮಾಸ್ಕೋದ ಪ್ಲೆಖನೋವ್ ಅರ್ಥಶಾಸ್ತ್ರ ವಿವಿ ಯಲ್ಲಿ ಪ್ರೊಫೆಸರ್.
![]() |
ಚಿತ್ರ ೬ ಶಿಲ್ಪಿಯ ಕಣ್ಣಲ್ಲಿ ಉಡ್ಡಯನ |
೧೦. ಗಗಾರಿನ್ ಬಾಹ್ಯಾಕಾಶಯಾನ ಮಾಡಿದ ದಿನ (ಎಪ್ರಿಲ್ ೧೨) ವನ್ನು ರಷಿಯದಲ್ಲಿ ಗಗನಯಾತ್ರಿಗಳ ದಿನವೆಂದು ಆಚರಿಸಲಾಗುತ್ತೆ. ೨೦೧೧ರಲ್ಲಿ, ಎಪ್ರಿಲ್ ೧೨ ನ್ನು international day of human space flight ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ೬೦ ರಾಷ್ಟ್ರಗಳಿಂದ ಘೋಷಿಸಲಾಯಿತು.
ಈ ವರ್ಷದ ಎಪ್ರಿಲ್ ಹನ್ನೆರಡಕ್ಕೆ, ಯೂರಿ ಗಗಾರಿನ್ ಮೊದಲ ಮಾನವ ಗಗನಯಾತ್ರೆ ಕೈಗೊಂಡು ೫೫ ವರ್ಷಗಳಾಯಿತು. ಅದಕ್ಕೆಂದೇ ಈ ಬರಹ.
![]() |
ಚಿತ್ರ ೭ ಬಾಹ್ಯಾಕಾಶದಿಂದ ಭೂಮಿಯನ್ನು ಸುತ್ತು ಹಾಕಿದ
|
*ಗಗಾರಿನ್'ರಿಗೆ ಸೋಯಿಯತ್ ಯೂನಿಯನ್'ನ ಅತ್ಯುನ್ನತ "ಹೀರೋ ಆಫ್ ಸೋವಿಯತ್ ಯೂನಿಯನ್" ಹಾಗೂ "ಆರ್ಡರ್ ಆಫ್ ಲೆನಿನ್" ಪ್ರಶಸ್ತಿಗಳನ್ನು ಕೊಡಲಾಗಿದೆ.
**ಕ್ರೆಮ್ಲಿನ್ ಅಥವಾ ಮಾಸ್ಕೋ ಕ್ರೆಮ್ಲಿನ್ ಮಾಸ್ಕೋದ ಹೃದಯಭಾಗದಲ್ಲಿ ಇರುವ ಒಂದು ಪುರಾತನ ಕೋಟೆ. ಕ್ರಿ.ಶ. ೧೪೦೦ರ ಸುಮಾರಿಗೆ ಕಟ್ಟಲಾದ ಇದು ಯುನೆಸ್ಕೋ ಹೆರಿಟೇಜ್ ಸೈಟ್ ಆಗಿದೆ. ಹಿಂದಿನಿದಲೂ ಆಡಳಿತದ ಕೇಂದ್ರವಾಗಿದ್ದ ಇದು ಈಗಲೂ ಹಾಗೇ ಮುಂದುವರೆದಿದೆ. ರಷ್ಯನ್ ಸರ್ಕಾರದ ಮುಖ್ಯ ಘಟಕಗಳು, ಕೆಲವೊಂದು ಪುರಾತನ ಚರ್ಚುಗಳು, ಅರಮನೆಗಳು ಇದರೊಳಗಿವೆ. ಇದು ಇತಿಹಾಸ ಪ್ರಸಿದ್ದ ರೆಡ್ ಸ್ಕ್ವೇರ್ ಅಥವಾ ಕೆಂಪು ಚೌಕಕ್ಕೆ ಅಂಟಿಕೊಂಡಂತೆ ಇದೆ.
(ಚಿತ್ರ ೧ ರ ಮೂಲ:ಇಂಟರ್'ನೆಟ್, ಇನ್ನುಳಿದವು-ನಾನೂ ಹಾಗೂ ನನ್ನ ಸ್ನೇಹಿತರು ತೆಗೆದಿದ್ದು)
ಸೂಚನೆ: ಈ ಬರಹದ ಬಹುಪಾಲು rt.com ನಲ್ಲಿ ಪ್ರಕಟವಾಗಿದ್ದ ಲೇಖನವೊಂದರ ಭಾವಾನುವಾದ





Super
ReplyDeleteThanks le
Delete