ನಾವೆಲ್ಲರೂ ಅನಂತ ಪದ್ಮನಾಭನದೇ ಭಾರಿ ಆಸ್ತಿ ಅಂದುಕೊಂಡಿದ್ರೆ ಅದನ್ನೂ ಮೀರಿಸೋ ಹಾಗೆ ನಮ್ಮ ಜನಾರ್ಧನ ರೆಡ್ಡಿ ಮಾಡಿಟ್ಟಿದ್ದರಲ್ಲಾ? ಅಲ್ಲ ಒಬ್ಬ ಮನುಷ್ಯ ಇಷ್ಟೊಂದು ಆಸ್ತಿ ಮಾಡಬಹುದಾ? ಹೆಸರಿಗೆ ತಕ್ಕ ಹಾಗೆ ದರ್ಬಾರ್ ಮಾಡ್ತಾ ಇದ್ದ ಅವನನ್ನ ಸಿ ಬಿ ಐ ನವರು ಬೇಟೆಯಾಡಿ ಜೈಲಿಗೆ ಅಟ್ಟಿ ಒಳ್ಳೆ ಕೆಲಸವನ್ನೇ ಮಾಡಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ನನಗೊಂದು ಯೋಚನೆ ಬಂದಿದೆ. ಹ್ಯಾಗಿದ್ದರೂ ಅವನಿಗೆ ಸಾವಿರಾರು ಕೋಟಿ ಆಸ್ತಿ ಇದೆ. ನಾವ್ಯಾಕೆ, ಅಂದ್ರೆ ನಮ್ಮ NITK ಸಂಶೋಧನಾ ವಿದ್ಯಾರ್ಥಿಗಳೆಲ್ಲರೂ ಹೋಗಿ ಯಾಕೆ ಒಂದು ಹತ್ತು ಕೋಟಿ ಬಂಡವಾಳ ಹಾಕಿ ಒಂದು ಒಳ್ಳೆ ರಿಸರ್ಚ್ ಸೆಂಟರ್ ತೆಗಿಬಾರದು ನಮ್ಮ ವಿದ್ಯಾಲಯದಲ್ಲಿ ಅನ್ನೋ ಐಡಿಯಾ ಕೊಡಬಹುದಲ್ಲವ? ಬೇಕಾದರೆ ಎಲ್ಲ ಪೇಪರ್ಗಳಲ್ಲೂ ಅವನ ಹೆಸರನ್ನೂ ಹಾಕೋಣ. ಅವನಿಗೆ ಹತ್ತು ಕೋಟಿ ಅದ್ಯಾವ ಲೆಖ್ಖ? ಬೇರೆಯವರು ಒಪ್ತಾರೋ ಬಿಡ್ತಾರೋ ನಾನು ಮಾತ್ರ ಹೋಗಿ ಕೇಳೋಣ ಅಂತ ಇದೀನಿ.
ರಾಜ್...ಒಳ್ಲೆ ವಿಚಾರ ಖಂಡಿತಾ ಮಾಡಬಹುದು...ಆದ್ರೆ ಕಾನೂನು ಅನ್ನೊದು ಇದೆಯಲ್ಲಾ...ಆ ಹಣ ಬೆಂಕಿ ಹಾಕಿ ಸುಟ್ಟುಬಿಡ್ತಾರೆ ಆದ್ರೆ ಉಪಯೋಗ ಆಗೋ ಕೆಲ್ಸಕ್ಕೆ ನಿಯೋಗಿಸೊಲ್ಲ....ನಮ್ಮ ಕಟ್ಟು ಪಾಡು ನಿಯಮಗಳ ಬಗ್ಗೆ ಹೇಳಿದೆ...ಆ ಹಣ ಎಲ್ಲೋ ಅಭಿವೃದ್ಧಿಗೆ ವಿನಿಯೋಗವಾಗಿ ಇಲ್ಲದವರಿಗೆ ತಲುಪಿದರೆ ಸಾಕು...ಅಂದ ಹಾಗೇ ನೀವೂ ರೀಸರ್ಚ್ ವಲಯಿಗಳು...!!!!
ReplyDeletejalanayana,
ReplyDeleteyou are absolutely right. There is one saying, somethings will be like dog's milk, no one can use except dog.