ನಮಸ್ಕಾರ ಸ್ನೇಹಿತರೇ,
ಇವತ್ತು ಕೆಲವೊಂದು ಬೇಸರದ ವಿಷಯಗಳನ್ನು ಹೇಳಬೇಕು ಅಂತ ಅನ್ಕೊಂಡಿದಿನಿ.
ಶುಚಿತ್ವದ ಬಗ್ಗೆ ಮಾತನಾಡೋದೇ ದಂಡ ಆದರೂ ಕೆಲವೊಂದನ್ನ ಹೇಳಲೇ ಬೇಕಾಗಿದೆ. ನಮ್ಮ ವಿಭಾಗದ ಕಟ್ಟಡದಲ್ಲಿ ಒಂದು ಶೌಚಾಲಯ ಇದೆ. ಎಲ್ಲ ಸಂಶೋಧನಾ ವಿದ್ಯಾರ್ಥಿಗಳು ಅಲ್ಲೇ ಹೋಗಬೇಕು ಇಲ್ಲ ಅಂದ್ರೆ ಸ್ವಲ್ಪ ದೂರ ಇರೋ ಮುಖ್ಯ ಕಟ್ಟಡಕ್ಕೆ ಹೋಗಬೇಕು. ಈಗ ಹೇಳ

ಲು ಹೊರಟಿರುವುದು ನಮ್ಮ ವಿಭಾಗದ ಕಟ್ಟಡದಲ್ಲಿ ಇರೋ ಶೌಚಾಲಯದ ಬಗ್ಗೆ. ಅಲ್ಲಿಯ ಶುಚಿತ್ವವನ್ನು ನೀವು ನೋಡಿಯೇ ಆನಂದಿಸಬೇಕು. ನೀವು ಅದರ ಬಾಗಿಲನ್ನು ತೆರೆದಕ್ಷಣ ಒಂದು ಆಹ್ಲಾದಕರವಾದ ಪರಿಮಳ ಹೊರಹೊಮ್ಮುತ್ತದೆ!!! ನೀವು ದೈರ್ಯ ಮಾಡಿ ಮುಂದೆ
ಹೋದಿರೋ ಅಲ್ಲಿ ಒಂದು ಅಚ್ಚರಿ ಕಾದಿರುತ್ತದೆ, ನೀವು ಅಲ್ಲಿರುವ ಜೇಡರ ಬಲೆಗಳನ್ನು ತಗೆದು ನಂತರ ನಿಮ್ಮ ಕಾರ್ಯ ಮುಂದುವರಿಸಬೇಕಾಗುತ್ತದೆ. ಏನೋ ಹೋಗಲಿ ಸಾವು!! ಅಂತ ಒಂದಿಷ್ಟು ಬೈದು Flush ಮಾಡುವ ಅಂತ ಕೈ ಹಾಕಿದರೆ ನೀರೆ ಬರುವುದಿಲ್ಲ. ಅಲ್ಲಿಯ ಕಮೋಡ್ಗಳು ನೀರನ್ನು ಕಂಡು ಶತಮಾನ ಗಳೇ ಕಳೆದವು. ನಾನು ಇಲ್ಲಿಗೆ ಹೊಸದಾಗಿ ಬಂದ ಹುರುಪಿನಲ್ಲಿ ಹೋಗಿ ನಮ್ಮ ವಾಚ್ ಅಂಡ್ ವಾರ್ಡ್ ಆಫೀಸರ್ ಕಾರಂತ್ ಗೆ ದೂರು ಕೊಟ್ಟರೆ ಅವ್ನು ಅವನದ್ದೇ ಆದ ಸಮಸ್ಯೆಗಳನ್ನ ತೆರೆದಿಟ್ಟ. ಅವನಿಗೆ ಕೆಲಸಗಾರರು ಸಿಗೋದಿಲ್ಲವಂತೆ, ನೀರು ಬರೋದಿಲ್ಲವಂತೆ ಇನ್ನು ಏನೇನೋ. ಅಲ್ಲ ಸ್ವಾಮಿ ಅವನಿರೋದೆ ಇಂತಾದೆಲ್ಲ ಸರಿ ಮಾಡೋದಿಕ್ಕೆ. ನೋಡಿ ನಮ್ಮ ಗ್ರಹಚಾರ. ಹೋಗ್ಲಿ ಸಾಯಲಿ ಅಂತ ಮುಖ್ಯ ಕಟ್ಟಡ ದಲ್ಲಿ

ಹೋದಿರೋ ಅಲ್ಲಿಯೂ ಇದೆ ಹಣೆಬರಹ. ಪರವಾಗಿಲ್ಲ ಅನ್ನೋ ಮಟ್ಟಿಗೆ ಶುಚಿಯಾಗಿರೋದು ಬಿಟ್ಟರೆ, ಟಾಪ್ ೧೦ ರಲ್ಲಿರೋ ನಮ್ಮ ವಿದ್ಯಾಲಯದ ಘನತೆಗೆ ತಕ್ಕ ಹಾಗೆ ಇಲ್ಲ. ಆ ಕಟ್ಟಡದಲ್ಲಿ ಒಂದು ಕಡೆ ಇರೋ ಶೌಚಾಲಯ ದಲ್ಲಿ ಅಷ್ಟೇ ನೀರು ಬರೋದು ಇನ್ನೊಂದು ಕಡೆ ಇಲ್ಲ. ಅಲ್ಲ ಟಾಪ್ ೧೦ ಇನ್ಸ್ಟಿಟ್ಯೂಟ್ ದೇ ಈ ಕಥೆ ಇರಬೇಕಾದ್ರೆ ಬೇರೆಯವುಗಳ ಕಥೆ ಏನು?
ಆಮೇಲೆ ನೀವು ಕ್ಯಾಂಪಸ್ ನಲ್ಲಿ ಎಲ್ಲೇ ಹೋಗಿ ನಿಮಗೆ ಪ್ಲಾಸ್ಟಿಕ್ ರಾಶಿ ಸ್ವಾಗತಿಸುತ್ತೆ. ಈ ಹುಡುಗರಿಗೆ socially conscious engineering, green ಇಂಜಿನಿಯರ್, ಇನ್ನೂ ಏನೇನೋ ಹಾಳು-ಮೂಳು ಮಾಡೋಕೆ ಬರುತ್ತೆ ತಮ್ಮ ಪರಿಸರವನ್ನು

ಚೆನ್ನಾಗಿ ಇಟ್ಟುಕೊಳ್ಳಲಿಕ್ಕೆ ಬರೋದಿಲ್ಲ. ಎಲ್ಲ ಶೋ ಆಫ್, ಬಡ್ಡಿ ಮಕ್ಕಳು. ಒಂದ್ ಸಲ ನಮ್ಮ ವಿದ್ಯಾರ್ಥಿ ನಿಲಯ ಕಡೆ
ಯಿಂದ ಇರೋ ಪ್ರವೇಶ ದ್ವಾರದಿಂದ ಒಳಗಡೆ ಬರಬೇಕು ಗೊತ್ತಾಗುತ್ತೆ. ಅಲ್ಲಿ ನಿಮಗೆ ಕಾಣೋದು ಬರಿ ಪ್ಲಾಸ್ಟಿಕ್ ರಾಶಿ, ಸಿಗರೆಟ್ ತುಂಡುಗಳು, ಕಾರ್ಖಾನೆಗಳು ಬಿಡೋ ಹಾಗೆ ಹೊಗೆ ಬಿಡುತ್ತ ನಿಂತಿರ್ತಾರೆ ಬಡ್ಡೆತ್ತವು. ವಿದ್ಯಾಸಂಸ್ಥೆ ಗಳ ಹತ್ತಿರ ಮಾದಕವಸ್ತುಗಳನ್ನು ಮಾರುವುದು ನಿಷೇಧವಿದೆಯದರೂ ಅಲ್ಲಿರೋ ಅಂಗಡಿಯವನು ರಾಜಾರೋಷವಾಗಿ ಮಾರಾಟ ಮಾಡ್ತಾ ಇದಾನೆ. ಇದೆಲ್ಲ ನಮ್ಮ ಮಾನ್ಯ ಮುಖ್ಯ ನಿಲಯಪಾಲಕರ ದಪ್ಪ ಚರ್ಮ ದೊಳಕ್ಕೆ ನಾಟು
ವುದಿಲ್ಲ. ಇನ್ನು ಅಲ್ಲಿರುವ ಸ್ವಚ್ಚತೆಯ ಬಗ್ಗೆ ಮಾತನಾಡದಿರುವುದೇ ಕ್ಷೇಮ.
ಜೊತೆಗಿರುವ ಚಿತ್ರಗಳನ್ನೂ ಕೂಡ ನೋಡಿ. ಇಲ್ಲಿ ತೋರಿಸಿರುವ ಚಿತ್ರಗಳೆಲ್ಲವೂ ನಮ್ಮ ವಿಭಾಗ ದಲ್ಲಿ ಇರುವ ಶೌಚಾಲಯದವು.
ಪ್ಲಾಸ್ಟಿಕ್ ರಾಶಿ
No comments:
Post a Comment